ETV Bharat / bharat

Keralam: ಕೇರಳವನ್ನು 'ಕೇರಳಂ' ಎಂದು ಬದಲಿಸುವ ನಿರ್ಣಯಕ್ಕೆ ಒಪ್ಪಿಗೆ - ETV Bharath Kannada news

Keralam Government resolution: ಮಾತೃಭಾಷೆಯ ಅಧಿಕೃತ ಭಾಷಾ ನೀತಿಯದ ಭಾಗವಾಗಿ ಸಂವಿಧಾನದಲ್ಲಿ ಕೇರಳವನ್ನು 'ಕೇರಳಂ' ಎಂದು ಬದಲಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.

Chief Minister Pinarayi Vijayan
ಸಿಎಂ ಪಿಣರಾಯಿ ವಿಜಯನ್
author img

By

Published : Aug 9, 2023, 3:34 PM IST

ತಿರುವನಂತಪುರಂ (ಕೇರಳ) : ಸರ್ಕಾರಿ ದಾಖಲೆಗಳಲ್ಲಿರುವ 'ಕೇರಳ' ಎಂಬ ಪದವನ್ನು 'ಕೇರಳಂ' ಎಂದು ಬದಲಿಸುವ ಮಹತ್ವದ ನಿರ್ಣಯವನ್ನು ಇಂದು ಕೇರಳ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿವೆ. ಮಾತೃಭಾಷೆಯ ಅಧಿಕೃತ ಭಾಷಾ ನೀತಿಯ ಭಾಗವಾಗಿ ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ರಾಜ್ಯದ ಅಧಿಕೃತ ಹೆಸರನ್ನು 'ಕೇರಳಂ' ಎಂದು ಬದಲಾಯಿಸಲು ಕೇಂದ್ರವನ್ನು ಕೋರುವ ನಿರ್ಣಯ ಇದಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿರ್ಣಯದಲ್ಲಿ, ಸಂವಿಧಾನ ಮತ್ತು ಇತರ ಅಧಿಕೃತ ದಾಖಲೆಗಳಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಿಸಲು ಕೋರಲಾಯಿತು.

ನಿರ್ಣಯ ಮಂಡಿಸಿ ಮಾತನಾಡಿದ ಪಿಣರಾಯಿ ವಿಜಯನ್, "ನಮ್ಮ ರಾಜ್ಯದ ಹೆಸರು ಮಲಯಾಳಂ ಭಾಷೆಯಲ್ಲಿ 'ಕೇರಳಂ'. 1956ರ ನವೆಂಬರ್ 1ರಂದು ಭಾಷೆಯ ಆಧಾರದ ಮೇಲೆ ರಾಜ್ಯಗಳು ರಚನೆಯಾದವು. ಅದರಂತೆ, ನವೆಂಬರ್​ 1ರಂದು ಕೇರಳ ರಚನೆಯಾಯಿತು. ಸಂವಿಧಾನದ 1ನೇ ಪರಿಚ್ಛೇದದಲ್ಲಿ ರಾಜ್ಯದ ಹೆಸರನ್ನು 'ಕೇರಳ' ಎಂದು ಬರೆಯಲಾಗಿದೆ. ಈ ನಿರ್ಣಯವು ಕೇಂದ್ರ ಸರ್ಕಾರ ತಿದ್ದುಪಡಿಗೆ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ವಾನುಮತದಿಂದ ವಿನಂತಿಸುತ್ತದೆ" ಎಂದು ಹೇಳಿದರು.

"2016ರ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಎಂ.ಎಂ.ಮಣಿ ಅವರು, ಇಂಗ್ಲಿಷ್ ದಾಖಲೆಗಳಲ್ಲಿ ಕೇರಳ ಎಂಬ ಹೆಸರನ್ನು ಕೇರಳ ಎಂದು ಬದಲಾಯಿಸುವಂತೆ ಒತ್ತಾಯಿಸಿದ್ದರು. ಆದರೆ ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ" ಎಂದು ಮುಖ್ಯಮಂತ್ರಿ ಪಿಣರಾಯಿ ತಿಳಿಸಿದರು.

ಇತ್ತೀಚೆಗೆ, ಮಾತೃಭಾಷೆ ಮಲಯಾಳಂ ಅನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಕ್ರಮವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. 2017ರಲ್ಲಿ ಹೊರಡಿಸಿದ ಆದೇಶದ ಮೂಲಕ ಸರ್ಕಾರಿ, ಅರೆ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಮಲಯಾಳಂ ಅನ್ನು ಅಧಿಕೃತ ಭಾಷೆಯನ್ನಾಗಿ ಮಾಡಲಾಗಿದೆ. ಸರ್ಕಾರಿ ಆದೇಶಗಳು, ಕಡತಗಳು, ಸುತ್ತೋಲೆಗಳು ಮತ್ತು ಪತ್ರಗಳು ಸರ್ಕಾರದ ಮಟ್ಟದಲ್ಲಿ ಎಲ್ಲ ಸಂವಹನಗಳನ್ನು ಅಂದಿನಿಂದ ಮಲಯಾಳಂನಲ್ಲಿ ರಚಿಸಲಾಗಿದೆ. ಆದರೆ ಇತರ ರಾಜ್ಯಗಳೊಂದಿಗಿನ ಸಂವಹನ ಹಾಗು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಸ್ಥೆಗಳೊಂದಿಗೆ ಕೇರಳ ಸರ್ಕಾರ ಇಂಗ್ಲಿಷ್‌ನಲ್ಲಿಯೇ ಸಂವಹನ ನಡೆಸುತ್ತಿದೆ.

ಕೇರಳ ಪಿರವಿ ದಿನಂ: ರಾಜ್ಯದ ವೈಶಿಷ್ಟ್ಯತೆ, ಸಂಪನ್ಮೂಲ, ಸಾಂಸ್ಕೃತಿಕ ಪರಂಪರೆ, ಕೃಷಿ, ಕೈಗಾರಿಕಾ ಪ್ರಗತಿ ಮತ್ತು ಸುಧಾರಿತ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಇದುವರೆಗಿನ ಸಾಧನೆಗಳ ಕುರಿತ ಕಾರ್ಯಕ್ರಮಗಳನ್ನು ನವೆಂಬರ್​ 1ರಿಂದ ಒಂದು ವಾರಗಳ ಕಾಲ 'ಕೇರಳ ಪಿರವಿ ದಿನಂ' ಎಂದು ಆಚರಿಸಲಾಗುವುದು ಎಂದು ಸಿಎಂ ಇದೇ ವೇಳೆ ಹೇಳಿದರು.

ಇದನ್ನೂ ಓದಿ: ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ, ಮೋದಿ ಅಮಿತ್ ಶಾ, ಅದಾನಿ ಮಾತು ಮಾತ್ರ ಕೇಳ್ತಿದ್ದಾರೆ: ರಾಹುಲ್​ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.