ETV Bharat / bharat

ಆಹಾರ - ಪಾನೀಯಗಳ ಚಿಲ್ಲರೆ ವ್ಯಾಪಾರಕ್ಕೆ ರಿಲಯನ್ಸ್‌ನ ಎಂಟ್ರಿ.. ಪ್ರೆಟ್ ಎ ಮ್ಯಾಂಗರ್‌ನೊಂದಿಗೆ ಕೈಜೋಡಿಸಿದ ಅಂಬಾನಿ! - ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ ಸುದ್ದಿ

ಜಾಗತಿಕ ಆಹಾರ ಸರಪಳಿ ಬ್ರಾಂಡ್ ಪ್ರೆಟ್ ಎ ಮ್ಯಾಂಗರ್‌ನೊಂದಿಗೆ ರಿಲಯನ್ಸ್ ಗ್ರೂಪ್​​ನ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (RBL) ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿದೆ.

Reliance Brands ties up with Pret A Manger, Reliance Brands ties up with global fresh food chain, Reliance Brands Ltd news, global fresh food chain Pret A Manger news, ಪ್ರೆಟ್ ಎ ಮ್ಯಾಂಗರ್‌ನೊಂದಿಗೆ ಕೈ ಜೋಡಿಸಿದ ರಿಲಯನ್ಸ್ ಬ್ರ್ಯಾಂಡ್‌ಗಳು, ರಿಲಯನ್ಸ್ ಬ್ರಾಂಡ್ಸ್ ಜಾಗತಿಕ ತಾಜಾ ಆಹಾರ ಸರಪಳಿಯೊಂದಿಗೆ ಸಂಬಂಧ, ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ ಸುದ್ದಿ, ಜಾಗತಿಕ ತಾಜಾ ಆಹಾರ ಸರಪಳಿ ಪ್ರೆಟ್ ಎ ಮ್ಯಾಂಗರ್ ಸುದ್ದಿ,
ಆಹಾರ-ಪಾನೀಯಗಳ ಚಿಲ್ಲರೆ ವ್ಯಾಪಾರಕ್ಕೆ ರಿಲಯನ್ಸ್‌ನ ಎಂಟ್ರಿ
author img

By

Published : Jul 1, 2022, 7:27 AM IST

ಚೆನ್ನೈ (ತಮಿಳುನಾಡು): ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ ಅಂದರೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯೂ ಜಾಗತಿಕ ಆಹಾರ ಸರಪಳಿ ಬ್ರಾಂಡ್ 'ಪ್ರೆಟ್ ಎ ಮ್ಯಾಂಗರ್' ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಹೊಂದಿರುವುದರ ಬಗ್ಗೆ ಘೋಷಿಸಿದೆ. ಭಾರತೀಯ ಮಾರುಕಟ್ಟೆಗಳಲ್ಲಿ 'ಪ್ರೆಟ್​ ಎ ಮೊಂಜೀರ್' ಬ್ರ್ಯಾಂಡ್ ಅನ್ನು ಬಲಪಡಿಸಲು ಎರಡೂ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ.

ಪ್ರೆಟ್ ಮೊಂಜೀರ್ ತಾಜಾ ಆಹಾರ ಮತ್ತು ಸಾವಯವ ಕಾಫಿಗೆ ವಿಶ್ವಪ್ರಸಿದ್ಧವಾಗಿದೆ. ಈ ಪಾಲುದಾರಿಕೆಯೊಂದಿಗೆ ರಿಲಯನ್ಸ್ ಬ್ರಾಂಡ್‌ಗಳು ಈಗ ದೇಶದಾದ್ಯಂತ ಪ್ರಮುಖ ನಗರಗಳು ಮತ್ತು ಟ್ರಾವೆಲ್ ಹಬ್‌ಗಳಲ್ಲಿ ಆಹಾರ ಸರಪಳಿಗಳನ್ನು ತೆರೆಯಲಿವೆ.

9 ದೇಶಗಳಲ್ಲಿ ಜಾಗತಿಕವಾಗಿ 550 ಮಳಿಗೆಗಳು: ಪ್ರೆಟ್ ಮೊಂಜಿಯರ್‌ನ ಮೊದಲ ಆಹಾರ ಮಳಿಗೆಯನ್ನು 1986ರಲ್ಲಿ ಲಂಡನ್‌ನಲ್ಲಿ ತೆರೆಯಲಾಯಿತು. ಕೈಯಿಂದ ತಯಾರಿಸಿದ ರೆಡಿ - ಟು - ಈಟ್ ತಾಜಾ ಆಹಾರವನ್ನು ನೀಡಲಾಯಿತು. ಬ್ರ್ಯಾಂಡ್ ಪ್ರಸ್ತುತ UK, US, ಯುರೋಪ್ ಮತ್ತು ಏಷ್ಯಾ ಸೇರಿದಂತೆ 9 ದೇಶಗಳಲ್ಲಿ 550 ಆಹಾರ ಮಳಿಗೆಗಳನ್ನು ಹೊಂದಿದೆ. ಮತ್ತೊಂದೆಡೆ ರಿಲಯನ್ಸ್ ಬ್ರ್ಯಾಂಡ್‌ಗಳು ಭಾರತದ ಅತಿದೊಡ್ಡ ಐಷಾರಾಮಿ ಮತ್ತು ಪ್ರೀಮಿಯಂ ಚಿಲ್ಲರೆ ವ್ಯಾಪಾರಿ ಎಂದು ಕರೆಯಲ್ಪಡುತ್ತವೆ. ಕಳೆದ 14 ವರ್ಷಗಳಲ್ಲಿ, ಕಂಪನಿಯು ಪ್ರಪಂಚದಾದ್ಯಂತದ ಬ್ರ್ಯಾಂಡ್‌ಗಳನ್ನು ಅಭಿವೃದ್ಧಿಪಡಿಸಿದೆ.

ಓದಿ: ಭತ್ತ ಕೊಳ್ಳಲು ರಿಲಯನ್ಸ್ ರಿಟೇಲ್ ಲಿ. ಒಪ್ಪಂದ : ರಾಯಚೂರಿನ ಅಕ್ಕಿಗಿರಣಿಗಳಿಗೆ ಕಂಟಕ!

ಆಹಾರದ ಬಗ್ಗೆ ಜಾಗೃತಿ: ಪ್ರಾಟ್ ಜೊತೆಗಿನ ನಮ್ಮ ಪಾಲುದಾರಿಕೆಯು ಭಾರತದಲ್ಲಿ ಆಹಾರ ಮತ್ತು ಪಾನೀಯ ಉದ್ಯಮದ ಬಲವಾದ ಬೆಳವಣಿಗೆಯ ಸಾಮರ್ಥ್ಯದಲ್ಲಿದೆ. RBL ಭಾರತೀಯ ಗ್ರಾಹಕರ ನಾಡಿ ಮಿಡಿತದ ಮೇಲೆ ನಿಕಟ ನಿಗಾ ಇರಿಸುತ್ತದೆ. ಗ್ರಾಹಕರಲ್ಲಿ ಆಹಾರದ ಅರಿವು ಹೆಚ್ಚಾಗಿದೆ. ತಿನ್ನಲು ಸಿದ್ಧ ಆಹಾರವು ಹೊಸ ಫ್ಯಾಷನ್ ಆಗುತ್ತಿದೆ.

ಪ್ರಪಂಚದಾದ್ಯಂತದ ಭಾರತೀಯರು ತಾಜಾ ಮತ್ತು ಸಾವಯವ ಪದಾರ್ಥಗಳೊಂದಿಗೆ ತಯಾರಿಸಿದ ಆಹಾರವನ್ನು ಅನುಭವಿಸಲು ಬಯಸುತ್ತಾರೆ. ಅವರ ಬೇಡಿಕೆಯನ್ನು ಚೆನ್ನಾಗಿ ಪೂರೈಸಲು ಪ್ರೆಟ್ ಸಮರ್ಥವಾಗಿದೆ ಎಂದು ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ ಎಂಡಿ ದರ್ಶನ್ ಮೆಹ್ತಾ ಹೇಳಿದರು.

ನಾವು ಉತ್ಸುಕರಾಗಿದ್ದೇವೆ: ಎರಡು ದಶಕಗಳ ಹಿಂದೆ ನಾವು ಏಷ್ಯಾದಲ್ಲಿ ಪ್ರೆಟ್‌ನ ಮೊದಲ ಮಳಿಗೆಯನ್ನು ತೆರೆದಿದ್ದೇವೆ. ನಮ್ಮ ತಾಜಾ ಆಹಾರ ಮತ್ತು ಶೇ. 100 ಸಾವಯವ ಕಾಫಿಯನ್ನು ಏಷ್ಯಾದ್ಯಂತ ಹೊಸ ನಗರಗಳಿಗೆ ತರಲು ನಮಗೆ ಸ್ಫೂರ್ತಿಯಾಗಿದೆ. RBL ತನ್ನ ಪರಿಣತಿಯೊಂದಿಗೆ ನಮ್ಮ ಬ್ರ್ಯಾಂಡ್ ಅನ್ನು ಭಾರತದಲ್ಲಿ ಯಶಸ್ವಿಯಾಗಲು ಸಹಾಯ ಮಾಡುತ್ತದೆ.

ಇಲ್ಲಿಯವರೆಗಿನ ನಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ಜಾಗತಿಕ ಫ್ರ್ಯಾಂಚೈಸ್ ಪಾಲುದಾರಿಕೆಯಲ್ಲಿ ಅವರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಅಂತಾ ಪ್ರೆಟ್ ಮೊಂಜಿಯರ್‌ನ ಸಿಇಒ ಪನೊ ಕ್ರಿಸ್ಟೌ ಹೇಳಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.