ಬದೌನ್(ಉತ್ತರ ಪ್ರದೇಶ) : ಜಿಲ್ಲೆಯಲ್ಲಿ ಕ್ಷುಲ್ಲಕ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ 66 ವರ್ಷದ ನಿವೃತ್ತ ಶಾಲಾ ಶಿಕ್ಷಕನನ್ನು ಅವರ ಮಗ ಮತ್ತು ಸೊಸೆ ಗುಂಡಿಕ್ಕಿ ಕೊಂದಿದ್ದಾರೆ. ಸೋಮವಾರ ಸಂಜೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಶಿಕ್ಷಕ ನಿವೃತ್ತಿಯ ನಂತರ ಸತ್ಪಾಲ್ ತನ್ನ ಕಿರಿಯ ಮಗ ವಿಪಿನ್ ಸಿಂಗ್ ಜೊತೆಗೆ ವಾಸಿಸುತ್ತಿದ್ದರು. ಮಗನಿಗಾಗಿ ಟ್ರ್ಯಾಕ್ಟರ್ ಮತ್ತು ಕಾರನ್ನು ಖರೀದಿಸಿದ್ದರು. ವಿಪಿನ್‌ಗೆ ಡೈರಿ ಉದ್ಯಮವನ್ನು ಪ್ರಾರಂಭಿಸಲು ಅವರು ಸಹಾಯ ಮಾಡಿದ್ದರು.
ಆದರೆ, ಕೆಲವು ದಿನಗಳ ಹಿಂದೆ ಸತ್ಪಾಲ್ ತನ್ನ ಕಿರಿಯ ಮಗ ವಿಪಿನ್ ಮತ್ತು ಸೊಸೆ ಪೂಜಾ ವರ್ತನೆಯಿಂದ ಬೇಸರಗೊಂಡು ತನ್ನ ಹಿರಿಯ ಮಗ ಹರೀಶ್‌ನೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು. ಇದರಿಂದ ಕಿರಿಯ ಮಗ ತನಗೆ ಆರ್ಥಿಕ ಸಹಾಯ ತಂದೆ ಮಾಡುವುದಿಲ್ಲ ಎಂಬ ಉದ್ದೇಶದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ : ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ.. ಸುಳ್ಯ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷರ ಪತಿ ಸ್ಥಿತಿ ಗಂಭೀರ