ETV Bharat / bharat

ಪಶ್ಚಿಮ ಬಂಗಾಳದ ರೆಡ್​ಲೈಟ್​ ಏರಿಯಾದಲ್ಲಿ ದುರ್ಗಾಪೂಜೆ; 7 ಧರ್ಮಗಳ ಪ್ರತಿನಿಧಿಗಳಿಗೆ ಆಹ್ವಾನ - Durga Puja in west Bengal

ಪಶ್ಚಿಮಬಂಗಾಳದ ರೆಡ್​ ಲೈಟ್​ ಪ್ರದೇಶಗಳಲ್ಲಿ ನಡೆಯುವ ದುರ್ಗಾಪೂಜೆ ಈ ಬಾರಿ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಲಿದೆ.

ದುರ್ಗಾಪೂಜೆಯಲ್ಲಿ ಸರ್ವಧರ್ಮಗಳಿಗೆ ಆಹ್ವಾನ
ದುರ್ಗಾಪೂಜೆಯಲ್ಲಿ ಸರ್ವಧರ್ಮಗಳಿಗೆ ಆಹ್ವಾನ
author img

By ETV Bharat Karnataka Team

Published : Oct 4, 2023, 10:28 PM IST

ಕೋಲ್ಕತ್ತಾ (ಪಶ್ಚಿಮಬಂಗಾಳ): ಏಷ್ಯಾದ ಅತಿದೊಡ್ಡ ರೆಡ್ ಲೈಟ್ ಏರಿಯಾ ಸೋನಗಚಿ ಬೆಂಗಾಳಿಗಳ ಅತಿದೊಡ್ಡ ಹಬ್ಬವಾದ ದುರ್ಗಾಪೂಜೆಯನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲು ಪ್ಲಾನ್​ ಮಾಡಿದೆ. ಸೋನಗಚಿ ಪ್ರದೇಶದ ಲೈಂಗಿಕ ಕಾರ್ಯಕರ್ತೆಯರು ಕಳೆದ 10 ವರ್ಷಗಳಿಂದ ದುರ್ಗಾ ಪೂಜೆಯನ್ನು ಮಾಡುತ್ತಾ ಬರುತ್ತಿದ್ದು, ಈ ಬಾರಿ ಸರ್ವಧರ್ಮಗಳ ಸಮ್ಮುಖದಲ್ಲಿ ದುರ್ಗಾದೇವಿ ಪೂಜೆಗೆ ಸನ್ನದ್ಧರಾಗಿದ್ದಾರೆ.

ದೇಶದಲ್ಲಿ ಕೋಮುಗಲಭೆಗಳು ಹೆಚ್ಚುತ್ತಿರುವ ಅಹಿತಕರ ಘಟನೆಗಳ ಮಧ್ಯೆ ಇಲ್ಲಿನ ಲೈಂಗಿಕ ಕಾರ್ಯಕರ್ತೆಯರು ವಿಭಿನ್ನ ರೀತಿಯಲ್ಲಿ ದುರ್ಗಾದೇವಿ ಪೂಜೆಗೆ ಮುಂದಾಗಿದ್ದಾರೆ. ವಿವಿಧ ಧರ್ಮಗಳ ಮುಖಂಡರನ್ನು ಪೂಜೆಗೆ ಆಹ್ವಾನಿಸಿ ಅವರ ಸಮ್ಮುಖದಲ್ಲೇ ಜಗನ್ಮಾತೆಯ ಪೂಜೆಗೆ ಏರ್ಪಾಡು ಮಾಡಲಾಗಿದೆ.

ಏಳು ಧರ್ಮಗಳ ಮುಖಂಡರಿಗೆ ಆಹ್ವಾನ: ಈ ಬಾರಿಯ ಸೋನಗಚಿಯ ದುರ್ಗೋತ್ಸವಕ್ಕೆ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ, ಜೈನ ಸೇರಿದಂತೆ 7 ಧರ್ಮ ಗುರುಗಳಿಗೆ ಆಹ್ವಾನ ನೀಡಲಾಗಿದೆ. ಆಹ್ವಾನಿತರ ಪಟ್ಟಿಯಲ್ಲಿ ಬಿರ್ಭುಮ್‌ನ ತಾರಾಪೀಠದ ಮುಖ್ಯ ಅರ್ಚಕ, ದಕ್ಷಿಣೇಶ್ವರದ ಅರ್ಚಕ, ಗುರುದ್ವಾರ, ನಖೋಡಾ ಮಸೀದಿಯ ಇಮಾಮ್ ಮತ್ತಿತರರು ಇದ್ದಾರೆ. ಪೂಜೆಯನ್ನು ಅವರಿಂದಲೇ ಉದ್ಘಾಟಿಸಲಾಗುವುದು ಎಂದು ಲೈಂಗಿಕ ಕಾರ್ಯಕರ್ತೆಯರ ಸಂಘಟನೆಯ ಮಹಿಳಾ ಸಮನ್ವಯ ಸಮಿತಿ ಕಾರ್ಯದರ್ಶಿ ವಿಶಾಖಾ ಲಷ್ಕರ್ ತಿಳಿಸಿದ್ದಾರೆ.

ದೇಶ ಮತ್ತು ಜಗತ್ತಿನಲ್ಲಿ ಜಾತಿ, ಧರ್ಮಗಳ ಮಧ್ಯೆ ಕೋಮುದಳ್ಳುರಿ ಹೆಚ್ಚಾಗಿದೆ. ಲೈಂಗಿಕ ಕಾರ್ಯಕರ್ತರ ಬಳಿಗೆ ಬರುವವರು ಎಂದಿಗೂ ಜಾತಿ ಅಥವಾ ಧರ್ಮವನ್ನು ಅಳೆಯುವುದಿಲ್ಲ. ಈ ವ್ಯಾಪಾರವೂ ಧರ್ಮದ ಆಧಾರದ ಮೇಲೆ ನಡೆಯುವುದಿಲ್ಲ. ಗ್ರಾಹಕರು ಇಲ್ಲಿಗೆ ಬಂದು ಮನೆಗೆ ಹಿಂದಿರುಗಿದಾಗ ಮತ್ತೆ ಅವರು ಹಿಂದೂಗಳು, ಮುಸ್ಲಿಮರು, ಸಿಖ್ಖರು ಎಂದು ವಿಭಜನೆಗೊಂಡು ಕಾದಾಡುತ್ತಾರೆ. ಎಲ್ಲ ಧರ್ಮಗಳ ನಡುವೆ ಸಾಮರಸ್ಯದ ಸಂದೇಶವನ್ನು ಸಾರಲು ಮಾತೆಯ ಪೂಜೆಗೆ ಧರ್ಮ ಗುರುಗಳನ್ನು ಆಹ್ವಾನಿಸಲಾಗಿದೆ ಎಂದರು.

ಲೈಂಗಿಕ ಕಾರ್ಯಕರ್ತೆಯರಲ್ಲಿ ಹಿಂದೂಗಳು, ಮುಸ್ಲಿಮರು ಎಂಬ ಭೇದವಿಲ್ಲ. ಇಲ್ಲಿ ಎಲ್ಲ ಧರ್ಮ, ಜಾತಿಯ ಮಹಿಳೆಯರು ಇರುವುದರಿಂದ ಜಾತಿಯ ಕಲಹ ಇಲ್ಲ. ನಾವು ಕಾಮೋದ್ಯೋಗಿಗಳಾಗಿದ್ದು, ಗಂಡು ಹೆಣ್ಣು ಎಂಬ ಎರಡೇ ಜಾತಿ ಇರುವುದು. ಹಾಗಾಗಿ ನಮ್ಮ ಪೂಜೆಯಲ್ಲಿ ಎಲ್ಲ ಧರ್ಮದವರೂ ಭಾಗಿಯಾಗಲು ಒಪ್ಪಿದ್ದಾರೆ ಎಂದರು.

ಪಶ್ಚಿಮ ಬಂಗಾಳದಲ್ಲಿ 56 ರೆಡ್​ಲೈಟ್​ ಏರಿಯಾಗಳಿದ್ದು, ಅದರಲ್ಲಿ ಕೋಲ್ಕತ್ತಾ, ಸೋನಾಗಚಿ, ಅಸನ್ಸೋಲ್, ದುರ್ಗಾಪುರ, ಜಲ್ಪೈಗುರಿ ಮತ್ತು ಬಂಕುರಾದ ಬಿಷ್ಣುಪುರದಲ್ಲಿ ದುರ್ಗಾ ಪೂಜೆ ವಿಜೃಂಭಣೆಯಿಂದ ನಡೆಯುತ್ತದೆ.

ಇದನ್ನೂ ಓದಿ: ನಾಳೆಯಿಂದ ಕೇಂದ್ರ ತಂಡದಿಂದ ಬರ ಪರಿಸ್ಥಿತಿ ಅಧ್ಯಯನ, ವಿವಿಧ ಜಿಲ್ಲೆಗಳಲ್ಲಿ ಪ್ರವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.