ಪೂರ್ವ ಗೋದಾವರಿ, ಆಂಧ್ರಪ್ರದೇಶ : ಸಮುದ್ರದೊಳಗೆ ಸಿಲುಕಿದ್ದ ಮಂಗವೊಂದನ್ನು ಮೀನುಗಾರರು ರಕ್ಷಿಸಿರುವ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಕಾಕಿನಾಡ ಬಂದರು ಪ್ರದೇಶದಿಂದ ಸುಮಾರು ಮೂರು ನಾಟಿಕಲ್ ಮೈಲು ದೂರದಲ್ಲಿ ಅಲೆಗಳನ್ನು ತಡೆಯಲು ಸ್ಥಾಪನೆ ಮಾಡಲಾಗಿದ್ದ ಕಾಂಕ್ರೀಟ್ ವೇವ್ ಬ್ರೋಕರ್ಗಳ ಮೇಲೆ ಸುಮಾರು ಮೂರು ತಿಂಗಳ ಕಾಲ ಮಂಗ ಕಳೆದಿದೆ ಎನ್ನಲಾಗಿದೆ.
ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಮಂಗಕ್ಕೆ ಆಹಾರ ನೀಡಿದ್ದು, ಪ್ರಕಾಶಂ ಜಿಲ್ಲೆಯ ಕೋತಪಟ್ಟಣಂನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಲಾಭರಹಿತ ಸಂಸ್ಥೆಯಾದ ಅನಿಮಲ್ ವಾರಿಯರ್ಸ್ ಕನ್ಸರ್ವೇಶನ್ ಸೊಸೈಟಿ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಈ ಸೊಸೈಟಿ ಸಿಬ್ಬಂದಿ ದೋಣಿಯಲ್ಲಿ ಆಗಮಿಸಿ, ಮಂಗದ ರಕ್ಷಣಾ ಕಾರ್ಯ ಕೈಗೊಂಡಿದ್ದರು.
ಮೊದಲ ಎರಡು ದಿನ ಮಂಗ ಬೋನಿಗೆ ಬಿದ್ದಿರಲಿಲ್ಲ. ಆದರೆ, ಸತತ ಪ್ರಯತ್ನದ ಬಳಿಕ ಮೂರನೇ ದಿನ ಮಂಗ ಬೋನಿಗೆ ಬಿದ್ದಿದೆ. ಅದನ್ನು ಕಾಕಿನಾಡ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿಯ ಬಳಿಯ ಅರಣ್ಯಕ್ಕೆ ಬಿಡಲಾಗಿದೆ. ಈ ಮೂಲಕ ಸಮುದ್ರದಲ್ಲಿ ಸಿಲುಕಿದ್ದ ಮಂಗವನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: ಮೊಬೈಲ್ ಗೀಳು ಹೊಂದಿರುವವರೇ ಎಚ್ಚರ.. ನಿಮಗೂ ಬಂದೀತು ಈ ಹುಚ್ಚುತನ!