ETV Bharat / bharat

1ರೂಪಾಯಿಗೆ 100 ಎಂಬಿ 4 ಜಿ ಡೇಟಾ.. ಜಿಯೋದಿಂದ ಮತ್ತೊಂದು ಹೊಸ ಕೊಡುಗೆ - reliance jio introduce new data plan

ಮಂಗಳವಾರ ರಾತ್ರಿಯಿಂದ ಜಾರಿಯಾಗುವಂತೆ 1 ರೂಪಾಯಿಗೆ 100 ಎಂಬಿ 4 ಜಿ ಡೇಟಾ ಯೋಜನೆಯನ್ನು ಪರಿಚಯಿಸಿದೆ. ಇದು 64 kbps ವೇಗದಲ್ಲಿ ಬ್ರೌಸ್​ ಆಗಲಿದೆ. 30 ದಿನಗಳವರೆಗೆ ಕಾಲಮಿತಿ ಸಹ ನಿಗದಿ ಮಾಡಲಾಗಿದೆ.

reliance  jio
ಜಿಯೋದಿಂದ ಮತ್ತೊಂದು ಹೊಸ ಡೇಟಾ ಕೊಡುಗೆ
author img

By

Published : Dec 15, 2021, 4:30 PM IST

ನವದೆಹಲಿ: ಇತ್ತೀಚೆಗಷ್ಟೇ ಜಿಯೋ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳು ಕರೆ ಮತ್ತು ಡೇಟಾ ದರ ಹೆಚ್ಚಳ ಮಾಡಿವೆ. ಈ ಮಧ್ಯೆಯೇ ರಿಲಾಯನ್ಸ್​ ಜಿಯೋ ತನ್ನ ಚಂದಾದಾರರಿಗೆ ವಿಶ್ವದಲ್ಲಿಯೇ ಅತಿ ಅಗ್ಗದ ದರದಲ್ಲಿ ಡೇಟಾ ಪ್ಯಾಕ್​ ಯೋಜನೆ ಪರಿಚಯಿಸಿದೆ.

ಮಂಗಳವಾರ ರಾತ್ರಿಯಿಂದ ಜಾರಿಯಾಗುವಂತೆ 1 ರೂಪಾಯಿಗೆ 100 ಎಂಬಿ 4 ಜಿ ಡೇಟಾ ಯೋಜನೆಯನ್ನು ಪರಿಚಯಿಸಿದೆ. ಇದು 64 kbps ವೇಗದಲ್ಲಿ ಬ್ರೌಸ್​ ಆಗಲಿದೆ. 30 ದಿನಗಳವರೆಗೆ ಕಾಲಮಿತಿ ನೀಡಿದೆ. ಇದು ನೀರಿನ ಪ್ಯಾಕೆಟ್ ​ಗಿಂತಲೂ(ಕನಿಷ್ಠ 1 ರಿಂದ 4 ರೂ.) ಅಗ್ಗದ ಯೋಜನೆಯಾಗಿದೆ ಎಂದು ಜಿಯೋ ಹೇಳಿದೆ.

1 ರೂ.ಗೆ 100 ಎಂಬಿ ಡೇಟಾ ಸಿಗಲಿರುವುದರಿಂದ 1 ಜಿಬಿ ಡೇಟಾಗೆ 10 ರೂ. ಆಗಲಿದೆ. ಇದು ಈಗಿರುವ (15 ರೂ.ಗೆ 1 ಜಿಬಿ) ಯೋಜನೆಗಿಂತ ಶೇ.50 ರಷ್ಟು ಅಗ್ಗವಾಗಿದೆ. ಇದು ಯಾವ ಟೆಲಿಕಾಂ ಕಂಪನಿಗಳು ನೀಡಿರದ ವಿಶಿಷ್ಟವಾದ ಮತ್ತು ಸಾಮಾನ್ಯ ಗ್ರಾಹಕರಿಗೆ ಸಹಕಾರಿಯಾದ ಯೋಜನೆ ಇದಾಗಿದೆ ಎಂದು ಜಿಯೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಪ್ರತಿ ಶುಕ್ರವಾರ ಆರ್ಯನ್ ಖಾನ್​ ಎನ್​​ಸಿಬಿಗೆ ಹೋಗುವ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್​

ಟೆಲಿಕಾಂ ದೈತ್ಯ ಏರ್​ಟೆಲ್​ 28 ದಿನಗಳ ವ್ಯಾಲಿಡಿಟಿಯೊಂದಿಗೆ 58 ರೂ. ವೆಚ್ಚದಲ್ಲಿ 3 ಜಿಬಿ ಡೇಟಾ ನೀಡಿದರೆ, ವೊಡಾಫೋನ್​ ಐಡಿಯಾ 24 ಗಂಟೆಗಳ ಅವಧಿಗೆ ಮಾನ್ಯವಾಗುವಂತೆ 1 ಜಿಬಿ ಪ್ಲಾನ್​ಗೆ 19 ರೂ. ಶುಲ್ಕ ವಿಧಿಸುತ್ತಿದೆ. ಜಿಯೋ ಇದೀಗ ನೂತನವಾಗಿ ಕೇವಲ 1 ರೂಪಾಯಿಗೆ 100 ಎಂಬಿ ಡೇಟಾವನ್ನು ನೀಡಲಿದೆ.

ಈ ಯೋಜನೆ ರೀಚಾರ್ಜ್ ಮಾಡಲು ಬಯಸುವ ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ MyJio ಅಪ್ಲಿಕೇಶನ್​ನಲ್ಲಿ ಮಾತ್ರ ಬಳಸಬಹುದಾಗಿದೆ. ಜಿಯೋ ವೆಬ್‌ಸೈಟ್ ಅಥವಾ ಇತರ ರೀಚಾರ್ಜ್ ಪೋರ್ಟಲ್‌ಗಳಲ್ಲಿ ಗೋಚರಿಸುವುದಿಲ್ಲ ಎಂದು ಜಿಯೋ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.