ಮುಂಬೈ, ಮಹಾರಾಷ್ಟ್ರ: ಗುಜರಾತ್ ರಾಜ್ಯದಲ್ಲಿ ವಿವಾದಾತ್ಮಕ ಬಿಲ್ಕಿಸ್ ಬಾನೊ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಅವರನ್ನು ಬಿಡಲು ಕಾರಣವೇನು?.. ಅವರ ಮನಸ್ಥಿತಿ ಮತ್ತು ವರ್ತನೆಯಲ್ಲಿ ಬದಲಾವಣೆಯಾಗಿದೆಯೇ?.. ಎಂಬುದರ ಕುರಿತು ಪ್ರಶ್ನೆಗಳನ್ನು ಎತ್ತುವ ಮೂಲಕ ಅದೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಂದಿನ ಸಿಬಿಐ ಕೋರ್ಟ್ ನ್ಯಾಯಾಧೀಶ ಯುಡಿ ಸಾಳ್ವೆ ಪ್ರಶ್ನಿಸುತ್ತಿದ್ದಾರೆ. ಈಗ ಈ ವಿಷಯ ಮತ್ತೆ ವಿವಾದದ ಸುಳಿಗೆ ಸಿಲುಕಿದೆ.
ಬಿಲ್ಕಿಸ್ ಬಾನೋ ಪ್ರಕರಣದ ವಿಚಾರಣೆ ಮತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅಂದಿನ ಸಿಬಿಐ ನ್ಯಾಯಾಧೀಶ ಯುಡಿ ಸಾಳ್ವೆ ಬೇಸರ ವ್ಯಕ್ತಪಡಿಸಿದ್ದಾರೆ. ಬಿಲ್ಕಿಸ್ ಬಾನೊ ಪ್ರಕರಣದಲ್ಲಿ 11 ಆರೋಪಿಗಳನ್ನು ಬಿಡುಗಡೆ ಮಾಡಿರುವ ಸಂಗತಿ ಎಲ್ಲರಿಗೂ ತಿಳಿದಿದೆ. ಹೀಗಾಗಿ ಶಿಕ್ಷೆ ವಿಧಿಸಿ ಥಾಣೆಯಲ್ಲಿ ನೆಲೆಸಿರುವ ಸಿಬಿಐನ ನಿವೃತ್ತ ನ್ಯಾಯಾಧೀಶ ಸಾಳ್ವೆ ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನ್ಯಾಯಾಲಯ ನೀಡಿದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ 11 ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಅವರ ನಡವಳಿಕೆಯಲ್ಲಿ ಬದಲಾವಣೆ ಆಗಿದೆಯಾ.. ಹಾಗಾದರೆ ಅವರ ಮನಸ್ಥಿತಿ ಮತ್ತು ಅವರ ವರ್ತನೆ ಹೇಗಿದೆ? ಎಂಬುದು ತಿಳಿಯಬೇಕಾಗಿದೆ. ಆರೋಪಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ಸರ್ಕಾರದ್ದೇ ಆಗಿದ್ದರೂ ಈ ಪ್ರಕರಣದ ತಪ್ಪಿತಸ್ಥ ಆರೋಪಿಗಳ ಬಿಡುಗಡೆಯ ಹಿಂದಿನ ಕಾರಣಗಳನ್ನು ಬಿಚ್ಚಿಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ಖುಲಾಸೆಗೊಂಡಿರುವ ಈ ಆರೋಪಿಗಳು ಸನ್ಮಾನ ಸ್ವೀಕರಿಸಿ ತಿರುಗಾಡುತ್ತಿದ್ದಾರೆ. ಅವರ ಕೃತ್ಯಗಳಿಗೆ ಪಶ್ಚಾತ್ತಾಪವಿಲ್ಲ. ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸಿಬಿಐನ ನಿವೃತ್ತ ನ್ಯಾಯಾಧೀಶ ಸಾಳ್ವೆ ಸ್ಪಷ್ಟಪಡಿಸಿದ್ದಾರೆ.
ಓದಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣ.. ಕೇಂದ್ರ, ಗುಜರಾತ್ ಸರ್ಕಾರಗಳಿಗೆ ಸುಪ್ರೀಂ ನೋಟಿಸ್