ETV Bharat / bharat

ಬಂಧಿಸಲು ಹೋದಾಗ ಕಾನ್ಸ್​​ಟೇಬಲ್​​​​ ಕೈ ಕತ್ತರಿಸಿದ ದರೋಡೆಕೋರರು.. ಇಲ್ಲಿ ಪೊಲೀಸರಿಗೇ ಇಲ್ಲ ರಕ್ಷಣೆ!! - Robbers cut hand of policeman

ಪಂಜಾಬ್​ನ ಭಟಿಂಡಾದಲ್ಲಿ ದರೋಡೆಕೋರರ ಮೇಲೆ ದಾಳಿಗೆ ಹೋದಾಗ, ಪ್ರತಿದಾಳಿ ನಡೆಸಿದ ದುಷ್ಕರ್ಮಿಗಳು ಪೊಲೀಸ್​ ಸಿಬ್ಬಂದಿಯ ಕೈ ಕತ್ತರಿಸಿದ ಆಘಾತಕಾರಿ ಘಟನೆ ನಡೆದಿದೆ. ತಪ್ಪಿಸಿಕೊಂಡ ಆರೋಪಿಗಳಿಗಾಗಿ ತಲಾಶ್ ನಡೆಯುತ್ತಿದೆ.

ಬಂಧಿಸಲು ಹೋದಾಗ ಕಾನ್​ಸ್ಟೇಬಲ್​ ಕೈ ಕತ್ತರಿಸಿದ ದರೋಡೆಕೋರರು

author img

By

Published : Aug 3, 2023, 11:12 AM IST

ಭಟಿಂಡಾ: ಪಂಜಾಬ್​ನಲ್ಲಿ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಆರೋಪಿಗಳ ಕುಕೃತ್ಯಗಳು ಎಗ್ಗಿಲ್ಲದೇ ಸಾಗುತ್ತಿವೆ. ಅದು ಎಷ್ಟರಮಟ್ಟಿಗೆ ಅಂದ್ರೆ, ರಕ್ಷಣೆ ನೀಡುವ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ದಾಳಿ ಮಾಡುವ ಹಂತಕ್ಕೆ ಹೋಗಿದ್ದಾರೆ. ಇಂಥದ್ದೊಂದು ಘಟನೆ ಭಟಿಂಡಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಭಟಿಂಡಾದ ಸಂಗತ್​ಮಂಡಿ ಪ್ರದೇಶದಲ್ಲಿ ದರೋಡೆ ನಡೆಸಿದ್ದ ಆರೋಪಿಗಳನ್ನು ಸೆರೆ ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ದಾಳಿ ನಡೆಸಿ, ಓರ್ವ ಸಿಬ್ಬಂದಿಯ ಕೈಯನ್ನು ಕತ್ತರಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಏನಾಯ್ತು?: ಭಟಿಂಡಾ ಜಿಲ್ಲೆಯ ಸಂಗತ್ ಮಂಡಿ ವ್ಯಾಪ್ತಿಯ ಕಲ್ಜರಾಣಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರನ್ನು ದರೋಡೆಕೋರರು ಲೂಟಿ ಮಾಡಿದ್ದರು. ಅಳುತ್ತಾ ಕುಳಿತಿದ್ದ ವ್ಯಕ್ತಿಯನ್ನು ಪೊಲೀಸರು ಕಂಡು ವಿಚಾರಿಸಿದಾಗ ದುಷ್ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿದೆ. ತಕ್ಷಣವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ದರೋಡೆಕೋರರನ್ನು ಬೆನ್ನತ್ತಿ ಹೋಗಿದ್ದಾರೆ.

ಕಳ್ಳರನ್ನು ಹಿಡಿಯಲು ವಾಹನ ಬೆನ್ನತ್ತಿ ಹಿಡಿಯಲು ಹೋದಾಗ, ಈ ವೇಳೆ ತಿರುಗಿ ಬಿದ್ದ ದರೋಡೆಕೋರರು ಪೊಲೀಸರ ಮೇಲೆಯೇ ಮರು ದಾಳಿ ಮಾಡಿದ್ದಾರೆ. ಇದರಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯು ಕೈ ಕತ್ತರಿಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸಿಬ್ಬಂದಿ ನೆಲಕ್ಕುರುಳಿದ್ದಾರೆ. ಬಳಿಕ ದುಷ್ಕರ್ಮಿಗಳು ಅವರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡಿದ್ದ ಪೊಲೀಸ್​ ಸಿಬ್ಬಂದಿ ಕಿಕಾರ್ ಸಿಂಗ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆ ತಿಳಿದ ತಕ್ಷಣ ನಗರ ಡಿಎಸ್​ಪಿ ವಿಶ್ವಜಿತ್ ಸಿಂಗ್ ಮಾನ್ ಆಸ್ಪತ್ರೆಗೆ ಆಗಮಿಸಿ ಗಾಯಾಳುವನ್ನು ಭೇಟಿ ಮಾಡಿದರು.

ಓರ್ವ ಆರೋಪಿ ಬಂಧನ: ಪೊಲೀಸರ ಮೇಲೆಯೇ ದಾಳಿ ಮಾಡಿದ ದರೋಡೆಕೋರರ ಬಂಧನಕ್ಕೆ ಜಾಲ ಬೀಸಿದ ಪೊಲೀಸರು, ಕಾರು ಬಿಟ್ಟು ಹಳ್ಳಿಯೊಂದರ ಕಡೆ ಹೋಗಿದ್ದನ್ನು ಗುರುತಿಸಿದ್ದಾರೆ. ಅದರ ಜಾಡನ್ನೇ ಹಿಡಿದು ಹೊರಟು ಗ್ರಾಮಸ್ಥರ ಮಾಹಿತಿ ಮೇರೆಗೆ ಓರ್ವನನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕಾಗಿ ಸೆರೆ ಸಿಕ್ಕವರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಠಾಣೆ ಮೇಲೆ ದಾಳಿ ಘಟನೆ: ಪಂಜಾಬ್​ ಪ್ರತ್ಯೇಕತಾವಾದಿ ಗುಂಪಾದ ಅಮೃತ್​​ಪಾಲ್​ ಸಿಂಗ್​ ನೇತೃತ್ವದ ವಾರಿಸ್​ ಪಂಜಾಬ್​ ದಾಳಿಕೋರರು ಈ ಹಿಂದೆ ಪೊಲೀಸ್​ ಠಾಣೆಯ ಮೇಲೆ ದಾಳಿ ಮಾಡಿ ಬಂಧನಕ್ಕೊಳಗಾಗಿದ್ದ ಸಂಘಟನೆಯ ವ್ಯಕ್ತಿಯನ್ನು ಬಿಡಿಸಿಕೊಂಡು ಹೋಗಿದ್ದರು. ಅಂದು ನಡೆದ ಘರ್ಷಣೆಯಲ್ಲಿ ಸಿಂಗ್​ ಬೆಂಬಲಿಗರು ಪೊಲೀಸರ ಮೇಲೆಯೇ ದಾಳಿ ಮಾಡಿದ್ದರು.

ಇದನ್ನೂ ಓದಿ; ಡ್ರಗ್ಸ್​ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರ ಮೇಲೆ ಕಲ್ಲು ತೂರಾಟ, ವಾಹನ ಜಖಂ: ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.