ETV Bharat / bharat

ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್​ನಿಂದ ರಿಲೀಫ್​... ಸದ್ಯಕ್ಕೆ ಬಂಧನ ಮಾಡದಂತೆ ಸೂಚನೆ

ರಕ್ಷಣೆ ಕೋರಿ ಮತ್ತೆ ಸುಪ್ರೀಂ ಮೊರೆ ಹೋದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಇದೀಗ ರಿಲೀಫ್ ಸಿಕ್ಕಿದೆ. ಮುಂದಿನ ವಿಚಾರಣೆವರೆಗೆ ಬಂಧನ ಮಾಡದಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ.

Relief for Nupur Sharma
Relief for Nupur Sharma
author img

By

Published : Jul 19, 2022, 3:59 PM IST

ನವದೆಹಲಿ: ಬಂಧನದಿಂದ ತಡೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್​ ರಿಲೀಫ್​ ನೀಡಿದೆ. ಸದ್ಯಕ್ಕೆ ಅವರ ಬಂಧನ ಮಾಡದಂತೆ ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆ ದಿನಾಂಕದವರೆಗೂ ಬಂಧನದಿಂದ ರಕ್ಷಣೆ ನೀಡಿರುವ ಸುಪ್ರೀಂಕೋರ್ಟ್​, ಅವರ ವಿರುದ್ಧ ದಾಖಲಾಗಿರುವ ಎಲ್ಲ ಎಫ್​ಐಆರ್​ ಒಟ್ಟಿಗೆ ಸೇರಿಸಲು ಸೂಚಿಸಿದೆ. ಇದರ ಜೊತೆಗೆ ಮುಂದಿನ ವಿಚಾರಣೆ ಆಗಸ್ಟ್​​ 10ರಂದು ಮುಂದೂಡಿಕೆ ಮಾಡಿ, ಆದೇಶ ಹೊರಡಿಸಿದೆ.

  • Supreme Court begins hearing the plea filed by former BJP spokesperson Nupur Sharma seeking to stay on her possible arrest and club nine cases filed against her across India

    — ANI (@ANI) July 19, 2022 " class="align-text-top noRightClick twitterSection" data=" ">

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ.ಪಾರ್ದಿವಾಲಾ ಅವರ ನೇತೃತ್ವದ ರಜಾಕಾಲದ ಪೀಠವು ಈ ಆದೇಶ ಹೊರಹಾಕಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ ಶರ್ಮಾ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು.

ಬಂಧನದಿಂದ ರಕ್ಷಣೆ ನೀಡುವಂತೆ ಹಾಗೂ ತಮ್ಮ ವಿರುದ್ಧ ದಾಖಲಾದ ಎಲ್ಲ ಎಫ್​ಐಆರ್​ಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸುವಂತೆ ನೂಪುರ್ ಶರ್ಮಾ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಜೊತೆಗೆ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸೋಂಗಳಲ್ಲಿ ದಾಖಲಾದ ದೂರುಗಳನ್ನು ಒಟ್ಟುಗೂಡಿಸಲು ಶರ್ಮಾ ಕೋರಿದ್ದರು.

ಇದನ್ನೂ ಓದಿರಿ: ರಕ್ಷಣೆ ಕೋರಿ ಮತ್ತೆ ಸುಪ್ರೀಂ ಮೊರೆ ಹೋದ ನೂಪುರ್: ಅದೇ ಪೀಠದಿಂದ ಇಂದು ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.