ನವದೆಹಲಿ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಜೊತೆ ಹೋರಾಡಿ ಪ್ರಾಣತ್ಯಾಗ ಮಾಡಿದ ಕರ್ನಾಟಕದ ವೀರ ಯೋಧ ಕಾಶಿರಾಯ್ ಬಮ್ಮನಹಳ್ಳಿ ಸೇರಿದಂತೆ ಐವರಿಗೆ ಶೌರ್ಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಆರು ವೀರಯೋಧರಿಗೆ ಶೌರ್ಯ ಪ್ರಶಸ್ತಿ ನೀಡಲಾಗಿದೆ. ಈ ಪೈಕಿ ಐವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಲಾಗಿದೆ.
ಶೌರ್ಯ ಪ್ರಶಸ್ತಿ ಪಡೆದುಕೊಂಡವರಲ್ಲಿ ನಾಯಬ್ ಸುಬೇದಾರ್ ಎಂ. ಶ್ರೀಜಿತ್ (ಮರಣೋತ್ತರವಾಗಿ ಶೌರ್ಯ ಚಕ್ರ ),17 ಮದ್ರಾಸ್ ರೆಜಿಮೆಂಟ್‌ನಿಂದ ಸಿಪಾಯಿ ಮರುಪ್ರೋಲು ಜಸ್ವಂತ್ ಕುಮಾರ್ ರೆಡ್ಡಿ (ಮರಣೋತ್ತರವಾಗಿ ಶೌರ್ಯ ಚಕ್ರ), ರಜಪೂತ ರೆಜಿಮೆಂಟ್‌ನಿಂದ ಹವಾಲ್ದಾರ್ ಅನಿಲ್ ಕುಮಾರ್ ತೋಮರ್ (ಮರಣೋತ್ತರವಾಗಿ ಶೌರ್ಯ ಚಕ್ರ), ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ನಿಂದ ಹವಾಲ್ದಾರ್ ಕಾಶಿರಾಯ ಬಮ್ಮನಹಳ್ಳಿ (ಮರಣೋತ್ತರವಾಗಿ ಶೌರ್ಯ ಚಕ್ರ), ಜಾಟ್ ರೆಜಿಮೆಂಟ್‌ನ ಹವಾಲ್ದಾರ್ ಪಿಂಕುಕುಮಾರ್ (ಮರಣೋತ್ತರವಾಗಿ ಶೌರ್ಯ ಚಕ್ರ ),5 ಅಸ್ಸೋಂ ರೈಫಲ್ಸ್‌ನ ರೈಫಲ್‌ಮ್ಯಾನ್ ರಾಕೇಶ್ ಶರ್ಮಾ (ಶೌರ್ಯ ಚಕ್ರ) ಪ್ರಶಸ್ತಿ ಪಡೆದಿದ್ದಾರೆ.
ಇದನ್ನೂ ಓದಿರಿ: ಉಗ್ರರ ಚೆಂಡಾಡಿದ್ದ ASI ಬಾಬು ರಾಮ್ಗೆ ಮರಣೋತ್ತರ ಅಶೋಕ್ ಚಕ್ರ ಪ್ರಶಸ್ತಿ ಪ್ರದಾನ
ವೀರಯೋಧ ಕನ್ನಡಿಗ ಕಾಶಿರಾಯ್ : ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ 2021ರ ಜುಲೈ 1ರಂದು ಭಾರತೀಯ ಸೇನೆ ಕಾರ್ಯಾಚರಣೆ ಕೈಗೊಂಡಿತ್ತು.
ಇದರ ಮುಂದಾಳತ್ವವನ್ನ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ನ ಹವಾಲ್ದಾರ್ ವಿಜಯಪುರದ ಕಾಶಿರಾಯ್ ಬಮ್ಮನಳ್ಳಿ ವಹಿಸಿದ್ದರು. ಉಗ್ರರು ನಡೆಸಿದ ದಾಳಿಯ ವೇಳೆ ವೀರ ಮರಣವನ್ನಪ್ಪಿದ್ದರು.
ವಯಸ್ಸು ಬರೋಬ್ಬರಿ 126.. ಶಿವನ ಆರಾಧಕನಿಗೆ ಒಲಿದ 'ಪದ್ಮಶ್ರೀ'.. ಬಾಬಾ ಶಿವಾನಂದ ಅವರ ಆರೋಗ್ಯದ ಗುಟ್ಟು ಗೊತ್ತಾ?