ನವದೆಹಲಿ: 94 ವರ್ಷದ ಖ್ಯಾತ ಆಂಕೊಲಾಜಿಸ್ಟ್ ಮತ್ತು ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಫ್ ಅಡಾಯರ್ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ಡಾ.ವಿ.ಶಾಂತಾ ಅವರು ಇಂದು ಚೆನ್ನೈನಲ್ಲಿ ನಿಧನರಾದರು.
ಹೃದಯದ ತೊಂದರೆಯಿಂದ ಬಳಲುತ್ತಿದ್ದ ಡಾ.ಶಾಂತಾ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.
ಡಾ.ವಿ.ಶಾಂತಾ ಅವರು ಚೆನ್ನೈನಲ್ಲಿ ಭಾರತದ ವಿಶೇಷ ವೈಜ್ಞಾನಿಕ ಕುಟುಂಬದಲ್ಲಿ ಜನಿಸಿದರು. 1949 ರಲ್ಲಿ ಎಂಬಿಬಿಎಸ್ ಪದವಿ ಪಡೆದರು, 1952 ರಲ್ಲಿ ಮತ್ತು 1955 ರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಡಿ ಪಡೆದು, ಮದ್ರಾಸ್‌ನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರಾಗಿ ಕಾರ್ಯ ನಿರ್ವಹಿಸಿದರು.
ಡಾ.ವಿ.ಶಾಂತಾ ಅವರು ಪ್ರಸ್ತುತ ಚೆನ್ನೈನ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಡಬ್ಲ್ಯುಐಎ) ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಇವರು ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ