ETV Bharat / bharat

Waste dumping.. ಬೀದಿಗಳಲ್ಲಿ ಕಸ ಎಸೆಯುವವರ ಬಗ್ಗೆ ಮಾಹಿತಿ ನೀಡಿ.. ₹ 2,500 ವರೆಗೂ ಹಣ ಗಳಿಸಿ! - Waste dumping

ಕೇರಳದಲ್ಲಿ ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳ ಪಕ್ಕದಲ್ಲಿ ಕಸ ಎಸೆದವರ ಬಗ್ಗೆ ಮಾಹಿತಿ ನೀಡುವವರಿಗೆ 2,500 ರೂಪಾಯಿವರೆಗೂ ಬಹುಮಾನ ಬಗ್ಗೆ ಕೇರಳ ಸರ್ಕಾರ ಆದೇಶ ಹೊರಡಿಸಿದೆ.

ಬೀದಿಗಳಲ್ಲಿ ಕಸ ಎಸೆದವರ ಬಗ್ಗೆ ಮಾಹಿತಿ ನೀಡಿ... ₹ 2,500ರವರೆಗೂ ಹಣ ಗಳಿಸಿ!
Report waste dumping on streets and earn up to Rs 2,500 in Kerala
author img

By

Published : Jun 10, 2023, 9:03 PM IST

ತಿರುವನಂತಪುರಂ (ಕೇರಳ): ನಗರ ಹಾಗೂ ಗ್ರಾಮಗಳ ಸ್ವಚ್ಛತೆಗಾಗಿ ಸರ್ಕಾರಗಳು ಸಾಕಷ್ಟು ಅರಿವು ಮೂಡಿಸುವುದರೊಂದಿಗೆ ಕಸ ವಿಲೇವಾರಿಗಾಗಿಯೇ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿವೆ. ಜೊತೆಗೆ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಹಣ ವಿಧಿಸುವ ಮೂಲಕ ಬಿಸಿ ಮುಟ್ಟಿಸುವ ಕೆಲಸವೂ ಆಗುತ್ತಿದೆ. ಆದರೂ, ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯವನ್ನು ಸುರಿಯುವುದು ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ, ಇದಕ್ಕೆ ಕಡಿವಾಣ ಹಾಕಬೇಕು ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ವಿನೂತನವಾದ ಹೆಜ್ಜೆಯನ್ನು ಇರಿಸಿದೆ.

ಹೌದು, ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳ ಪಕ್ಕದಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸುವುದರೊಂದಿಗೆ ಈ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡಲು ಸಹ ಮುಂದಾಗಿದೆ. ಕೇರಳ ರಾಜ್ಯವನ್ನು ಕಸ ಮುಕ್ತವನ್ನಾಗಿಸುವ ''ಮಾಲಿನ್ಯ ಮುಕ್ತಂ ನವ ಕೇರಳಂ'' ಅಭಿಯಾನದ ಭಾಗವಾಗಿ ತ್ಯಾಜ್ಯ ಹಾಗೂ ಕಸ ಎಸೆಯುವಂತಹ ಕೃತ್ಯಗಳನ್ನು ವರದಿ ಮಾಡುವ ಎಲ್ಲರಿಗೂ ನಗದು ಬಹುಮಾನ ನೀಡಲು ಉದ್ದೇಶಿಸಲಾಗಿದೆ. ಇಂತಹ ಪ್ರತಿ ವರದಿಗೆ 2,500 ರೂಪಾಯಿವರೆಗೂ ಗಳಿಸುವ ಹೊಸ ಯೋಜನೆಯನ್ನು ಕೇರಳ ಸರ್ಕಾರ ತಂದಿದೆ.

ಇದನ್ನೂ ಓದಿ: ನೋಡಿಯೂ ಸುಮ್ನಿರಬೇಡಿ.. ಎಲ್ಲೆಂದರಲ್ಲಿ ಕಸ ಎಸೆದವರ ಮಾಹಿತಿ ಕೊಟ್ರೆ ಬಿಬಿಎಂಪಿಯಿಂದ ಸಿಗುತ್ತೆ ಪ್ರಶಸ್ತಿ

ಈ ಕುರಿತು ಸ್ಥಳೀಯ ಸ್ವಯಂ ಆಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳು, ಖಾಸಗಿ ಆಸ್ತಿ ಮತ್ತು ಜಲಮೂಲಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ಎರಡನ್ನೂ ಎಸೆಯುವ ಅಥವಾ ವಿಲೇವಾರಿ ಮಾಡುವುದನ್ನು ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಬಹುದು ಆದೇಶದಲ್ಲಿ ಸೂಚಿಸಲಾಗಿದೆ. ಜೊತೆಗೆ ಕಸ ಎಸೆದು ಉಲ್ಲಂಘನೆ ಮಾಡುವ ಘಟನೆಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸುವ ವ್ಯಕ್ತಿಗೆ ಗರಿಷ್ಠ 2,500 ರೂಪಾಯಿ ಅಥವಾ ಕಸವನ್ನು ವಿಲೇವಾರಿ ಮಾಡಿದವರಿಗೆ ವಿಧಿಸುವ ದಂಡದ ಮೊತ್ತದ ಶೇ.25ರಷ್ಟು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಕಸ ಎಸೆದು ತಪ್ಪೆಸಗಿದ ಸ್ಥಳ ಮತ್ತು ಸಮಯದಂತಹ ವಿವರಗಳ ಜೊತೆಗೆ ನಂಬಲರ್ಹವಾದ ಛಾಯಾಚಿತ್ರ ಅಥವಾ ವೀಡಿಯೊ ಕ್ಲಿಪ್ ಸೇರಿದಂತೆ ವಿವಿಧ ಪುರಾವೆಗಳನ್ನೂ ನಾಗರಿಕರು ಒದಗಿಸಬೇಕು. ವಾಟ್ಸಪ್ ಸಂಖ್ಯೆ ಮತ್ತು ಇ-ಮೇಲ್‌ ಮೂಲಕ ಈ ವರದಿ ಮಾಡಬೇಕು. ಅಧಿಕಾರಿಗಳು ಮಾಹಿತಿದಾರರ ಹೆಸರು ಅಥವಾ ವಿವರಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಮುಂದುವರೆದು, ಎಲ್ಲ ಸ್ಥಳೀಯ ಸಂಸ್ಥೆಗಳು ತ್ಯಾಜ್ಯ ಮತ್ತು ಕಸ ವಿಲೇವಾರಿಯ ವಿರುದ್ಧ ವ್ಯಾಪಕ ಜಾಗೃತಿ ಅಭಿಯಾನಗಳನ್ನು ನಡೆಸಬೇಕು. ಜೊತೆಗೆ ನಿಯಮಗಳ ಉಲ್ಲಂಘನೆಗಳನ್ನು ವರದಿ ಮಾಡುವ ಮತ್ತು ಅದರ ಪ್ರತಿಫಲವನ್ನು ಪಡೆಯುವ ನಾಗರಿಕರ ಜವಾಬ್ದಾರಿಯಾಗಿದೆ. ಅಕ್ರಮವಾಗಿ ಕಸ ಸಾಗಿಸುವ ವಾಹನಗಳನ್ನು ಅಧಿಕಾರಿಗಳ ತಂಡಗಳು ವಶಪಡಿಸಿಕೊಳ್ಳಬಹುದು ಮತ್ತು ಜಪ್ತಿ ಮಾಡಬಹುದು. ಅಗತ್ಯವಿದ್ದರೆ, ತ್ಯಾಜ್ಯ ಎಸೆಯುವರನ್ನು ಬಂಧಿಸಬಹುದು ಮತ್ತು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬಹುದು ಎಂದೂ ಪ್ರಕಟಿಸಲಾಗಿದೆ.

ಇದನ್ನೂ ಓದಿ: ರಸ್ತೆ ಬದಿ ಬೇಕಾಬಿಟ್ಟಿ ಕಸ ಎಸೆದ ವ್ಯಕ್ತಿಯಿಂದಲೇ ಸ್ವಚ್ಛಗೊಳಿಸಿದ ಪಾಲಿಕೆ ಸಿಬ್ಬಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.