ETV Bharat / bharat

ಕ್ರೂಸ್​ ಡ್ರಗ್​ ಪ್ರಕರಣ.. ಪ್ರಮುಖ ಸಾಕ್ಷಿ ಕೆ.ಪಿ ಗೋಸಾವಿ ಶರಣಾಗತಿಗೆ ಸಿದ್ಧ ಎಂಬ ವರದಿ ಸುಳ್ಳು: ಲಖನೌ ಪೊಲೀಸರು - ಕ್ರೂಸ್​ ಡ್ರಗ್​ ಪ್ರಕರಣ ಸುದ್ದಿ

ಗೋಸಾವಿ ಮತ್ತು ಎಸ್‌ಎಚ್‌ಒ ಸಿಂಗ್ ನಡುವಿನ ಸಂಭಾಷಣೆ ಎಂದು ಹೇಳಲಾದ ವೈರಲ್ ಆಡಿಯೋ ಕ್ಲಿಪ್‌ನಲ್ಲಿ, ಯುಪಿ ಪೊಲೀಸರ ಮುಂದೆ ಶರಣಾಗಲು ಬಯಸುವುದಾಗಿ ಗೋಸಾವಿ ಹೇಳಿರುವುದು ಕೇಳಿಬಂದಿದೆ. ಆದರೆ, ಇಲ್ಲಿ ಶರಣಾಗಲು ಸಾಧ್ಯವಿಲ್ಲ ಎಂದು ಪೊಲೀಸರು ಆತನ ಸಲ್ಲಿಕೆಯನ್ನು ನಿರಾಕರಿಸಿದ್ದಾರೆ.

ಲಖನೌ ಪೊಲೀಸರು
ಲಖನೌ ಪೊಲೀಸರು
author img

By

Published : Oct 26, 2021, 4:04 PM IST

ಲಖನೌ: ಕ್ರೂಸ್​ ಡ್ರಗ್​ ಪ್ರಕರಣದ ಪ್ರಮುಖ ಸಾಕ್ಷಿ ಕೆ.ಪಿ ಗೋಸಾವಿ ಬಂಧಿಸಲು ಪುಣೆ ಪೊಲೀಸರು ಲಖನೌಗೆ ತೆರಳಿದ್ದಾರೆ. ಕೆ.ಪಿ ಗೋಸಾವಿ ಪೊಲೀಸರ ಮುಂದೆ ಶರಣಾಗಲಿದ್ದಾರೆ ಎಂದು ಹೇಳುವ ವರದಿಗಳನ್ನು ಲಖನೌ ಪೊಲೀಸರು ತಳ್ಳಿಹಾಕಿದ್ದಾರೆ. ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ಮಡಿಯಾನ್‌ನ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮನೋಜ್ ಸಿಂಗ್, "ಈ ವಿಷಯದ ಬಗ್ಗೆ ನನಗೆ ಯಾವುದೇ ಕರೆ ಬಂದಿಲ್ಲ, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ" ಎಂದು ಹೇಳಿದರು.

ಗೋಸಾವಿ ಮತ್ತು ಎಸ್‌ಎಚ್‌ಒ ಸಿಂಗ್ ನಡುವಿನ ಸಂಭಾಷಣೆ ಎಂದು ಹೇಳಲಾದ ವೈರಲ್ ಆಡಿಯೋ ಕ್ಲಿಪ್‌ನಲ್ಲಿ, ಯುಪಿ ಪೊಲೀಸರ ಮುಂದೆ ಶರಣಾಗಲು ಬಯಸುವುದಾಗಿ ಗೋಸಾವಿ ಹೇಳಿರುವುದು ಕೇಳಿ ಬಂದಿದೆ. ಆದರೆ, ಇಲ್ಲಿ ಶರಣಾಗಲು ಸಾಧ್ಯವಿಲ್ಲ ಎಂದು ಪೊಲೀಸರು ಆತನ ಸಲ್ಲಿಕೆಯನ್ನು ನಿರಾಕರಿಸಿದ್ದಾರೆ.

ಪುಣೆಯ ಫರಸ್ಖಾನಾ ವಿಭಾಗದ ಎಸಿಪಿ ಸತೀಶ್ ಗೋವೆಕರ್ ಅವರು ಗೋಸಾವಿಯ ಶರಣಾಗತಿಯ ಹಕ್ಕುಗಳನ್ನು ನಿರಾಕರಿಸಿದ್ದಾರೆ. ಅದರ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಮತ್ತು ಇನ್ನೂ ಅವನನ್ನು ಹುಡುಕುತ್ತಿದ್ದೇವೆ ಎಂದು ಹೇಳಿದರು.

ಗೋಸಾವಿ ಮತ್ತು ಎಸ್‌ಎಚ್‌ಒ ಸಿಂಗ್ ಅವರ ನಡುವಿನದ್ದು ಎನ್ನಲಾದ ಸಂಭಾಷಣೆ

ಪ್ರಕರಣದ ಸಾಕ್ಷಿ ಪ್ರಭಾಕರ್ ಸೈಲ್ ತಾನು ಗೋಸಾವಿಯ ಅಂಗರಕ್ಷಕ ಎಂದು ಹೇಳಿಕೊಂಡಿದ್ದು, ಕೇಂದ್ರ ಏಜೆನ್ಸಿಯ ಅಧಿಕಾರಿ ವಾಂಖೆಡೆ ತಮಗೆ ಖಾಲಿ ಕಾಗದಕ್ಕೆ ಸಹಿ ಹಾಕುವಂತೆ ಮಾಡಿದರು ಎಂದು ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ಕೆ.ಪಿ ಗೋಸಾವಿ ನಾಪತ್ತೆಯಾದ ನಂತರ ಎನ್‌ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆಯಿಂದ ತನಗೆ ಜೀವ ಬೆದರಿಕೆ ಇದೆ ಎಂದು ಸೈಲ್ ಆರೋಪಿಸಿದ್ದರು.

ಕ್ರೂಸ್​ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಕಿರಣ್ ಗೋಸಾವಿ ಪ್ರಮುಖ ಸಾಕ್ಷಿದಾರನಾಗಿದ್ದು, ಆತನಿಗಾಗಿ ಪೊಲೀಸರು ಲುಕ್​ಔಟ್ ನೋಟಿಸ್ ಹೊರಡಿಸಿದ್ದಾರೆ.

ಓದಿ: ಸೆಲ್ಫಿ ಮ್ಯಾನ್ ಸರೆಂಡರ್ ಹೈಡ್ರಾಮಾ: ಮುಂಬೈ ಪೊಲೀಸರಿಂದ ಬೆದರಿಕೆ ಎಂದಿದ್ದ ಕಿರಣ್ ಗೋಸಾವಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.