ಡೆಹ್ರಾಡೂನ್(ಉತ್ತರಾಖಂಡ): ದೇವಭೂಮಿ ಖ್ಯಾತಿಯ ಉತ್ತರಾಖಂಡ ರಾಜ್ಯದಲ್ಲಿ ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಭಾರತೀಯ ಜನತಾ ಪಾರ್ಟಿ ಯಶಸ್ವಿಯಾಗಿದೆ. ಆದರೆ, ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೋಲು ಕಂಡಿರುವ ಕಾರಣ ಇದೀಗ ಹೊಸ ಸಾರಥಿ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಮಗ್ನವಾಗಿದೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಬಿಜೆಪಿಯ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಪುತ್ರಿ ರಿತು ಖಂಡೂರಿಗೆ ಹೈಕಮಾಂಡ್ ಮಣೆ ಹಾಕಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಸಂಬಂಧಿಸಿದಂತೆ 'ಈಟಿವಿ ಭಾರತ' ಜೊತೆ ಮಾತನಾಡಿರುವ ರಿತು ಖಂಡೂರಿ, ದೆಹಲಿಗೆ ಬರುವಂತೆ ತಮಗೆ ಹೈಕಮಾಂಡ್ನಿಂದ ಬುಲಾವ್ ಬಂದಿದೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಂಬುದರ ಬಗ್ಗೆ ಅವರು ಖಚಿತ ಮಾಹಿತಿ ನೀಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಗೆಲುವು, ಸಿಎಂಗೆ ಸೋಲು! ದೇವಭೂಮಿಯಲ್ಲಿ ಮರುಕಳಿಸಿದ ವಿಚಿತ್ರ ಫಲಿತಾಂಶ!
ಮಾಜಿ ಮುಖ್ಯಮಂತ್ರಿ ಮೇಜರ್ ಜನರಲ್ ಭುವನ್ ಚಂದ್ರ ಖಂಡೂರಿ ಅವರ ಮಗಳಾಗಿರುವ ರೀತು ಖಂಡೂರಿ ಭೂಷಣ್, 2017ರಲ್ಲಿ ಯಂಕೇಶ್ವರ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದೀಗ ಕೋಟ್ದ್ವಾರ್ ಕ್ಷೇತ್ರದಿಂದ ಗೆದ್ದಿದ್ದಾರೆ. ಇವರ ಪತಿ ರಾಜೇಶ್ ಭೂಷಣ್ ಪ್ರಧಾನಿ ಮೋದಿ ಜೊತೆ ನಿಕಟ ಸಂಬಂಧ ಹೊಂದಿದ್ದು, ಅವರಿಗೆ ಹೈಕಮಾಂಡ್ ಮಣೆ ಹಾಕಬಹುದು ಎನ್ನಲಾಗ್ತಿದೆ. ರಾಜೇಶ್ ಭೂಷಣ್ ಕೇಂದ್ರ ಸರ್ಕಾರದ ಹಿರಿಯ ಆರೋಗ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ: ಅಪ್ಪನ ಸೋಲಿಗೆ ಸೇಡು ತೀರಿಸಿಕೊಂಡ ಹೆಣ್ಮಕ್ಕಳು: ಉತ್ತರಾಖಂಡ ಚುನಾವಣೆಯಲ್ಲಿ ಗೆದ್ದು ಇತಿಹಾಸ!
ಹಾಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ, ಸುಬೋಧ್ ಉನಿಯಾಲ್ ಅವರನ್ನು ದೆಹಲಿಗೆ ಕರೆಯಿಸಿಕೊಂಡಿದೆ. ಆದರೆ, ಈ ಸಲ ಉತ್ತರಾಖಂಡ್ದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಎಲ್ಲ 8 ಮಹಿಳಾ ಅಭ್ಯರ್ಥಿಗಳು ಗೆಲುವು ದಾಖಲು ಮಾಡಿರುವ ಕಾರಣ ಮಹಿಳಾ ಸಿಎಂ ಅಭ್ಯರ್ಥಿ ಹೆಸರು ಮುಂಚೂಣಿಯಲ್ಲಿದೆ.