ETV Bharat / bharat

ಅಪಾರ್ಟ್​ಮೆಂಟ್​​ನ ಛಾವಣಿ ಕುಸಿದು ಇಬ್ಬರು ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

author img

By

Published : Feb 11, 2022, 7:45 AM IST

ಗುರುಗ್ರಾಮದಲ್ಲಿ ಅಪಾರ್ಟ್​ಮೆಂಟ್​​ನ 6ನೇ ಮಹಡಿಯ ಛಾವಣಿ ಕುಸಿದ ಪರಿಣಾಮ 2 ಮೃತಪಟ್ಟು 6 ಜನ ಗಾಯಗೊಂಡಿದ್ದಾರೆ.

ಅಪಾರ್ಟ್​ಮೆಂಟ್​​ನ ಛಾವಣಿ ಕುಸಿತ
ಅಪಾರ್ಟ್​ಮೆಂಟ್​​ನ ಛಾವಣಿ ಕುಸಿತ

ಗುರುಗ್ರಾಮ್ (ಹರಿಯಾಣ): ಅಪಾರ್ಟ್​ಮೆಂಟ್​ವೊಂದರ ಛಾವಣಿ ಕುಸಿದು ಇಬ್ಬರು ಮೃತಪಟ್ಟು ಆರು ಜನ ಗಾಯಗೊಂಡ ಘಟನೆ ಗುರುಗ್ರಾಮದ ಚಿಂಟೆಲ್ಸ್ ಪ್ಯಾರಾಡಿಸೋ ಹೌಸಿಂಗ್ ಕಾಂಪ್ಲೆಕ್ಸ್​ನಲ್ಲಿ ತಡರಾತ್ರಿ ನಡೆದಿದೆ.

ಕಟ್ಟಡ ದುರಸ್ತಿ ವೇಳೆ ಆರನೇ ಮಹಡಿಯ ಛಾವಣಿ ಕುಸಿದು ಅವಘಡ ಸಂಭವಿಸಿದೆ. ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಬೆನ್ನಲ್ಲೇ ಗುರುಗ್ರಾಮ್ ಪೊಲೀಸ್ ಆಯುಕ್ತರು, ಅಗ್ನಿ ಶಾಮಕ ದಳದ ಸಿಬ್ಬಂದಿ, ಎನ್​ಡಿಆರ್​ ಮತ್ತು ಎಸ್​ಡಿಆರ್​ಎಫ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಅವಶೇಷಗಳಡಿ ಎಷ್ಟು ಜನ ಸಿಲುಕಿದ್ದಾರೆ ಎಂದು ಪತ್ತೆ ಹಚ್ಚುತ್ತಿದ್ದೇವೆ. ಆದ್ರೆ 5-6 ಜನ ಸಿಲುಕಿರುವ ಶಂಕೆ ಇದ್ದು, ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ಅಗ್ನಿ ಶಾಮಕ ದಳದ ಉಪ ನಿರ್ದೇಶಕ ಗುಲ್ಶನ್ ತಿಳಿಸಿದರು.

ಈ ಅಪಾರ್ಟ್​ಮೆಂಟ್​ನಲ್ಲಿ 530 ಪ್ಲ್ಯಾಟ್ಸ್‌ ಇದ್ದು, 400 ಕುಟುಂಬಗಳು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.