ಜೆರುಸಲೆಮ್: ಇಸ್ರೇಲ್ ಮೇಲೆ ಪ್ಯಾಲೇಸ್ತೀನ್ ರಾಕೆಟ್ ದಾಳಿ ನಡೆಸಿದ್ದ ವೇಳೆ ಕೇರಳ ಮೂಲದ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದೀಗ ಆಕೆಯ ಕುಟುಂಬದ ಸಂಪೂರ್ಣ ಜವಾಬ್ದಾರಿ ಇಸ್ರೇಲ್ ಸರ್ಕಾರ ಹೊತ್ತುಕೊಂಡಿದೆ.
ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಸೌಮ್ಯ ಸಂತೋಷ ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಗೆ ಸಂಬಂದಿಸಿದಂತೆ ಮಾತನಾಡಿರುವ ಇಸ್ರೇಲ್ ಭಾರತದ ರಾಯಭಾರಿ ರೋನಿ ಯೆಡಿಡಿಯಾ ಕ್ಲೈನ್ ಮಾಹಿತಿ ಹಂಚಿಕೊಂಡಿದ್ದಾರೆ.
-
The family will be taken care of by the Israeli authorities in compensation for what happened, although nothing can ever compensate for the loss of a mother and wife: Rony Yedidia Clein, Israel's Deputy Envoy, to ANI on Kerala woman who died in Palestinian rocket strike on Israel pic.twitter.com/UTDjosmIjr
— ANI (@ANI) May 13, 2021 " class="align-text-top noRightClick twitterSection" data="
">The family will be taken care of by the Israeli authorities in compensation for what happened, although nothing can ever compensate for the loss of a mother and wife: Rony Yedidia Clein, Israel's Deputy Envoy, to ANI on Kerala woman who died in Palestinian rocket strike on Israel pic.twitter.com/UTDjosmIjr
— ANI (@ANI) May 13, 2021The family will be taken care of by the Israeli authorities in compensation for what happened, although nothing can ever compensate for the loss of a mother and wife: Rony Yedidia Clein, Israel's Deputy Envoy, to ANI on Kerala woman who died in Palestinian rocket strike on Israel pic.twitter.com/UTDjosmIjr
— ANI (@ANI) May 13, 2021
ಘಟನೆಯಲ್ಲಿ ಸಾವನ್ನಪ್ಪಿರುವ ಮಹಿಳೆಯ ಮೃತದೇಹವನ್ನ ಏರ್ಲೈನ್ಸ್ ಮೂಲಕ ಕೇರಳಕ್ಕೆ ಶುಕ್ರವಾರ ರಾತ್ರಿ ರವಾನೆ ಮಾಡಲಾಗುವುದು ಎಂದಿರುವ ಅವರು, ಕುಟುಂಬದ ಸಂಪೂರ್ಣ ಜವಾಬ್ದಾರಿ ನಮ್ಮ ಅಧಿಕಾರಿಗಳು ಹೊತ್ತುಕೊಳ್ಳಲಿದ್ದಾರೆ. ಘಟನೆಯ ನಷ್ಟ ಸರಿದೂಗಿಸಲು ಅಸಾಧ್ಯ. ಆದರೆ ಇದಕ್ಕೆ ಎಲ್ಲ ರೀತಿಯ ಪರಿಹಾರ ನೀಡಲು ನಾವು ಸಿದ್ಧ ಎಂದು ಅವರು ತಿಳಿಸಿದ್ದಾರೆ.
-
We've been in touch with the family. She was talking to her husband when this happened& I can imagine how horrendous it's for the husband. I can only sympathise with what he must be feeling: Israel's Dy Envoy, to ANI on Kerala woman who died in Palestinian rocket strike on Israel pic.twitter.com/GPFHhDuy9c
— ANI (@ANI) May 13, 2021 " class="align-text-top noRightClick twitterSection" data="
">We've been in touch with the family. She was talking to her husband when this happened& I can imagine how horrendous it's for the husband. I can only sympathise with what he must be feeling: Israel's Dy Envoy, to ANI on Kerala woman who died in Palestinian rocket strike on Israel pic.twitter.com/GPFHhDuy9c
— ANI (@ANI) May 13, 2021We've been in touch with the family. She was talking to her husband when this happened& I can imagine how horrendous it's for the husband. I can only sympathise with what he must be feeling: Israel's Dy Envoy, to ANI on Kerala woman who died in Palestinian rocket strike on Israel pic.twitter.com/GPFHhDuy9c
— ANI (@ANI) May 13, 2021
ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ: ರಾಕೆಟ್ ದಾಳಿಗೆ ಕೇರಳ ಮೂಲದ ಮಹಿಳೆ ಸಾವು
ಕೇರಳದ ಇಡುಕ್ಕಿ ಜಿಲ್ಲೆಯ ಸೌಮ್ಯಾ ಸಂತೋಷ್ ದಕ್ಷಿಣ ಇಸ್ರೇಲ್ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧೆಯೊಬ್ಬರ ಆರೈಕೆ ಕೆಲಸ ಮಾಡುತ್ತಿದ್ದರು. ಗಾಜಾ ಪಟ್ಟಿಯ ಗಡಿ ಪ್ರದೇಶವಾದ ಅಶ್ಕೆಲೋನ್ ಮೇಲೆ ಪ್ಯಾಲೆಸ್ತೀನಿಯನ್ ಬಂಡುಕೋರರು ನಡೆಸಿದ ದಾಳಿಯಿಂದ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ, ಮಹಿಳೆ ಪ್ರಾಣ ಕಳೆದುಕೊಂಡಿದ್ದಳು. ಕಳೆದ ಏಳು ವರ್ಷಗಳಿಂದ ಗಂಡನೊಂದಿಗೆ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದ ಸೌಮ್ಯಗೆ ಒಂಬತ್ತು ವರ್ಷದ ಮಗುವಿದೆ.