ETV Bharat / bharat

ಮದುವೆಯಲ್ಲಿ ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಹರಿದ ಟ್ರಕ್​.. ಮೂವರ ಸಾವು - ಐವರಿಗೆ ಗಾಯ!

author img

By

Published : Mar 26, 2022, 11:38 AM IST

ಮದುವೆ ಸಮಾರಂಭ ನಡೆಸುತ್ತಿದ್ದ ಮಹಿಳೆಯರ ಮೇಲೆ ಟ್ರಕ್ ಹರಿದಿದ್ದು, ಇದರಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿರುವ ದಾರುಣ ಘಟನೆ ಬಿಹಾರದ ಸರನ್​ ಜಿಲ್ಲೆಯಲ್ಲಿ ನಡೆದಿದೆ.

Road Accident In Chapra Several Died in Bihar  Chapra Road Accident  Truck hit to married function in Bihar  Bihar crime news  ಬಿಹಾರದಲ್ಲಿ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ಮಹಿಳೆ ಮೇಲೆ ಹರಿದ ಟ್ರಕ್  ಬಿಹಾರದಲ್ಲಿ ಭೀಕರ ರಸ್ತ ಅಪಘಾತ  ಬಿಹಾರದಲ್ಲಿ ಮದುವೆ ಸಮಾರಂಭಕ್ಕಿ ನುಗ್ಗಿದ ಟ್ರಕ್​ ಬಿಹಾರ ಅಪರಾದ ಸುದ್ದಿ
ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಹರಿದ ಟ್ರಕ್

ಸರನ್ (ಬಿಹಾರ): ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅನಿಯಂತ್ರಿತ ಟ್ರಕ್​ವೊಂದು ಅನೇಕ ಮಹಿಳೆಯರ ಮೇಲೆ ಹರಿದಿದೆ. ಇದರಿಂದಾಗಿ 3 ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಮಹಿಳೆಯರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಅಪಘಾತದ ಬಳಿಕ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ರಣ ಭೀಕರ ಅಪಘಾತ : ಇಲ್ಲಿನ ಛಾಪ್ರಾದ ಮಶ್ರಕ್‌ ಗ್ರಾಮದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ಮದುವೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಆಗ ಏಕಾಏಕಿ ಅನಿಯಂತ್ರಿತ ಟ್ರಕ್​ವೊಂದು ಮದುವೆ ಸಮಾರಂಭದಲ್ಲಿ ನೆರೆದಿದ್ದ ಮಹಿಳೆಯರ ಮೇಲೆ ಹರಿದಿದೆ. ಈ ಅಪಘಾತದಲ್ಲಿ 3 ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಶೋಕ ಸಾಗರದಲ್ಲಿ ಮುಳುಗಿದ ಮದುವೆ ಮಂಟಪ: ಈ ಭೀಕರ ರಸ್ತೆ ಅಪಘಾತ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸುಖ ಸಾಗರದಲ್ಲಿ ತೇಲುತ್ತಿದ್ದ ಮದುವೆ ಸಂಭ್ರಮ ಕ್ಷಣಮಾತ್ರದಲ್ಲಿ ಶೋಕದಲ್ಲಿ ಮುಳುಗಿತು.

ಓದಿ: ಮಗಳ ಮೃತದೇಹ 10 ಕಿ.ಮೀ ಹೊತ್ತು ಸಾಗಿದ ತಂದೆ.. ಕುಟಂಬದವರನ್ನ ಮನವೋಲಿಸಬೇಕಾಗಿತ್ತೆಂದ ಸಚಿವ!

ಮೃತರು ಮತ್ತು ಗಾಯಗೊಂಡವರ ಹೆಸರುಗಳು: ಮೃತರನ್ನು ದುಮ್ಡುಮಾ ಗ್ರಾಮದ ನಿವಾಸಿ ರೋಸಾ ದಿನ್ ಮಿಯಾನ್ ಅವರ ಪತ್ನಿ ಸೈರುಲ್ ಬೀಬಿ (50), ಭೋಲಾ ಮಿಯಾನ್ ಅವರ ಪತ್ನಿ ನಜ್ಮಾ ಬೀಬಿ (45), ನಿವಾಸಿ ನಾಜಿಮ್ ಮಿಯಾನ್ ಅವರ ಪತ್ನಿ ಸೈಶಾ ಬೇಗಂ (50) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರು ಬನಿಯಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಪುರ್ ಕರಹ್ ಗ್ರಾಮದ ನಿವಾಸಿಗಳಾದ ಲುಕ್ಮಾನ್ ಮಿಯಾನ್ ಅವರ 50 ವರ್ಷದ ಪತ್ನಿ ಖೈರಾ ಬೀಬಿ, ಲಿಯಾಕತ್ ಹುಸೇನ್ ಅವರ 40 ವರ್ಷದ ಪತ್ನಿ ನೂರ್ಜಾ ಖಾತುನ್, ಇಸ್ಲಾಂ ಮಿಯಾನ್ ಅವರ 35 ವರ್ಷದ ಪತ್ನಿ ಮನಜಾ ಖಾತುನ್ ಎಂದು ಗುರುತಿಸಲಾಗಿದೆ.

ಡೊಮ್ಕಾಚ್ ನೃತ್ಯ ಮಾಡುತ್ತಿದ್ದ ಮಹಿಳೆಯರು: ಮಶ್ರಕ್ ಪೊಲೀಸ್ ಠಾಣೆ ವ್ಯಾಪ್ತಿಯ ದುಮ್ಡುಮಾ ಶಿವ ದೇವಸ್ಥಾನದ ಬಳಿ ಶುಕ್ರವಾರ ತಡರಾತ್ರಿ ರಸ್ತೆಬದಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ, ಡೊಮ್ಕಾಚ್ ನೃತ್ಯ ಮಾಡುತ್ತಿದ್ದ ಮಹಿಳೆಯರ ಗುಂಪಿನ ಮೇಲೆ ಟ್ರಕ್ ಹರಿದಿದೆ. ಈ ಬಗ್ಗೆ ಗಾಯಗೊಂಡವರ ಸಂಬಂಧಿಕರು ಮಾತನಾಡಿ, ಲುಕ್ಮಾನ್ ಹುಸೇನ್ ಅವರ ಮಗನ ಮದುವೆಗೆ ಗ್ರಾಮದ ಜನರೆಲ್ಲರೂ ಪಚೌರ್‌ನ ಟಿಕಮ್‌ಗಢಕ್ಕೆ ಹೋಗಿದ್ದರು. ಅದೇ ಹೊತ್ತಿಗೆ ಮನೆಯ ಹೆಂಗಸರು ಡೊಮ್ಕಾಚ್​ ನೃತ್ಯ ಮಾಡುತ್ತ ಸಂಭ್ರಮಿಸುತ್ತಿದ್ದರು. ಅದೇ ವೇಳೆಗೆ ಸಿವಾನ್ ಕಡೆಯಿಂದ ಬಂದ ಟ್ರಕ್ ಇವರ ಮೇಲೆ ಹರಿತು ಎಂದು ಹೇಳಿದರು.

ಓದಿ: ರಾಜ್ಯದಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ

ಮರಣೋತ್ತರ ಪರೀಕ್ಷೆ: ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಜಾಲಬೀಸಲಾಗಿದೆ. ದೊಡ್ಡ ಅಪಾಘಾತದಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.