ಮುಂಬೈ : ಗುಜರಾತ್‌ನ ಕಚ್ ಪ್ರದೇಶದಲ್ಲಿ ವಾಸಿಸುವ ಖರೈ ಒಂಟೆಗಳು ಪ್ರಸ್ತುತ ವಿನಾಶದ ಅಂಚಿನಲ್ಲಿವೆ. ಈ ಬಗ್ಗೆ ಐಐಟಿ ಮುಂಬೈ ಮುಂಬೈ ಸಂಶೋಧನೆ ನಡೆಸಿದ್ದು, ಖರೈ ಒಂಟೆಗಳ ಅಳಿವಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಒದಗಿಸಿದೆ.
ಕಚ್‌ನ ಕರಾವಳಿ ಪ್ರದೇಶದಲ್ಲಿ ಈ ಖರೈ ಒಂಟೆಗಳು ಹೆಚ್ಚಾಗಿ ಕಂಡುಬರುತ್ತವೆ. ಖರೈ ಜಾತಿಯ ಒಂಟೆಗಳು ನೀರಿನಲ್ಲಿ ಈಜುವ ವಿಶ್ವದ ಏಕೈಕ ಒಂಟೆಯ ಜಾತಿಯಾಗಿದೆ. ಅಲ್ಲದೆ ನೀರನ್ನು ತನ್ನ ಡುಬ್ಬದಲ್ಲಿ ಶೇಖರಿಸಿಕೊಳ್ಳುವ ವಿಶೇಷ ಸಾಮರ್ಥ್ಯವನ್ನು ಈ ಒಂಟೆಗಳು ಹೊಂದಿದೆ. ಪ್ರಪಂಚದಲ್ಲಿಯೇ ಕಚ್ ಪ್ರದೇಶದಲ್ಲಿ ಮಾತ್ರ ಈ ಒಂಟೆ ಕಾಣಸಿಗುತ್ತದೆ. ಹಸುವಿನ ಹಾಲಿಗಿಂತ ಒಂಟೆಯ ಹಾಲು ಹೆಚ್ಚು ಪೌಷ್ಟಿಕವಾಗಿದೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
ಬಾಂಬೆ ಐಐಟಿಯಿಂದ ಸಂಶೋಧನೆ : ಈ ಸಂಬಂಧ ಬಾಂಬೆ ಐಐಟಿ, ಕಚ್‌ನಲ್ಲಿ ಖರೈ ಒಂಟೆಯ ಸ್ಥಿತಿ ಹಾಗೂ ಭಾರತದ ಪಶ್ಚಿಮ ಭಾಗದಲ್ಲಿರುವ ಮ್ಯಾಂಗ್ರೋವ್ ಕಾಡು ಮತ್ತು ಒಂಟೆಗಳನ್ನು ಸಾಕುವ ಜನರ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಮ್ಯಾಂಗ್ರೋವ್ ಕಾಡುಗಳ ನಾಶದಿಂದ ಒಂಟೆಗಳ ವಿನಾಶ : ಈ ಮ್ಯಾಂಗ್ರೋವ್ ಕಾಡುಗಳು ಕಚ್‌ನ ಅತ್ಯಂತ ಪ್ರಮುಖ ಭಾಗವಾಗಿವೆ. ಕಚ್ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಮ್ಯಾಂಗ್ರೋವ್ ಕಾಡುಗಳು ನಾಶವಾಗುತ್ತಿವೆ. ಇದು ಇಲ್ಲಿನ ಒಂಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇದು ಮಾತ್ರವಲ್ಲದೆ ಅಭಿವೃದ್ಧಿ, ಜನಸಂಖ್ಯೆ ಹೆಚ್ಚಳವು ಪರಿಸರದ ಮೇಲೆ ಮಾರಕ ಪರಿಣಾಮಗಳನ್ನು ಉಂಟು ಮಾಡುತ್ತಿದೆ. ಜೊತೆಗೆ ಜಾಗತಿಕ ತಾಪಮಾನದ ಏರಿಕೆಯಿಂದಲೂ ಪ್ರಪಂಚದಾದ್ಯಂತ ಅನೇಕ ಪ್ರಾಣಿ ಪ್ರಭೇದಗಳು ನಾಶವಾಗುತ್ತಿವೆ. ಮಾನವ ನಿರ್ಮಿತ ಅಭಿವೃದ್ಧಿಯ ಫಲವಾಗಿ ಸಮುದ್ರ ತೀರದಲ್ಲಿ ವಾಸಿಸುವ ಜೀವಿಗಳ ಆಹಾರ ಮತ್ತು ಕಡಲ ತೀರದಲ್ಲಿರುವ ಕಾಡುಗಳು ನಾಶವಾಗುತ್ತಿವೆ.
ನಗರೀಕರಣದಿಂದ ಜೀವಸಂಕುಲಕ್ಕೆ ಹಾನಿ : ಈ ಬಗ್ಗೆ ಮುಂಬೈ ಐಐಟಿಯ ತಂತ್ರಜ್ಞಾನಗಳ ಕೇಂದ್ರದ ಪ್ರೊ. ಪಾರ್ಥಸಾರಥಿ ಮಾತನಾಡಿ, ಕಚ್ ಪ್ರದೇಶದಲ್ಲಿನ ಅಭಿವೃದ್ಧಿ ಕಾರ್ಯಗಳಿಂದ ಮ್ಯಾಂಗ್ರೋವ್ ಕಾಡುಗಳು ನಾಶವಾಗುತ್ತಿದೆ. 2001 ರಲ್ಲಿ ಭುಜ್‌ನಲ್ಲಿ ಸಂಭವಿಸಿದ ಭೂಕಂಪದ ನಂತರ, ಕಚ್ ಪ್ರದೇಶದ ಮೇಲೂ ಇದು ದೊಡ್ಡ ಪರಿಣಾಮ ಬೀರಿತ್ತು. ಬಳಿಕ ಗುಜರಾತ್ ಸರ್ಕಾರವು ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಕೈಗೊಂಡಿದೆ. ನಗರೀಕರಣಕ್ಕಾಗಿ ಅಭಿವೃದ್ಧಿ, ಸಮುದ್ರ ತೀರದ ನಿರ್ಮಾಣಗಳು ತ್ವರಿತ ಗತಿಯಲ್ಲಿ ಸಾಗಿದವು. ಇಲ್ಲಿ ಅನೇಕ ಸಕ್ಕರೆ ಮತ್ತು ಸಿಮೆಂಟ್ ಕಾರ್ಖಾನೆಗಳು ಸ್ಥಾಪನೆಯಾದವು. ಇದರಿಂದಾಗಿಯೇ ಮ್ಯಾಂಗ್ರೋವ್ ಕಾಡುಗಳು ಅಳಿವಿನಂಚಿನಲ್ಲಿದೆ ಎಂದು ಹೇಳಿದರು.
ಇನ್ನು, ಈ ಮ್ಯಾಂಗ್ರೋವ್ ಒಂಟೆಗಳು ಕಛ್‌ನ ಅಬ್ದಾಸಾ, ಭಚೌ, ಲಖ್ಪತ್, ಮುಂದ್ರಾ ಮುಂತಾದ ಸ್ಥಳಗಳಲ್ಲಿ ಕಂಡುಬರುತ್ತವೆ.ಈ ಪ್ರದೇಶದಲ್ಲಿ ಕೈಗಾರಿಕೆಗಳು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿದೆ. ಆದ್ದರಿಂದ ಒಂಟೆಗಳಿಗೆ ತಮ್ಮ ಆಹಾರ ಸಿಗುತ್ತಿಲ್ಲ ಜೊತೆಗೆ ಮ್ಯಾಂಗ್ರೋವ್ ಕಾಡುಗಳ ನಾಶಕ್ಕೆ ಕಾರಣವಾಗಿದೆ. ಇದ್ದರಿಂದಾಗಿ ಒಂಟೆ ಹಾಲಿನ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದರು.
ಇದನ್ನೂ ಓದಿ : ರಾಜಸ್ಥಾನದ ಪ್ರಸಿದ್ಧ ಅಂತಾರಾಷ್ಟ್ರೀಯ ಒಂಟೆ ಉತ್ಸವಕ್ಕೆ ವರ್ಣರಂಜಿತ ಚಾಲನೆ