ETV Bharat / bharat

ತಂದೆ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲು ಸ್ವಾತಿ ಮಲಿವಾಳ ಮಾಜಿ ಪತಿ ಒತ್ತಾಯ

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಲೈಂಗಿಕ ದೌರ್ಜನ್ಯ ಆರೋಪ- ಸ್ವಾತಿ ಮಲಿವಾಲ್​ ಅವರನ್ನು ನಾರ್ಕೋ ಮತ್ತು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲು ಮಾಜಿ ಪತಿ ನವೀನ್​ ಜೈಹಿಂದ್​​ ಒತ್ತಾಯ

author img

By

Published : Mar 13, 2023, 9:09 PM IST

reaction-naveen-jaihind-on-swati-maliwal-allegation-on-her-father
ತಂದೆ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಸ್ವಾತಿ ಮಲಿವಾಲ್​ ನಾರ್ಕೋ ಮತ್ತು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲು ಮಾಜಿ ಪತಿ ಒತ್ತಾಯ

ರೋಹ್ಟಕ್ (ಹರ್ಯಾಣ) : ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ತಮ್ಮ ತಂದೆಯ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿರುವ ಬೆನ್ನಲ್ಲೇ ಇವರ ಮಾಜಿ ಪತಿ ನವೀನ್ ಜೈಹಿಂದ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ವಾತಿ ಮಲಿವಾಲ್ ಮಾರ್ಚ್ 11 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ತಂದೆಯ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಬಳಿಕ ತನ್ನ ತಾಯಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಅಜ್ಜಿಯರ ಸಹಾಯದಿಂದ ಈ ನೋವಿನಿಂದ ಹೊರಬರಲು ಸಾಧ್ಯವಾಯಿತು ಎಂದು ಹೇಳಿದ್ದರು.

  • मैडम भूतों से भगवान लड़ लेंगे व सजा भी दे देंगे आप भेड़ियो से लड़ो।आपकी बात सच भी है तो शायद ये पूरा सच नही है!शोषण और यौन शोषण में फ़र्क़ होता है।ख़ुद का नार्को टेस्ट करवाके ख़ुद सार्वजनिक करो क्योंकि पिता पुत्री के पवित्र रिश्ते पर आँच ना आए और डॉक्टर से मैंटल हैल्थ चैक करवाओ🙏 pic.twitter.com/LvoofqZyk9

    — नवीन जयहिन्द (@NaveenJaihind) March 12, 2023 " class="align-text-top noRightClick twitterSection" data=" ">

ಈ ಬಗ್ಗೆ ಭಾನುವಾರ ಟ್ವಿಟರ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ನವೀನ್​ ಜೈಹಿಂದ್​, ಅವರ ತಂದೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಸ್ವಾತಿ ಮಲಿವಾಲ್​ ನನ್ನೊಂದಿಗೆ ಚರ್ಚಿಸಿಯೇ ಇಲ್ಲ. ಆದರೆ,ಅವರು ತಮ್ಮ ತಂದೆ ಹೊಡೆಯುತ್ತಿದ್ದರು ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯದ ವಿಷಯವು ನಮ್ಮ ನಡುವೆ ಎಂದಿಗೂ ಮುನ್ನೆಲೆಗೆ ಬಂದಿಲ್ಲ. ಈ ಆರೋಪ ಸಂಬಂಧ ಸ್ವಾತಿ ಮಲಿವಾಲ್‌ ಅವರಿಗೆ ನಾರ್ಕೋ ಮತ್ತು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇನ್ನು, ಸ್ವಾತಿ ಮಲಿವಾಲ್​ ಅವರು ತನ್ನ ತಂದೆ ವಿರುದ್ಧ ಮಾಡಿರುವ ಆರೋಪಗಳು ತುಂಬಾ ಗಂಭೀರತೆಗಳಿಂದ ಕೂಡಿವೆ. ಅವರ ತಂದೆ ಮಾಜಿ ಸೈನಿಕರಾಗಿದ್ದು, ಅವರು ನಿಧನರಾಗಿ ಸುಮಾರು 20 ವರ್ಷಗಳು ಕಳೆದಿವೆ. ಈ ಬಗ್ಗೆ ಸ್ವಾತಿ ಅವರೇ ನಿಜ ಸಂಗತಿಗಳನ್ನು ತಿಳಿಸಬೇಕು. ಇವರ ನಡುವೆ ತಂದೆ ಮತ್ತು ಮಗಳ ಸಂಬಂಧ ಇತ್ತು ಎಂದು ನಾನು ನಂಬುತ್ತೇನೆ. ಈಗ ಜನರಿಗೆ ಯಾವುದೇ ತಪ್ಪು ಸಂದೇಶ ಹೋಗಬಾರದು. ಈ ಸಂಬಂಧ ಅವರೇ ನಾರ್ಕೋ ಟೆಸ್ಟ್ ಮಾಡಿಸಿ, ಸುಳ್ಳು ಪತ್ತೆ ಪರೀಕ್ಷೆ ಮಾಡಿಸಿ ವರದಿಯನ್ನು ಬಹಿರಂಗಪಡಿಸಲಿ ಎಂದು ಮಾಜಿ ಪತಿ ಒತ್ತಾಯಿಸಿದ್ದಾರೆ.

ಒಂದು ವೇಳೆ ಇಂತಹ ಘಟನೆಗಳು ನಡೆದಿದ್ದರೆ ಆಕೆ ಯಾವುದೋ ಆಘಾತಕ್ಕೆ ಒಳಗಾಗಿರಬಹುದೆಂದು ನಾನು ಭಾವಿಸುತ್ತೇನೆ. ಜೊತೆಗೆ ಮಾನಸಿಕವಾಗಿ ತೊಂದರೆ ಅನುಭವಿಸಿರುವ ಸಾಧ್ಯತೆ ಇರುವುದರಿಂದ ಅವರಿಗೆ ವೈದ್ಯರ ಅಗತ್ಯವಿದೆ. ಈ ಸಂಬಂಧ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.

ನವೀನ್ ಜೈಹಿಂದ್ ಮತ್ತು ಸ್ವಾತಿ ಮಲಿವಾಲ್ ಅವರು 2012ರ ಜನವರಿ 23 ರಂದು ವಿವಾಹವಾಗಿದ್ದರು. ಇಬ್ಬರೂ ದೆಹಲಿಯ ಅಣ್ಣಾ ಚಳವಳಿಯ ಸಂದರ್ಭ ಪರಸ್ಪರ ಭೇಟಿಯಾಗಿದ್ದರು. ಬಳಿಕ 2020ರ ಫೆಬ್ರವರಿ 18ರಂದು ಇಬ್ಬರೂ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಈ ಬಗ್ಗೆ ಸ್ವತಃ ಸ್ವಾತಿ ಅವರೇ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು.ಈ ಟ್ವೀಟ್​ನಲ್ಲಿ , ನಾನು ಮತ್ತು ನವೀನ್ ವಿಚ್ಛೇದನ ಪಡೆದಿದ್ದೇವೆ. ಕಾಲ್ಪನಿಕ ಕಥೆಗಳು ಕೊನೆಗೊಂಡಾಗ ತುಂಬಾ ನೋವಾಗುತ್ತದೆ. ಕೆಲವೊಮ್ಮೆ ಒಳ್ಳೆಯ ಜನರು ಕೂಡ ಒಟ್ಟಿಗೆ ಇರಲು ಸಾಧ್ಯವಿಲ್ಲ. ನಾನು ಯಾವಾಗಲೂ ಅವರನ್ನು ತುಂಬಾ ಮಿಸ್​ ಮಾಡುತ್ತೇನೆ ಎಂದು ಬರೆದಿದ್ದರು.

ಇದನ್ನೂ ಓದಿ : ನನ್ನ ತಂದೆ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.