ಕಾನ್ಪುರ್: ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೊರೊನಾ ತಾಂಡವವಾಡುತ್ತಿದ್ದು, ನಿನ್ನೆ ಒಂದೇ ದಿನ 476 ಕೋವಿಡ್ ರೋಗಿಗಳ ಅಂತ್ಯಕ್ರಿಯೆ ಇಡೀ ರಾತ್ರಿ ನಡೆಸಲಾಯಿತು.
ಕಾನ್ಪುರ್ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜೊತೆಗೆ ಶವ ಸಂಸ್ಕಾರ ಕೇಂದ್ರದ ಬಳಿಯೂ ಮೃತ ಕೋವಿಡ್ ರೋಗಿಗಳ ದೇಹದ ಸಂಖ್ಯೆಯೂ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 476 ಶವ ಸಂಸ್ಕಾರ ಮಾಡಲಾಗಿದೆ. ಅಷ್ಟೇ ಅಲ್ಲದೇ ಮಧ್ಯರಾತ್ರಿಯವರೆಗೂ ಶವ ಸಂಸ್ಕಾರದ ಕಾರ್ಯವೇ ನಡೆಯುತ್ತಲೇ ಇತ್ತು. ಅಷ್ಟಾದ್ರೂ ನಿನ್ನೆ ನಗರದಲ್ಲಿ ಕೋವಿಡ್ನಿಂದ ಸಾವನ್ನಪ್ಪಿರುವ ರೋಗಿಗಳ ಸಂಖ್ಯೆ 9 ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲೆಯಲ್ಲಿ ಕೊರೊನಾ ಮೃತರ ಸಂಖ್ಯೆ ದಿನದಿಂದ ಬೆಳೆಯುತ್ತಲೇ ಇದೆ. ಅಷ್ಟೇ ಅಲ್ಲ ಕೊರೊನಾ ಸೋಂಕಿತರ ಮೃತದೇಹಗಳ ಅಂತ್ಯಕ್ರಿಯೆಗಾಗಿ ಉದ್ದನೇ ಸಾಲು ದಿನವಿಡೀ ನಿಂತಿರುತ್ತೆ. ಹಗಲಿರುಳು ಶವ ಸಂಸ್ಕಾರದ ಕಾರ್ಯ ಮಾಡುತ್ತಿದ್ದು, ಕುಲುಮೆ ಅಥವಾ ಚಿಮಣಿಗಳು ಅತೀ ಹೆಚ್ಚು ಕಾವಿನಿಂದಾಗಿ ಮುರಿಯುತ್ತಿವೆ.
ಇನ್ನೊಂದು ಸಂಗತಿಯೆಂದ್ರೆ ಜಿಲ್ಲಾಡಳಿತ ಕಳೆದ 24 ಗಂಟೆಯಲ್ಲಿ ಕೇವಲ 9 ಜನ ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ ಎಂದು ಹೇಳಿದೆ. ಆದ್ರೆ ಒಂದೇ ದಿನ 476 ಕೋವಿಡ್ ರೋಗಿಗಳ ಅಂತ್ಯಕ್ರಿಯೆ ಮಾಡಲು ಹೇಗೆ ಸಾಧ್ಯವೆಂಬ ಪ್ರಶ್ನೆ ಮೂಡಿದೆ.