ETV Bharat / bharat

ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಭರ್ಜರಿ ನೇಮಕಾತಿ: 4062 ಶಿಕ್ಷಕ, ಶಿಕ್ಷಕೇತರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟ

ಮುಂದಿನ ಮೂರು ವರ್ಷ ಏಕಲವ್ಯ ವಸತಿ ಶಾಲೆಗಳಲ್ಲಿ 38,008 ಹುದ್ದೆ ಭರ್ತಿ ನಡೆಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದ್ದರು. ಅದರಂತೆ ಇದೀಗ 4062 ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

author img

By

Published : Jun 29, 2023, 10:35 AM IST

Recruitment in Ekalavya Model Residential School; 4062  post of teacher, non-teacher

ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಕೇಂದ್ರ ಸರ್ಕಾರದಿಂದ ಸ್ಥಾಪಿತವಾಗಿರುವ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಮುಂದಿನ ಮೂರು ವರ್ಷ ಭರ್ಜರಿ ಉದ್ಯೋಗ ನೇಮಕಾತಿ ನಡೆಸಲಾಗುವುದು ಎಂದು 2023ರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಘೋಷಿಸಿದ್ದರು. ಅದರಂತೆ ಇದೀಗ ಬೃಹತ್​ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಧಿಸೂಚನೆ
ಅಧಿಸೂಚನೆ

ಶೈಕ್ಷಣಿಕ ಕ್ಷೇತ್ರದದ ಉದ್ಯೋಗಾಕಾಂಕ್ಷಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ದೇಶದೆಲ್ಲೆಡೆ ಸ್ಥಾಪಿತವಾಗಿರುವ ವಸತಿ ಶಾಲೆಯಲ್ಲಿ ಉದ್ಯೋಗ ನಿರ್ವಹಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ವಸತಿ ಶಾಲೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಒಟ್ಟು 4062 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹುದ್ದೆ, ನೇಮಕಾತಿ ಪ್ರಕ್ರಿಯೆ ಸೇರಿದಂತೆ ಅಗತ್ಯ ಮಾಹಿತಿಗಳು ಇಲ್ಲಿದೆ.

ಹುದ್ದೆ ವಿವರ: ಏಕಲವ್ಯ ಶಾಲೆಯಲ್ಲಿ 303 ಪ್ರಿನ್ಸಿಪಾಲ್​, 2266 ಪಿಜಿಟಿ, 361 ಅಕೌಂಟೆಟ್​​, 759 ಜ್ಯೂ ಸೆಕ್ರೆಟರಿ ಅಸಿಸ್ಟಂಸ್​, 373 ಲ್ಯಾಬ್​ ಅಟೆಂಡಂಟ್​ ಸೇರಿದಂತೆ ಒಟ್ಟು 4062 ಹುದ್ದೆಗಳ ಭರ್ತಿ ನಡೆಯಲಿದೆ.

ವಿದ್ಯಾರ್ಹತೆ- ವಯೋಮಿತಿ

  • ಪ್ರಿನ್ಸಿಪಾಲ್​ : ಬಿಎಡ್​ ಮತ್ತು ಸ್ನಾತಕೋತ್ತರ ಪದವಿ- 50
  • ಪಿಜಿಟಿ: ಸ್ನಾತಕೋತ್ತರ ಪದವಿ, ಬಿಎಡ್​​, - 40 ವರ್ಷ
  • ಅಕೌಂಟೆಂಟ್​​: ವಾಣಿಜ್ಯ ಪದವಿ- 30 ವರ್ಷ
  • ಜ್ಯೂ ಸೆಕ್ರೆಟ್ರಿಯಟ್​ ಅಸಿಸ್ಟಂಟ್​- ಪಿಯುಸಿ- 30 ವರ್ಷ
  • ಲ್ಯಾಬ್​ ಅಟೆಂಡೆಟ್​​- ಎಸ್​ಎಸ್​ಎಲ್​ಸಿ- 30 ವರ್ಷ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಆನ್​ಲೈನ್​ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ 2000, 1500, 1000 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಈ ಹುದ್ದೆಗಳಿಗೆ ಹುದ್ದೆಗಳಿಗೆ ಅನುಸಾರವಾಗಿ 18 ಸಾವಿರದಿಂದ 2,09,200 ರೂ ವರೆಗೆ ವೇತನ ನಿಗದಿ ಪಡಿಸಲಾಗಿದೆ.

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ತಮ್ಮ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿ ಭರ್ತಿಗೂ ಮುನ್ನ ಅಧಿಕೃತ ಅಧಿಸೂಚನೆಯನ್ನು ಅಭ್ಯರ್ಥಿಗಳು ಸರಿಯಾಗಿ ಪರಿಶೀಲಿಸತಕ್ಕದು. ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಕೆ ಜೂನ್​ 28ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 31 ಆಗಿದೆ.

ಈ ಹುದ್ದೆ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು ಏಕಲವ್ಯ ಮಾದರಿ ವಸತಿ ಶಾಲೆಯ ಅಧಿಕೃತ ಜಾಲತಾಣವಾದ emrs.tribal.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: Karnataka Govt Jobs: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೇಮಕಾತಿ.. ಇಲ್ಲಿದೆ ಸಂಪೂರ್ಣ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.