ತಿರುಪತಿ (ಆಂಧ್ರಪ್ರದೇಶ): ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕರ್ನಾಟಕ ಮೂಲದ ಇಬ್ಬರು ಮೃತಪಟ್ಟು, ಇತರ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಬಸವರಾಜು ಮತ್ತು ಮಂಜು ಎಂದು ಗುರುತಿಸಲಾಗಿದೆ.
ಇಲ್ಲಿನ ಚಿಲ್ಲಕೂರು ಮಂಡಲದ ವಾರಗಲಿ ಕ್ರಾಸ್ ರಸ್ತೆಯಲ್ಲಿ ಈ ದುರ್ಘಟನೆ ಜರುಗಿದೆ. ಕಾರಿನಲ್ಲಿದ್ದ ಗಿರೀಶ್, ಶಿವರಾಮ ಕೃಷ್ಣ ಮತ್ತು ವೆಂಕಟೇಶ್ ಎಂಬ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನೆಲ್ಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಅಪಘಾತಕ್ಕೀಡಾದ ಕಾರಿನ ಸಂಖ್ಯೆ ಕೆಎ 36 - ಬಿ 5707 ಎಂದು ಗೊತ್ತಾಗಿದೆ. ಅಲ್ಲದೇ, ಕಾರಿನಲ್ಲಿ ನಾಯ್ಡುಪೇಟೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ: ಅನಾರೋಗ್ಯದಿಂದ ಅತ್ತಿಗೆ, ಅಪಘಾತದಲ್ಲಿ ಮೈದುನ ಸಾವು