ETV Bharat / bharat

ರಾಜ್ಯಸಭಾ ಸಭಾಪತಿಯಂತೆ ಅಣಕ ಪ್ರದರ್ಶನ ಮಾಡಿದ ಟಿಎಂಸಿ ಸದಸ್ಯ: ಸ್ವೀಕಾರಾರ್ಹವಲ್ಲ ಎಂದ ಧನಕರ್ - ರಾಹುಲ್ ಗಾಂಧಿ

TMC MP Kalyan Banerjee mimics Rajya Sabha Chairman: ಸಂಸತ್ತಿನ ಹೊರೆಗೆ ಅಮಾನತುಗೊಂಡ ಟಿಸಿಎಂ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಧನಕರ್ ಅವರಂತೆ ಅಣಕ ಪ್ರದರ್ಶನ ಮಾಡಿದ್ದಾರೆ.

Ridiculous, unacceptable, says Dhankhar after TMCs Kalyan Banerjee mimics Rajya Sabha Chairman
ಸದನದಿಂದ ಅಮಾನತುಗೊಂಡ ಟಿಸಿಎಂ ಸದಸ್ಯನಿಂದ ರಾಜ್ಯಸಭಾ ಸಭಾಪತಿಯ ಮಿಮಿಕ್ರಿ: ಸ್ವೀಕಾರಾರ್ಹವಲ್ಲ ಎಂದ ಧನಕರ್
author img

By ETV Bharat Karnataka Team

Published : Dec 19, 2023, 4:02 PM IST

Updated : Dec 19, 2023, 5:22 PM IST

ನವದೆಹಲಿ: ಸಂಸತ್ತಿನಲ್ಲಿ ಡಿ.13ರಂದು ಉಂಟಾದ ಭದ್ರತಾ ಲೋಪದ ಘಟನೆ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರೆದಿದೆ. ಇದೇ ವಿಷಯವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿಪಕ್ಷಗಳ ಸದಸ್ಯರು ಕೋಲಾಹಲ ಸೃಷ್ಟಿಸಿದ್ದಾರೆ. ಇದೇ ಕಾರಣಕ್ಕೆ ಇಂದು (ಡಿ.19ರಂದು) ಕೂಡ ಲೋಕಸಭೆಯ 49 ಸಂಸದರನ್ನು ಅಮಾನತು ಮಾಡಲಾಗಿದೆ.

ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಉಭಯ ಸದನಗಳಿಂದ ಅಮಾನತುಗೊಂಡ ಸದಸ್ಯರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಅಮಾನತುಗೊಂಡ ಸಂಸದರು ಸಂಸತ್ ಭವನದ ಮುಂದೆ ಪ್ರತಿಭಟನೆ ಕೈಗೊಂಡಿದ್ದಾರೆ. ಈ ವೇಳೆ, ತೃಣಮೂಲ ಕಾಂಗ್ರೆಸ್‌ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅವರಂತೆ ಅಣಕ ಪ್ರದರ್ಶನ ಮಾಡಿದ್ದಾರೆ.

ಭದ್ರತಾ ಲೋಪದ ಘಟನೆ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ, ಭಿತ್ತಿಪತ್ರಗಳು ಪ್ರದರ್ಶನಕ್ಕೆ ನಿರ್ಬಂಧ ಇದ್ದರೂ, ಅವರನ್ನು ಸದನಕ್ಕೆ ತರುವ ಮೂಲಕ ನಿಯಮಗಳ ಉಲ್ಲಂಘನೆ ಹಾಗೂ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರತಿಪಕ್ಷಗಳ ಸದಸ್ಯರನ್ನು ಅಧಿವೇಶನ ಮುಗಿಯುವರೆಗೆ ಅಮಾನತುಗೊಳಿಸಲಾಗಿದೆ. ಇದನ್ನು ಖಂಡಿಸಿ ಸಂಸತ್ತಿನ ಹೊರಗೆ ಅಮಾನತುಗೊಂಡ ಸಂಸದರು ಪ್ರತಿಭಟನೆ ಕುಳಿತಿದ್ದಾರೆ.

ಪ್ರತಿಭಟನೆಯಲ್ಲಿ ಅಣಕ ಪ್ರದರ್ಶನ : ಸಂಸತ್ತಿನ ಮಕರ ದ್ವಾರ ಮುಂದೆ ಇತರ ಅಮಾನತುಗೊಂಡ ಸಂಸದರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಲೋಕಸಭೆಯ ಟಿಸಿಎಂ ಸದಸ್ಯ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭಾ ಸಭಾಪತಿ ಧನಕರ್ ಅವರಂತೆ ಅಣಕ ಪ್ರದರ್ಶನ ಮಾಡಿದ್ದಾರೆ. ಈ ದೃಶ್ಯವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಇತರರು ತಮ್ಮ ಮೊಬೈಲ್​ಗಳಲ್ಲಿ ಸೆರೆ ಹಿಡಿದಿದ್ದಾರೆ.

ಸ್ವೀಕಾರಾರ್ಹವಲ್ಲ ಎಂದ ಸಭಾಪತಿ: ಮತ್ತೊಂದೆಡೆ, ಮಧ್ಯಾಹ್ನ 12 ಗಂಟೆಗೆ ಮತ್ತೆ ಕಲಾಪ ಸೇರಿದ ಬಳಿಕ ಸಂಸತ್ತಿನ ಹೊರಗೆ ಟಿಸಿಎಂ ಸದಸ್ಯ ಅಣಕ ಮಾಡಿರುವ ಬಗ್ಗೆ ಸಭಾಪತಿ ಧನಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಸಭಾ ಸಭಾಪತಿ ಕಚೇರಿ ಮತ್ತು ಸ್ಪೀಕರ್​ ಕಚೇರಿ ತುಂಬಾ ವಿಭಿನ್ನವಾಗಿದೆ. ರಾಜಕೀಯ ಪಕ್ಷಗಳು ಬೇರೆ ಮಾರ್ಗಗಳನ್ನು ಹೊಂದಿರುತ್ತವೆ. ಅವುಗಳು ವಿನಿಮಯ ಮಾಡಿಕೊಳ್ಳುತ್ತವೆ. ಆದರೆ, ನಿಮ್ಮ ಪಕ್ಷದ ಹಿರಿಯ ನಾಯಕ, ಇನ್ನೊಂದು ಪಕ್ಷದ ಇನ್ನೊಬ್ಬ ಸದಸ್ಯರನ್ನು ವಿಡಿಯೋ ಚಿತ್ರೀಕರಿಸುವುದನ್ನು ಕಲ್ಪಿಸಿಕೊಳ್ಳಿ. ಸಭಾಪತಿಯವರ ಅಣಕ, ಸಭಾಧ್ಯಕ್ಷರ ಅಣಕ. ಎಷ್ಟು ಹಾಸ್ಯಾಸ್ಪದ, ಎಷ್ಟು ಅವಮಾನಕರ ಹಾಗೂ ಎಷ್ಟು ಸ್ವೀಕಾರಾರ್ಹವಲ್ಲ ಎಂದು ಸಭಾಪತಿ ಜಗದೀಪ್ ಧನಕರ್ ಹೇಳಿ ಮತ್ತೆ ಸದನವನ್ನು ಮುಂದೂಡಿದರು.

ಇದನ್ನೂ ಓದಿ: ಸಂಸತ್ ಕಲಾಪದಲ್ಲಿ ಕೋಲಾಹಲ: ಫಾರೂಕ್​ ಅಬ್ದುಲ್ಲಾ ಸೇರಿ ಮತ್ತೆ ಪ್ರತಿಪಕ್ಷಗಳ 49 ಲೋಕಸಭಾ ಸಂಸದರ ಅಮಾನತು

Last Updated : Dec 19, 2023, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.