ETV Bharat / bharat

ಇಡಿ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ದೋಚಿದ ಖದೀಮರು... 60 ಲಕ್ಷ ನಗದು, 1 ಕೆಜಿ ಚಿನ್ನ ಕದ್ದು ಪರಾರಿ

ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು ರಾಜಸ್ಥಾನದ ಉದ್ಯಮಿಯೊಬ್ಬರ ಮನೆಯಲ್ಲಿದ್ದ 60 ಲಕ್ಷ ನಗದು, ಒಂದೂವರೆ ಕೆಜಿ ಚಿನ್ನ ಲೂಟಿ ಮಾಡಿದ ಘಟನೆ ಬುಧವಾರ ನಡೆದಿದೆ.

author img

By

Published : Aug 25, 2022, 10:46 AM IST

robbery-at-trader-house-in-rajasthan
ಚಿನ್ನ ದೋಚಿದ ಕಳ್ಳರು

ಜೈಪುರ: ಇಡಿ ಅಧಿಕಾರಿಗಳ ಸೋಗಿನಲ್ಲಿ ಕಾರಿನಲ್ಲಿ ಬಂದ ಐವರು ದರೋಡೆಕೋರರು ಉದ್ಯಮಿಯೊಬ್ಬರ ಮನೆ ದೋಚಿ ಪರಾರಿಯಾಗಿದ್ದಾರೆ. 60 ಲಕ್ಷ ನಗದು, 1.5 ಕೆಜಿ ಬಂಗಾರವನ್ನು ಲೂಟಿ ಮಾಡಿದ ಅಚ್ಚರಿಯ ಘಟನೆ ಬುಧವಾರ ನಡೆದಿದೆ. ದುಷ್ಕರ್ಮಿಗಳು ನುಗ್ಗಿದ ಬಳಿಕ ಮನೆಯಲ್ಲಿದ್ದವರಿಗೆ ಶಸ್ತ್ರಾಸ್ತ್ರಗಳನ್ನು ತೋರಿಸಿ ಒತ್ತೆಯಾಳುಗಳನ್ನಾಗಿ ಮಾಡಿಕೊಂಡು 1 ಗಂಟೆ ಕಾಲ ಇಡೀ ಮನೆಯನ್ನು ಜಾಲಾಡಿ ಹಣ, ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ.

ಏನ್​ ನಡೀತು: ರಾಜಸ್ಥಾನದ ಜೈಪುರದಲ್ಲಿ ವ್ಯಾಪಾರಿಯೊಬ್ಬರ ಮನೆಗೆ ಬುಧವಾರ ರಾತ್ರಿ ವೇಳೆ ಐವರು ಕಾರಿನಲ್ಲಿ ಆಗಮಿಸಿದ್ದಾರೆ. ತಮ್ಮನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಮನೆಗೆ ನುಗ್ಗಿದ್ದಾರೆ. ಮುಸುಕುಧಾರಿಗಳಾಗಿದ್ದ ದರೋಡೆಕೋರರು ಬಳಿಕ ಮನೆಯಲ್ಲಿದ್ದ 10 ಮಂದಿಗೆ ಬಂದೂಕು ತೋರಿಸಿ ಬೆದರಿಸಿದ್ದಾರೆ.

ಎಲ್ಲರ ಬಾಯಿಗೆ ಬಟ್ಟೆಯನ್ನು ತುರುಕಿ ಟೇಪ್​ ಅಂಟಿಸಿ ಕಿರುಚದಂತೆ ಮಾಡಿದ್ದಾರೆ. ಬಳಿಕ ಕೊಲೆ ಬೆದರಿಕೆ ಹಾಕಿ ಬೀರುವಿನ ಕೀ ಕೊಡಲು ಕೇಳಿದ್ದಾರೆ. ಕೀ ಪಡೆದು ಅಲ್ಲಿಯೇ ಇದ್ದ ಬಾಲಕನನ್ನು ಕರೆದೊಯ್ದು ಮನೆಯಲ್ಲಿದ್ದ ಎಲ್ಲ ಕೊಠಡಿಗಳನ್ನು ಜಾಲಾಡಿ ಹಣ, ಚಿನ್ನ, ಬೆಳ್ಳಿಯನ್ನು ದೋಚಿದ್ದಾರೆ.

ಸಿಸಿಟಿವಿಯೂ ಕದ್ದೊಯ್ದರು: 60 ಲಕ್ಷಕ್ಕೂ ಅಧಿಕ ನಗದು ಹಾಗೂ 1.5 ಕೆಜಿ ಚಿನ್ನಾಭರಣವನ್ನು ತುಂಬಿಕೊಂಡ ದುಷ್ಕರ್ಮಿಗಳು ಕೃತ್ಯ ಎಸಗಿದ್ದು ಗೊತ್ತಾಗಬಾರದು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್‌ಗಳನ್ನೂ ತಮ್ಮೊಂದಿಗೆ ತೆಗೆದುಕೊಂಡು ಪರಾರಿಯಾಗಿದ್ದಾರೆ. ಹೋಗುವ ಮುನ್ನ ಆರೋಪಿಗಳು ಮನೆಯವರ ಕೈಕಾಲುಗಳನ್ನು ಬಿಚ್ಚಿದ್ದಾರೆ.

ದರೋಡೆಕೋರರು ಪರಾರಿಯಾದ ಬಳಿಕ ವ್ಯಾಪಾರಿ ಮನೆಯವರು ಹೊರಗೆ ಓಡಿ ಬಂದು ಸಹಾಯಕ್ಕಾಗಿ ಕಿರುಚಿದ್ದಾರೆ. ನೆರೆಹೊರೆಯವರು ಇದನ್ನು ಕಂಡು ವಿಚಾರಿಸಿದಾಗ ವಿಷಯ ಗೊತ್ತಾಗಿದೆ. ತಕ್ಷಣವೇ ಪೊಲೀಸ್​ ಕಂಟ್ರೋಲ್​ ರೂಮ್​ಗೆ ಕರೆ ಮಾಡಿ ದೂರು ನೀಡಲಾಗಿದೆ.

ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ನಗರದ ಎಲ್ಲ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಆದರೆ, ಈವರೆಗೂ ದರೋಡೆಕೋರರ ಸುಳಿವು ಸಿಕ್ಕಿಲ್ಲ. ಸದ್ಯ ಪೊಲೀಸರು ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಓದಿ: ದುಬೈನಲ್ಲಿ ಶಿಕ್ಷೆಗೊಳಗಾದ ಆರೋಪಿಯಿಂದ ಬೆಂಗಳೂರಿನಲ್ಲಿ ಡ್ರಗ್ಸ್​ ಮಾರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.