ಬೇತಂಚೆರ್ಲಾ: ಆಂಧ್ರಪ್ರದೇಶದ ನಂದ್ಯಾಳ ಜಿಲ್ಲೆಯ ಬೇತಂಚೆರ್ಲಾದಲ್ಲಿ ಭಾನುವಾರ ಆರ್‌ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ರಸ್ತೆ ಅಪಘಾತ ನಡೆದಿದೆ. ಅಪಘಾತದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯ ಕಾಲಿನ ಮೇಲೆ ಆರ್‌ಟಿಸಿ ಬಸ್ ಅರ್ಧಗಂಟೆಗೂ ಹೆಚ್ಚು ಕಾಲ ನಿಂತಿದ್ದು, ಇದರಿಂದ ನರಕಯಾತನೆ ಅನುಭವಿಸಿದ ಸಂತ್ರಸ್ತ ಮಹಿಳೆ ಸಾವನ್ನಪ್ಪಿದ್ದಾಳೆ.
ಸಿ.ಬೆಳಗಲ್ ಮಂಡಲದ ಕೃಷ್ಣನದೊಡ್ಡಿಯ ಗೊಲ್ಲ ಮಡ್ಡಿಲೇಟಿ ಮತ್ತು ಗೋವಿಂದಮ್ಮ ಬೇತಂಚೆರ್ಲಾದ ಅಯ್ಯಲಚೆರುವಿನಲ್ಲಿರುವ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ಸಂಜೆ ಮಡ್ಡಿಲೇಟಿ ಹಾಗೂ ಗೋವಿಂದಮ್ಮ ಆಯಾಲ ಕೊಳದಿಂದ ದ್ವಿಚಕ್ರ ವಾಹನದಲ್ಲಿ ಊರಿಗೆ ಹೋಗುತ್ತಿದ್ದಾಗ ಕರ್ನೂಲ್‌ನಿಂದ ಪ್ರದ್ದುಟೂರಿಗೆ ಹೋಗುತ್ತಿದ್ದ ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯ ಪರಿಣಾಮ ಮಡ್ಡಿಲೇಟಿ ಅವರು ಗಂಭೀರವಾಗಿ ಗಾಯಗೊಂಡರೆ, ಗೋವಿಂದಮ್ಮನ ಕಾಲು ಬಸ್ನ ಚಕ್ರದಡಿ ಸಿಲುಕಿತ್ತು. ಇದನ್ನು ನೋಡಿದ ಚಾಲಕ ಬಸ್ ಬಿಟ್ಟು ಓಡಿ ಹೋಗಿದ್ದಾನೆ. ಇದರಿಂದ ಅರ್ಧ ಗಂಟೆ ಗೋವಿಂದಮ್ಮ ಚಿತ್ರಹಿಂಸೆಯಿಂದ ನರಳಾಡಿದ್ದಾರೆ. ನಂತರ ಚಿಕಿತ್ಸೆಗಾಗಿ ಪಿಎಚ್‌ಸಿಗೆ ಕರೆದೊಯ್ಯುವಾಗ ಸಂತ್ರಸ್ತೆ ಸಾವನ್ನಪ್ಪಿದರು.
ಇದನ್ನೂ ಓದಿ: ಒಡಿಶಾದ ಜಾಜ್‌ಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು: ಇಬ್ಬರು ಸಾವು