ETV Bharat / bharat

ಮೋದಿ ಹೇಳಿದ್ದೇನೂ ಜಾರಿಗೆ ಬಂದಿಲ್ಲ: ರೈತರ ಸಮಸ್ಯೆ ಬಗೆಹರಿಸದ ಪ್ರಧಾನಿ ವಿರುದ್ಧ ಖರ್ಗೆ ಕಿಡಿ

author img

By

Published : Aug 15, 2021, 1:32 PM IST

ಪ್ರಧಾನಿ ನರೇಂದ್ರ ಮೋದಿ ಇವತ್ತು ಮಾಡಿದ್ದು ಕೇವಲ ಭಾಷಣ. ರೈತರ ಸಮಸ್ಯೆಗಳ ಬಗ್ಗೆ ಅವರು ಮಾತಾಡಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

Reaction of Mallikarjun Kharge on PM Modis independence day speech
ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ಆರಂಭಿಸಿ ವರ್ಷ ಕಳೆದಿದ್ದು, ಇನ್ನೂ ಅನ್ನದಾತರ ಸಮಸ್ಯೆ ಬಗೆಹರಿಸದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್​ ಹಿರಿಯ ನಾಯಕ ಹಾಗೂ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಭಾಷಣದ ಬಗ್ಗೆ ಖರ್ಗೆ ಪ್ರತಿಕ್ರಿಯೆ

75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ 85 ನಿಮಿಷಗಳ ಸುದೀರ್ಘ ಭಾಷಣ ಮಾಡಿದರು. ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಪಿಎಂ ಮೋದಿ ಮಾಡಿದ್ದು ಕೇವಲ ಭಾಷಣ. ರೈತರ ಸಮಸ್ಯೆಯನ್ನ ಅವರು ಬಗೆಹರಿಸಲೇ ಇಲ್ಲ. ಒಂದು ವರ್ಷದಿಂದ ರೈತರ ಹೋರಾಟ ನಡೆಯುತ್ತಲೇ ಇದೆ. ಇದರ ಬಗ್ಗೆ ಮಾತಾಡಿಲ್ಲ. ಅನ್ನದಾತರಿಗಾಗಿ ಮೋದಿ ಹೇಳಿದ್ದೇನೂ ಜಾರಿಗೆ ಬಂದಿಲ್ಲ. ಆರಂಭದಿಂದಲೂ ಉದ್ಯೋಗದ ಭರವಸೆ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ. ಇರುವ ಸಮಸ್ಯೆಗಳನ್ನೇ ಬಗೆಹರಿಸಿಲ್ಲ, ನೀಡಿದ ಭರವಸೆಗಳನ್ನೇ ಇನ್ನೂ ಪೂರೈಸಿಲ್ಲ. ಅದನ್ನು ಬಿಟ್ಟು ಈಗಲೇ 100ನೇ ವರ್ಷದ ಸ್ವಾತಂತ್ರ್ಯ ದಿನದ ಬಗ್ಗೆ ಮಾತನಾಡುತ್ತಾರೆ ಎಂದರು.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ.. ದೇಶದ ಜನತೆಗೆ ಪ್ರಧಾನಿ ಘೋಷಿಸಿದ ಯೋಜನೆಗಳೇನು?

ಪ್ರತಿವರ್ಷದಂತೆ ನಾವು ಸ್ವಾತಂತ್ರ್ಯ ದಿನವನ್ನ ಆಚರಿಸುತ್ತಿದ್ದೇವೆ. ಆದರೆ ನಾವು ತುಂಬಾ ದೂರ ನಡೆದು ಬಂದಿದ್ದೇವೆ. ಈಗ ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಲು ಮತ್ತು ದೇಶದಲ್ಲಿ ಬದುಕಲು ನಾವೇ ಜವಾಬ್ದಾರರು ಎಂದು ಇದೇ ವೇಳೆ ಖರ್ಗೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.