ETV Bharat / bharat

ಇಂಥವರಿಗೆ ಪಕ್ಷ ಟಿಕೆಟ್ ನೀಡಬಾರದು, ನೀಡಿದರೂ ಜನ ಮತ ಹಾಕಬಾರದು; ರಾಷ್ಟ್ರೀಯ ಮಹಿಳಾ ಆಯೋಗ - ಎಸ್​​ಪಿ ಸಂಸದೆ ಜಯಾ ಬಚ್ಚನ್

ರಾಜ್ಯ ಕಾಂಗ್ರೆಸ್​ ನಾಯಕರೊಬ್ಬರು ನೀಡಿರುವ ವಿವಾದಾತ್ಮಕ ಹೇಳಿಕೆ ಈಗ ರಾಷ್ಟ್ರ ರಾಜಧಾನಿ ದೆಹಲಿಗೂ ತಲುಪಿದೆ. ತಮ್ಮ ಮಾತಿನ ಅರಿವಿನ ಬಳಿಕ ಕ್ಷಮೆ ಕೇಳಿದ್ದಾರೆ. ಆದರೆ, ಹಲವರು ಇವರ ಅತ್ಯಾಚಾರದ ಹೇಳಿಕೆ ಖಂಡಿಸಿ ಕಿಡಿ ಕಾರುತ್ತಿದ್ದಾರೆ.

Reaction on Ramesh kumar's controversial rape statement

author img

By

Published : Dec 17, 2021, 4:50 PM IST

Updated : Dec 17, 2021, 8:07 PM IST

ನವದೆಹಲಿ: ಅತ್ಯಾಚಾರ ಕುರಿತಂತೆ ಕರ್ನಾಟಕದ ವಿಧಾನಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್​ ಕುಮಾರ್​​ ನೀಡಿದ್ದ ಹೇಳಿಕೆ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ (NCW) ಅಧ್ಯಕ್ಷೆ ರೇಖಾ ಶರ್ಮಾ, ಸಚಿವೆ ಸ್ಮೃತಿ ಇರಾನಿ, ಎಸ್​​ಪಿ ಸಂಸದೆ ಜಯಾ ಬಚ್ಚನ್​, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ - ತೇಜಸ್ವಿ ಸೂರ್ಯ, ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೆಂಡಕಾರಿದ್ದಾರೆ.

Reaction on Ramesh kumar's controversial rape statement
ವಿವಾದಾತ್ಮಕ ಹೇಳಿಕೆ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ

ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಜಯಾ ಬಚ್ಚನ್, ಇದು ನಾಚಿಕೆಗೇಡಿನ ಸಂಗತಿ. ಸದನದಲ್ಲಿ ಇನ್ನು ಮುಂದೆ ಯಾರೂ ಈ ರೀತಿ ಮಾತನಾಡದಂತೆ ಕಾಂಗ್ರೆಸ್​ ಪಕ್ಷ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ರಮೇಶ್ ಕುಮಾರ್ ಜೀ ಅವರ ಹೇಳಿಕೆ ಅತ್ಯಂತ ಆಕ್ಷೇಪಾರ್ಹವಾಗಿದೆ. ಸಭಾಪತಿಯಾಗಿದ್ದಾಗ ಅವರು ಈ ಹಿಂದೆಯೂ ಅತ್ಯಾಚಾರದ ಬಗ್ಗೆ ಇಂತಹ ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಖಂಡಿಸಿ ಬೆಳಗಾವಿಯಲ್ಲಿ ಇಂದು ಯುವಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಧಾನಸಭೆಯಲ್ಲಿ ಪದೇ ಪದೇ ಇಂತಹ ಹೇಳಿಕೆ ನೀಡುವವರ ಬಗ್ಗೆ ಕ್ರಮ ಜರುಗಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಒತ್ತಾಯ ಮಾಡಿದ್ದಾರೆ.

ಇಂತಹ ಸಣ್ಣ ಮತ್ತು ಕೀಳು ಮಟ್ಟದ ಹೇಳಿಕೆ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ. ಸಂತ್ರಸ್ತರು ಅನುಭವಿಸುವ ಮಾನಸಿಕ ಆಘಾತದ ಬಗ್ಗೆ ಈ ರೀತಿಯ ಹೇಳಿಕೆ ಸಲ್ಲದು. ರಮೇಶ್ ಕುಮಾರ್ ಅವರು ಮಾತನಾಡುತ್ತಿದ್ದರೂ ಸ್ಪೀಕರ್ ನಗುತ್ತಿದ್ದರು.

ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಹೇಳಿಕೆ ನೀಡುವವರಿಗೆ ಪಾಠವಾಗುವಂತೆ ಕ್ರಮ ಕೈಗೊಳ್ಳಿ ಎಂದು ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಕಿಡಿ ಕಾರಿದ್ದಾರೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಕೂಡ ರಮೇಶ್‌ ಕುಮಾರ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್‌, ಉತ್ತರ ಪ್ರದೇಶದಲ್ಲಿ ಲಡ್ಕಿ ಹೂ, ಲಡ್ ಸಕ್ತಿ ಹೂ ಎಂಬ ಘೋಷಣೆಗಳನ್ನು ಕೂಗುವ ಮೊದಲು ಕಾಂಗ್ರೆಸ್ ರಮೇಶ್‌ ಕುಮಾರ್‌ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

  • These are the ppl who are there to make better laws for the people but they were laughing at that insensitive remark. I wonder how they will be working for the betterment of people: NCW Chairperson Rekha Sharma on Karnataka Congress MLA KR Ramesh Kumar's 'rape' remark pic.twitter.com/RVOmBAU7Y1

    — ANI (@ANI) December 17, 2021 " class="align-text-top noRightClick twitterSection" data=" ">

ಇನ್ನು ರಮೇಶ್ ಕುಮಾರ್ ಅವರ 'ಅತ್ಯಾಚಾರ' ಹೇಳಿಕೆ ಖಂಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ (NCW) ಅಧ್ಯಕ್ಷೆ ರೇಖಾ ಶರ್ಮಾ, ಜನರಿಗಾಗಿ ಉತ್ತಮ ಕಾನೂನುಗಳನ್ನು ರೂಪಿಸುವವರು ಇವರೇ. ಆದರೆ, ಇಂಥವರೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರಿಂದ ಜನರ ಒಳಿತನ್ನು ನಿರೀಕ್ಷಿಸುವುದು ಹೇಗೆ ಎಂದಿದ್ದಾರೆ.

ಒಂದು ಕಡೆ ಕಾನೂನು ರೂಪಿಸಿ ಸಮಾಜ ಬಲವರ್ಧನೆ ಮಾಡುವವರು ಇವರೇ, ಇನ್ನೊಂದು ಕಡೆ ಅತ್ಯಾಚಾರವನ್ನು ಉತ್ತೇಜಿಸುವವರು ಇವರೇ. ಇಂಥವರಿಗೆ ಪಕ್ಷ ಟಿಕೆಟ್ ನೀಡಬಾರದು, ನೀಡಿದರೂ ಜನರು ಮತ ಹಾಕಿ ಇಂಥವರನ್ನು ಆಯ್ಕೆ ಮಾಡಬಾರದು ಎಂದು ಮತದಾರರಿಗೂ ಅವರು ಮನವಿ ಮಾಡಿಕೊಂಡಿದ್ದಾರೆ.

  • On one side they are making laws, strengthing laws and on another side, they are promoting rape. The party should not give tickets to such persons & public also shouldn't vote for such people: NCW Chairperson Rekha Sharma on Karnataka Congress MLA KR Ramesh Kumar's 'rape' remark pic.twitter.com/HK7fO3SCnh

ಇದನ್ನೂ ಓದಿ: ಅತ್ಯಾಚಾರದ ಕುರಿತ ಹೇಳಿಕೆ.. ಮಹಿಳೆಯರಿಗೆ ನೋವಾಗಿದ್ರೇ ಪ್ರಾಮಾಣಿಕವಾಗಿ ಕ್ಷಮೆ ಕೋರುವೆ.. ರಮೇಶ್​ ಕುಮಾರ್​

Last Updated : Dec 17, 2021, 8:07 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.