ಮುಂಬೈ, ಮಹಾರಾಷ್ಟ್ರ: ಖ್ಯಾತ ಡೆವಲಪರ್ ಪರಸಭಾಯ್ ಪೋರ್ವಾಲ್ ಇಂದು ಬೆಳಗ್ಗೆ 7 ಗಂಟೆಗೆ 24 ಅಂತಸ್ತಿನ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪರಾಸಭಾಯ್ ಪೋರ್ವಾಲ್ ಅವರು ಕಲಾಚೌಕಿ ಪ್ರದೇಶದ ಶಾಂತಿಕಮಲ್ ಟವರ್‌ನಲ್ಲಿ ವಾಸಿಸುತ್ತಿದ್ದರು. ಈ ಟವರ್‌ನ ಮೇಲಿನ ಮೂರು ಮಹಡಿಗಳು ಪೋರ್ವಾಲ್ ಹೆಸರಿನಲ್ಲಿವೆ. ಆರ್ಥಿಕ ಸಮಸ್ಯೆ ಹಾಗೂ ಒತ್ತಡದಿಂದಾಗಿ ಕಟ್ಟಡದ 24ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪೋರ್ವಾಲ್ ಬರೆದಿರುವ ಡೆತ್ನೋಟ್ ಪೊಲೀಸರು ಪತ್ತೆ ಹಚ್ಚಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಓದಿ: ಅರೆ ನಗ್ನ ಫೋಟೋ ಹರಿಬಿಡುವುದಾಗಿ ಇನ್‌ಸ್ಟಾಗ್ರಾಮ್ ಯುವತಿಯಿಂದ ಬೆದರಿಕೆ: ಕಟ್ಟಡದಿಂದ ಜಿಗಿದು ಯುವಕ ಆತ್ಮಹತ್ಯೆ