ETV Bharat / bharat

'ವೈಭವ' ಮರಳಿ ತರುವತ್ತ ಮೋದಿ: ಅಮೆರಿಕದಿಂದ 157 ಪುರಾತನ ಕಲಾಕೃತಿಗಳು ವಾಪಸ್​ - ಕ್ವಾಡ್ ಸಭೆಯಲ್ಲಿ ಮೋದಿ ಭಾಗಿ

ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ಅಮೆರಿಕದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಮೆಚ್ಚುಗೆಯನ್ನು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

retrieving-lost-glory-pm-brings-back-157-artefacts-from-us
ವೈಭವ ಮರಳಿ ತರುವತ್ತ ಮೋದಿ: ಅಮೆರಿಕದಿಂದ 157 ಪುರಾತನ ಕಲಾಕೃತಿಗಳು ವಾಪಸ್​
author img

By

Published : Sep 26, 2021, 3:36 AM IST

Updated : Sep 26, 2021, 6:29 AM IST

ನವದೆಹಲಿ: ಭಾರತದಿಂದ ಬೇರೆಡೆಗೆ ಕಳ್ಳ ಸಾಗಣೆಯಾಗಿದ್ದ ಅಥವಾ ಬೇರೆ ರಾಷ್ಟ್ರಕ್ಕೆ ರವಾನೆಯಾಗಿದ್ದ ಸುಮಾರು 157 ಪುರಾತನ ಕಲಾಕೃತಿ ಅಥವಾ ವಸ್ತುಗಳನ್ನು ಅಮೆರಿಕಕ್ಕೆ ಮರಳಿ ಭಾರತಕ್ಕೆ ತರಲಾಗುತ್ತಿದೆ ಎಂದು ಪ್ರಧಾನಮಂತ್ರಿ ಕಚೇರಿ ಮಾಹಿತಿ ನೀಡಿದೆ.

ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಅಮೆರಿಕದ ಪ್ರಾಧಿಕಾರಗಳು ಭಾರತಕ್ಕೆ ಸಂಬಂಧಿಸಿದ ಅತ್ಯಂತ ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡಿವೆ.

2014ರಲ್ಲಿ ಪ್ರಧಾನಿಯಾಗಿ ಮೋದಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಭಾರತಕ್ಕೆ ಸಂಬಂಧಿಸಿದ, ಭಾರತದ ಐತಿಹಾಸಿಕತೆಯನ್ನು, ವೈಭವವನ್ನು ಬಿಂಬಿಸುವ ಪ್ರಾಚೀನ ವಸ್ತುಗಳನ್ನು ಮರಳಿ ತರಲು ಪ್ರಾಮುಖ್ಯತೆ ನೀಡಿದ್ದರು.

  • The list of 157 artefacts includes a diverse set of items ranging from the one and a half metre bas relief panel of Revanta in sandstone of the 10th CE to the 8.5cm tall, exquisite bronze Nataraja from the 12th CE. pic.twitter.com/UVdaf28t5W

    — ANI (@ANI) September 25, 2021 " class="align-text-top noRightClick twitterSection" data=" ">

ತಾವು ಅಧಿಕಾರ ವಹಿಸಿಕೊಂಡ ನಂತರ ಮುಕ್ಕಾಲು ಭಾಗದಷ್ಟು ಪುರಾತನ ವಸ್ತುಗಳನ್ನು ಭಾರತಕ್ಕೆ ತರಲಾಗಿದೆ. ಅಮೆರಿಕ ಈ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರ ಮಾಡಿರುವುದು ಕ್ವಾಡ್ ಸಮ್ಮೇಳನ ಯಶಸ್ವಿಯಾಗಿದೆ ಎಂಬುದನ್ನೂ ಬಿಂಬಿಸುತ್ತದೆ ಎನ್ನಲಾಗಿದೆ.

ಪುರಾತನ ವಸ್ತುಗಳನ್ನು ಭಾರತಕ್ಕೆ ಹಿಂದಿರುಗಿಸಿದ್ದಕ್ಕಾಗಿ ಅಮೆರಿಕದ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಮೆಚ್ಚುಗೆಯನ್ನು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಮರಳಿ ತರುತ್ತಿರುವುದೇನು?

ಪ್ರಧಾನಿ ಮೋದಿ ಹಿಂದೂ,ಜೈನ ಮತ್ತು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕಲಾಕೃತಿಗಳನ್ನು ವಾಪಸ್ ತರಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದರಲ್ಲಿ ಕ್ರಿಸ್ತಪೂರ್ವ 2000ಕ್ಕೆ ಸೇರಿದ ಮಣ್ಣಿನ ಕಲಾಕೃತಿಗಳು, ಕಲಾಕೃತಿಗಳು, 11 ಮತ್ತು 14ನೇ ಶತಮಾನಕ್ಕೆ ಸೇರಿದ ವಸ್ತುಗಳು ಮತ್ತು 12ನೇ ಶತಮಾನಕ್ಕೆ ಸೇರಿದ ಕಂಚಿನ ನಟರಾಜನ ವಿಗ್ರವೂ ಸೇರಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿವೆ.

ಸುಮಾರು 71 ಕಲಾಕೃತಿಗಳು ವಿವಿಧ ಧರ್ಮಗಳ ಸಂಸ್ಕೃತಿಗೆ ಸಂಬಂಧಿಸಿವೆ. 60 ಹಿಂದೂ ಸಂಸ್ಕೃತಿಗೆ, 16 ಬೌದ್ಧ ಸಂಸ್ಕೃತಿಗೆ ಮತ್ತು 9 ಕಲಾಕೃತಿಗಳು ಜೈನ ಧರ್ಮಕ್ಕೆ ಸೇರಿವೆ. ಲೋಹ, ಕಲ್ಲು, ಮಣ್ಣಿನಿಂದ ಈ ಕಲಾಕೃತಿಗಳನ್ನು ಮಾಡಲಾಗಿದೆ.

ಲಕ್ಷ್ಮೀ ನಾರಾಯಣ, ಬುದ್ಧ, ವಿಷ್ಣು, ಶಿವ ಪಾರ್ವತಿ ಮತ್ತು 24 ಜೈನ ತೀರ್ಥಂಕರರಿರುವ ವಿವಿಧ ಕಲಾಕೃತಿಗಳಿವೆ. ಜೊತೆಗೆ ಮೂರು ತಲೆಯ ಬ್ರಹ್ಮ ಮತ್ತು ನೃತ್ಯ ಮಾಡುತ್ತಿರುವ ಗಣೇಶ ಮೂರ್ತಿಯೂ ಕೂಡಾ ಭಾರತಕ್ಕೆ ಬರಲಿದೆ.

ಅಮೆರಿಕ ಮಾತ್ರವಲ್ಲ..

ಈಗ ಅಮೆರಿಕ ಭಾರತಕ್ಕೆ ಸಂಬಂಧಿಸಿದ ಪುರಾತನ ವಸ್ತುಗಳನ್ನು ಹಿಂದಿರುಗಿಸಿದೆ. ಇದರ ಜೊತೆಗೆ ಬ್ರಿಟನ್ ಆಸ್ಟ್ರೇಲಿಯಾ, ಜರ್ಮನಿ, ಕೆನಡಾ, ಸಿಂಗಾಪುರ್ ಮತ್ತು ಜರ್ಮನಿಯಂತಹ ದೇಶಗಳಿಂದ ಸುಮಾರು 119 ಪುರಾತನ ವಸ್ತುಗಳನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವರ್ಷ ಜುಲೈನಲ್ಲಿ ಆಸ್ಟ್ರೇಲಿಯಾದ ನ್ಯಾಷನಲ್ ಗ್ಯಾಲರಿ ಸುಮಾರು 2.2 ಮಿಲಿಯನ್ ಡಾಲರ್​​​ ಮೌಲ್ಯದ ಪುರಾತನ ವಸ್ತುಗಳನ್ನು ಹಿಂದಿರುಗಿಸುವುದಾಗಿ ಘೋಷಣೆ ಮಾಡಿದೆ.

ತಮಿಳುನಾಡು, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರಾಖಂಡ ಮತ್ತು ಬಿಹಾರದಂತಹ ರಾಜ್ಯಗಳಿಂದ ಕಳ್ಳಸಾಗಣೆ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಗೋವಾ ಚುನಾವಣೆ: ಬಿರುಸಿನ ಪ್ರಚಾರ ಕೈಗೊಂಡು ಬಿಜೆಪಿಗೆ ಸೋಲುಣಿಸಿ; ಕೈ ನಾಯಕರಿಗೆ ರಾಗಾ ಕರೆ

Last Updated : Sep 26, 2021, 6:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.