ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ‘ತೈಲದಿಂದ ರಾಸಾಯನಿಕ’ (ಒ 2 ಸಿ) ವ್ಯವಹಾರವನ್ನು ಸ್ವತಂತ್ರ ಅಂಗಸಂಸ್ಥೆಯಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಮತ್ತು ಶೇಕಡಾ 100 ರಷ್ಟು ನಿರ್ವಹಣಾ ನಿಯಂತ್ರಣ ಉಳಿಸಿಕೊಳ್ಳಲಿದೆ.
ಎಲ್ಲ ಸಂಸ್ಕರಣೆ, ಮಾರ್ಕೆಟಿಂಗ್ ಮತ್ತು ಪೆಟ್ರೋಕೆಮಿಕಲ್ ಸ್ವತ್ತುಗಳನ್ನು ಒ 2 ಸಿ ಅಂಗಸಂಸ್ಥೆಗೆ ವರ್ಗಾಯಿಸಲಾಗುವುದು ಎಂದು ಸೋಮವಾರ ತಡರಾತ್ರಿ ಷೇರು ವಿನಿಮಯ ಕೇಂದ್ರಗಳಲ್ಲಿ ನಿಯಂತ್ರಕ ದಾಖಲಾತಿಗಳಲ್ಲಿ ತಿಳಿಸಲಾಗಿದೆ.
ಪ್ರವರ್ತಕ ಗುಂಪು ಒ2ಸಿ ವ್ಯವಹಾರದಲ್ಲಿ ಶೇ 49.14 ರಷ್ಟು ಪಾಲನ್ನು ಮುಂದುವರಿಸಲಿದೆ ಮತ್ತು ಈ ಪ್ರಕ್ರಿಯೆಯು ಕಂಪನಿಯ ಷೇರುದಾರರಲ್ಲಿ ಯಾವುದೇ ಬದಲಾವಣೆಗೆ ಕಾರಣವಾಗುವುದಿಲ್ಲ. ಅಸ್ತಿತ್ವದಲ್ಲಿರುವ ಒ2ಸಿ ಆಪರೇಟಿಂಗ್ ತಂಡವು ವ್ಯವಹಾರದ ವರ್ಗಾವಣೆಯೊಂದಿಗೆ ಹೊಸದಾಗಿ ರಚಿಸಲಾದ ಅಂಗಸಂಸ್ಥೆಗೆ ಸ್ಥಳಾಂತರಗೊಳ್ಳುತ್ತದೆ. ಆದರೆ ಗಳಿಕೆಯ ಹಣದ ಹರಿವಿನ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಆರ್‌ಐಎಲ್ ತಿಳಿಸಿದೆ.
ಆರ್‌ಐಎಲ್ ಮತ್ತು ಅದರ ಒ 2 ಸಿ ಅಂಗಸಂಸ್ಥೆಯು 2035 ರ ವೇಳೆಗೆ ನಿವ್ವಳ ಇಂಗಾಲದ ಶೂನ್ಯ ಗುರಿಗಳತ್ತ ಸಾಗಲು ಒಟ್ಟಾಗಿ ಕೆಲಸ ಮಾಡುತ್ತಿದೆ. ಕಾರ್ಬನ್ ಡೈ ಆಕ್ಸೈಡ್ ಅನ್ನು ಉಪಯುಕ್ತ ಉತ್ಪನ್ನಗಳು ಮತ್ತು ರಾಸಾಯನಿಕಗಳಾಗಿ ಪರಿವರ್ತಿಸಲು ಒ 2 ಸಿ ವ್ಯವಹಾರವು ಮುಂದಿನ ಪೀಳಿಗೆಯ ಇಂಗಾಲದ ಸೆರೆ ಹಿಡಿಯುವಿಕೆ ಮತ್ತು ಶೇಖರಣಾ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುತ್ತದೆ.
ಇದನ್ನೂ ಓದಿ: 15ನೇ ದಿನವೂ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ.. ಇಂಧನ ದರ ಕಡಿತಗೊಳಿಸಿದ ನಾಗಾಲ್ಯಾಂಡ್, ಮೇಘಾಲಯ
ಇದು ಸಾಂಪ್ರದಾಯಿಕ ಇಂಗಾಲ ಆಧಾರಿತ ಇಂಧನಗಳಿಂದ ಹೈಡ್ರೋಜನ್ ಆರ್ಥಿಕತೆಗೆ ಪರಿವರ್ತನೆಗೊಳ್ಳುವುದನ್ನು ವೇಗಗೊಳಿಸುತ್ತದೆ. ಅಭಿವೃದ್ಧಿಯು ಅದರ ಏಕೀಕೃತ ಆರ್ಥಿಕ ಸ್ಥಿತಿ, ಬಂಡವಾಳದ ವೆಚ್ಚ, ಸಾಲಗಳು, ಹೂಡಿಕೆ ದರ್ಜೆಯ ಅಂತಾರಾಷ್ಟ್ರೀಯ ಮತ್ತು ದೇಶೀಯ ಎಎಎ ಕ್ರೆಡಿಟ್ ರೇಟಿಂಗ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆರ್‌ಐಎಲ್ ಹೇಳಿದೆ.
ಈ ಕ್ರಮವು ಸೌದಿ ಅರಾಮ್ಕೊ (Soudi Aramco) ಜೊತೆಗಿನ ಒಪ್ಪಂದ ಸೇರಿದಂತೆ ಕಾರ್ಯತಂತ್ರದ ಸಹಭಾಗಿತ್ವದ ಮೂಲಕ ಮೌಲ್ಯ ಸೃಷ್ಟಿಗೆ ಅನುಕೂಲವಾಗಲಿದೆ. ಆರ್‌ಐಎಲ್‌ನ ಒ 2 ಸಿ ವ್ಯವಹಾರದಲ್ಲಿ ಶೇ 20 ರಷ್ಟು ಪಾಲನ್ನು ಸ್ವಾಧೀನ ಪಡಿಸಿಕೊಳ್ಳಲು ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ಅರಾಮ್ಕೊ ಜೊತೆ ಮಾತುಕತೆ ಇನ್ನೂ ಮುಂದುವರೆದಿದೆ ಎಂದು ಕಂಪನಿ ತಿಳಿಸಿದೆ.
ಎಫ್‌ವೈ 22 ರ ಎರಡನೇ ತ್ರೈಮಾಸಿಕದ ವೇಳೆಗೆ ಮರು ಸಂಘಟನೆಗೆ ವಿವಿಧ ಅನುಮೋದನೆಗಳು ಜಾರಿಯಲ್ಲಿವೆ. ಮರುಸಂಘಟನೆಯ ನಂತರ, ರಿಲಯನ್ಸ್ ರಿಟೇಲ್ ವೆಂಚರ್ಸ್‌ನಲ್ಲಿ ಆರ್‌ಐಎಲ್ ಪಾಲು ಶೇ 85.1 ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 67.3 ರಷ್ಟಿದೆ.