ರಾಜ್‌ಕೋಟ್(ಗುಜರಾತ್): ಕೋವಿಡ್ ಭೀತಿಯ ನಡುವೆಯೂ ಲಸಿಕೆಯ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ. ಈ ಕಾರಣದಿಂದಾಗಿ ಸಾರ್ವಜನಿಕರನ್ನು ಲಸಿಕೆ ಪಡೆದುಕೊಳ್ಳಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಎರಡನೇ ಡೋಸ್ ತೆಗೆದುಕೊಂಡವರಿಗೆ ಲಕ್ಕಿ ಡ್ರಾ ಮೂಲಕ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ಸ್ಮಾರ್ಟ್‌ಫೋನ್ ನೀಡಲು ನಿರ್ಧರಿಸಿದೆ.
ಡಿಸೆಂಬರ್‌ನೊಳಗೆ ಲಸಿಕೆಯ ಎರಡನೇ ಡೋಸ್ ಪಡೆದವರಿಗೆ ಲಕ್ಕಿ ಡ್ರಾ ಮೂಲಕ 50,000 ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ನೀಡಲಾಗುವುದು ಎಂದು ಆರ್‌ಎಂಸಿ ಆಯುಕ್ತ ಅಮಿತ್ ಅರೋರಾ ತಿಳಿಸಿದರು.
ಇದನ್ನೂ ಓದಿ: ಗುಜರಾತ್ ಶಾಲೆಯಲ್ಲಿ ಮಕ್ಕಳಿಗೆ ನೀರಜ್ ಚೋಪ್ರಾ ತರಬೇತಿ: ವಿಡಿಯೋ ಹಂಚಿಕೊಂಡ ಮೋದಿ
ನಗರದ ಯಾವುದೇ ನಾಗರಿಕರು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಆರ್‌ಎಂಸಿ ಉದ್ದೇಶ. ಹೀಗಾಗಿ ಈ ಯೋಜನೆೆಗೆ ಮುಂದಾಗಿದ್ದೇವೆ. ಪರಿಣಾಮ, ಹೆಚ್ಚೆಚ್ಚು ಜನರು ಜಾಗೃತರಾಗುತ್ತಾರೆ ಮತ್ತು ಲಸಿಕೆಯ ಮೊದಲ ಮತ್ತು ಎರಡನೇ ಡೋಸ್‌ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಕೋವಿಡ್‌ನ ಸಂಭವನೀಯ 3ನೇ ತರಂಗವನ್ನು ತಡೆಯಬಹುದು ಎಂದು ಹೇಳಿದರು.