ETV Bharat / bharat

ಕನಸಾಗಿಯೇ ಉಳಿದ ರಸ್ತೆ ಸುರಕ್ಷತೆ! - ರಸ್ತೆ ಅಪಘಾತ

ನಿತ್ಯ ದೇಶದಲ್ಲಿ ನಡೆಯುವ ವಿವಿಧ ರಸ್ತೆ ಅಪಘಾತಗಳಲ್ಲಿ ಸರಾಸರಿ 415 ಜನರು ಸಾಯುತ್ತಿದ್ದಾರೆ. ಅದೇ ರೀತಿ ಈ ಅಪಘಾತಗಳಿಂದಾಗಿ ಪ್ರತಿವರ್ಷ ಮೂರೂವರೆ ಲಕ್ಷಕ್ಕೂ ಹೆಚ್ಚು ಜನ ದೈಹಿಕವಾಗಿ ಅಂಗ ವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಜಗತ್ತಿನ ಒಟ್ಟು ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳಲ್ಲಿ ಶೇಕಡಾ 11ರಷ್ಟು ಸಾವುಗಳು ಭಾರತದಲ್ಲಿ ಸಂಭವಿಸುತ್ತಿವೆ.

Road safety remains a pipe dream
ಕನಸಾಗಿಯೇ ಉಳಿದ ರಸ್ತೆ ಸುರಕ್ಷತೆ
author img

By

Published : Feb 17, 2021, 11:53 AM IST

ಗುರಿ ತಲುಪುತ್ತೇವೆ ಎಂಬ ಸಂತಸದ ಭರವಸೆಯೊಂದಿಗೆ ನಮ್ಮ ಪ್ರತಿಯೊಂದು ಪಯಣವೂ ಪ್ರಾರಂಭವಾಗುತ್ತದೆ. ಹೀಗಿರುವಾಗ, ಅಂತಹ ಒಂದು ಪ್ರಯಾಣದ ಸಮಯದಲ್ಲಿ ನಮ್ಮ ಬದುಕೇ ಕೊನೆಯಾಗುವುದಕ್ಕಿಂತ ದೊಡ್ಡ ದುರಂತ ಇನ್ನೊಂದಿದೆಯೆ? ರಸ್ತೆ ಅಪಘಾತವು ದೇಶದಲ್ಲಿ ಲಕ್ಷಾಂತರ ಕುಟುಂಬಗಳನ್ನು ನಾಶ ಮಾಡುತ್ತಿರುವುದರಿಂದ ರಸ್ತೆ ಸುರಕ್ಷತೆ ಎಂಬುದು ನಮ್ಮ ದೇಶದಲ್ಲಿ ಕೇವಲ ಒಂದು ಹುಸಿ ಆದರ್ಶವೇನೋ ಎಂದು ಅನಿಸತೊಡಗಿದೆ.

ಈ ಪರಿಸ್ಥಿತಿಯ ಮುಂದುವರಿಕೆಯೇನೋ ಎಂಬಂತೆ ಇತ್ತೀಚೆಗೆ ಆಂಧ್ರಪ್ರದೇಶದ ಅರಕು ಎಂಬ ಪ್ರವಾಸಿ ತಾಣಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದ ಬಸ್ಸೊಂದು ವಿಶಾಖಪಟ್ಟಣಂ ಬಳಿ ಅಪಾಯಕಾರಿ ತಿರುವೊಂದನ್ನು ದಾಟುವ ಪ್ರಯತ್ನದಲ್ಲಿ ಅಂದಾಜು 200 ಅಡಿ ಆಳಕ್ಕೆ ಬಿದ್ದುಬಿಟ್ಟಿತು. ಈ ದುರಂತದಲ್ಲಿ ನಾಲ್ಕು ಜನರು ಮೃತರಾಗಿ 20 ಜನ ತೀವ್ರವಾಗಿ ಗಾಯಗೊಂಡರು. ಬಲಿಯಾದ ಎಲ್ಲರೂ ತೆಲಂಗಾಣ ಮೂಲದವರು. ಇಂತಹುದ್ದೇ ಯಥಾವತ್ ಮತ್ತೊಂದು ಪ್ರಕರಣದಲ್ಲಿ, ಅದೇ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ರಸ್ತೆ ಅಪಘಾತದಲ್ಲಿ 14 ಜನರು ಮೃತಪಟ್ಟರು. ಕಳೆದ ತಿಂಗಳು ಕರ್ನಾಟಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ 12 ಬಾಲಕಿಯರು ಸಾವನ್ನಪ್ಪಿದ್ದರು. ಗುಜರಾತ್‌ನಲ್ಲಿ ನಡೆದ ಪ್ರಕರಣದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ 15 ಕಾರ್ಮಿಕರು ವೇಗವಾಗಿ ಚಲಿಸುತ್ತಿದ್ದ ವಾಹನದ ಅಡಿಗೆ ಸಿಲುಕಿ ಮೃತಪಟ್ಟರು. ಈ ಭೀಕರ ಅಪಘಾತದಿಂದ ಉಂಟಾದ ಆಘಾತದಿಂದ ದೇಶವು ಚೇತರಿಸಿಕೊಳ್ಳುವ ಮೊದಲು, ಪಶ್ಚಿಮ ಬಂಗಾಳದ ಅಪಘಾತದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದರು. ಈ ಅಪಘಾತಗಳ ಪಟ್ಟಿ ಅಂತ್ಯವಿಲ್ಲದೇ ಮುಂದುವರಿಯುತ್ತಿದೆ.

ಪ್ರತಿದಿನ ದೇಶದಲ್ಲಿ ನಡೆಯುವ ವಿವಿಧ ರಸ್ತೆ ಅಪಘಾತಗಳಲ್ಲಿ ಸರಾಸರಿ 415 ಜನರು ಸಾಯುತ್ತಿದ್ದಾರೆ. ಅದೇ ರೀತಿ ಈ ಅಪಘಾತಗಳಿಂದಾಗಿ ಪ್ರತಿವರ್ಷ ಮೂರೂವರೆ ಲಕ್ಷಕ್ಕೂ ಹೆಚ್ಚು ಜನ ದೈಹಿಕವಾಗಿ ವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ವಿಶ್ವದ ಒಟ್ಟು ವಾಹನಗಳಲ್ಲಿ ಭಾರತದ ಪಾಲು ಕೇವಲ ಶೇಕಡಾ 1ರಷ್ಟಿದೆ. ಆದರೆ, 6 ಪಟ್ಟು ರಸ್ತೆ ಅಪಘಾತಗಳು ನಮ್ಮ ದೇಶದಲ್ಲಿ ನಡೆಯುತ್ತವೆ. ಒಟ್ಟಾರೆ ಜಗತ್ತಿನ ಒಟ್ಟು ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳಲ್ಲಿ ಶೇಕಡಾ 11ರಷ್ಟು ಸಾವುಗಳು ಭಾರತದಲ್ಲಿ ಸಂಭವಿಸುತ್ತಿವೆ.

ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ಒಂದೇ ನೆಲೆಗಟ್ಟಿನಲ್ಲಿ ನಿಂತಿವೆ ಎನ್ನಬಹುದು. ಆದಾಗ್ಯೂ, ಜಪಾನ್‌ನ ರಸ್ತೆ ಅಪಘಾತಗಳಲ್ಲಿ ವರ್ಷವೊಂದಕ್ಕೆ ಸಾಯುವವರ ಪ್ರಮಾಣ 5000ಕ್ಕಿಂತಲೂ ಕಡಿಮೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ. ರಸ್ತೆ ಸುರಕ್ಷತಾ ಸಾಪ್ತಾಹಿಕಗಳ ವೀಕ್ಷಣೆ 23 ವರ್ಷಗಳ ಹಿಂದೆ ಪ್ರಾರಂಭವಾಯಿತಾದರೂ ಈ ಅವಧಿಯಲ್ಲಿ ರಸ್ತೆ ಅಪಘಾತಗಳಲ್ಲಿ ಸಂಭವಿಸಿದ ಸಾವುಗಳ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ಜನರ ಜೀವನ ಹಕ್ಕಿನ ಮೇಲೆ ಇದು ಒಂದು ದೊಡ್ಡ ಸವಾಲು ಎನಿಸಿದೆ. ರಸ್ತೆ ಅಪಘಾತಗಳು ಕೋವಿಡ್ ಸಾಂಕ್ರಾಮಿಕಗಿಂತ ಅಪಾಯಕಾರಿ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಆದರೆ, ಪರಿಸ್ಥಿತಿಯನ್ನು ಸುಧಾರಿಸಲು ಅದು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆಯೇ?

2011ರಿಂದ 2020ರವರೆಗಿನ ಅವಧಿಯನ್ನು ರಸ್ತೆ ಅಪಘಾತಗಳ ವಿರುದ್ಧ ಕ್ರಮ ಕೈಗೊಳ್ಳುವ ದಶಕವೆಂದು ವಿಶ್ವಸಂಸ್ಥೆ ಘೋಷಿಸಿತ್ತು. ಈ ಅವಧಿಯಲ್ಲಿ ಜಗತ್ತಿನಾದ್ಯಂತ ರಸ್ತೆ ಅಪಘಾತಗಳಿಗೆ ಬಲಿಯಾಗಬಹುದಾದ ಕನಿಷ್ಠ 50 ಲಕ್ಷ ಜೀವಗಳನ್ನು ರಕ್ಷಿಸುವ ಗುರಿಯನ್ನು ಇದು ಹೊಂದಿತ್ತು. 2020ರ ವೇಳೆಗೆ ರಸ್ತೆ ಅಪಘಾತ ಮರಣ ಪ್ರಮಾಣವನ್ನು ಶೇಕಡಾ 50ರಷ್ಟು ಕಡಿತಗೊಳಿಸುವ ಗುರಿಯನ್ನು 2015ರ ಬ್ರೆಸಿಲಿಯಾ ಘೋಷಣೆಯು ಘೋಷಿಸಿತ್ತು. ಆದರೆ, ಈ ಉದ್ದೇಶವನ್ನು ಗಾಳಿಗೆ ತೂರಲಾಯಿತು. ಇದೇ ಅವಧಿಯಲ್ಲಿ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 13 ಲಕ್ಷ ಸಾವುಗಳು ಸಂಭವಿಸಿವೆ ಹಾಗೂ 50 ಲಕ್ಷ ಜನ ಜೀವಚ್ಛವಗಳಂತಾಗಿದ್ದಾರೆ.

ದೇಶದ ರಸ್ತೆ ಜಾಲದಲ್ಲಿ ಶೇಕಡಾ 5ಕ್ಕಿಂತ ಕಡಿಮೆ ಪ್ರಮಾಣ ಹೊಂದಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿಯೇ ಶೇಕಡಾ 61ಕ್ಕಿಂತ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಹೀಗೆ ಸಾಯುವವರ ಪೈಕಿ ಶೇಕಡಾ 70ಕ್ಕಿಂತ ಹೆಚ್ಚು ಜನ 18 ರಿಂದ 45 ವರ್ಷದ ಒಳಗಿನವರು. ಭಾರತೀಯ ಸಮಾಜದ ಮೇಲೆ ರಸ್ತೆ ಅಪಘಾತಗಳು ಉಂಟು ಮಾಡುತ್ತಿರುವ ಪರಿಣಾಮಗಳನ್ನು ನಿರ್ಧರಿಸಲು ವಿಶ್ವ ಬ್ಯಾಂಕ್ ಒಂದು ಅಧ್ಯಯನ ನಡೆಸಿತು. ಆ ಪ್ರಕಾರ, ರಸ್ತೆ ಅಪಘಾತದಿಂದಾಗಿ ಶೇಕಡಾ 75ರಷ್ಟು ಬಡ ಕುಟುಂಬಗಳು ತೀವ್ರ ಆದಾಯ ನಷ್ಟವನ್ನು ಅನುಭವಿಸಿವೆ ಎಂಬ ನಿರ್ಣಯಕ್ಕೆ ಬರಲಾಗಿದೆ. ರಸ್ತೆ ಅಪಘಾತಗಳು ಉಂಟು ಮಾಡಿರುವ ಈ ನಷ್ಟ ದೇಶದ ಜಿಡಿಪಿಗೆ (ಒಟ್ಟು ರಾಷ್ಟ್ರೀಯ ಉತ್ಪನ್ನ) ಅಂದಾಜು ರೂ. 7 ಲಕ್ಷ ಕೋಟಿಯಷ್ಟು. ಆದ್ದರಿಂದ ಈ ವಿಷಯವನ್ನು ಇನ್ನು ಮುಂದೆ ಹಗುರವಾಗಿ ಪರಿಗಣಿಸುವಂತಿಲ್ಲ.

ತಂತ್ರಜ್ಞಾನದ ಸೂಕ್ತ ಬಳಕೆ, ಜಾಗೃತಿ ಮೂಡಿಸುವ ಪ್ರಚಾರ, ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ ಮತ್ತು ತುರ್ತು ಸುರಕ್ಷತಾ ಕ್ರಮಗಳಂತಹ ವಿಧಾನಗಳನ್ನು ಬಲಪಡಿಸದ ಹೊರತು, ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಅತಿಯಾದ ವೇಗದಲ್ಲಿ ಚಾಲನೆ ಮಾಡುವ ಪ್ರವೃತ್ತಿಯೇ ಅಪಘಾತಗಳ ಹಿಂದಿನ ಕಾರಣ ಎಂದು ಗುರುತಿಸಲಾಗಿರುವುದರಿಂದ, ಚಾಲಕರಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸುವುದು, ಅಪಾಯಕಾರಿ ರಸ್ತೆಗಳ ಓರೆಕೋರೆಗಳನ್ನು ಸರಿಪಡಿಸುವುದು ಮತ್ತು ಇತರ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಮದ್ಯದಂಗಡಿಗಳನ್ನು ಮುಚ್ಚುವುದು ಸಹ ಮುಖ್ಯವಾಗಿದೆ.

ಸರ್ಕಾರಗಳು, ನಾಗರಿಕರು ಮತ್ತು ನಾಗರಿಕ ಸಮಾಜದ ಸಂಘಟಿತ ಪ್ರಯತ್ನಗಳ ಜೊತೆಗೆ ರಸ್ತೆ ಸುರಕ್ಷತೆಯನ್ನು ಸಾಮಾಜಿಕ ಜವಾಬ್ದಾರಿಯನ್ನಾಗಿ ಪರಿವರ್ತಿಸಿದಾಗ ಮಾತ್ರ ಸುರಕ್ಷಿತ ಪ್ರಯಾಣ ಸಾಧ್ಯವಾಗಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.