ETV Bharat / bharat

ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ ಜಗತ್ತಿನ ಮೊದಲ ಕೇಂದ್ರೀಯ ಬ್ಯಾಂಕ್ ಆರ್​ಬಿಐ

ಟ್ವಿಟರ್​ನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್​ಗಳನ್ನು ಹಿಂದಿಕ್ಕಿದ ಆರ್​ಬಿಐ ಮಿಲಿಯನ್ ಫಾಲೋವರ್ಸ್ ಕ್ಲಬ್ ಸೇರುವ ಮುಖೇನ ಹೊಸ ದಾಖಲೆ ಬರೆದಿದೆ.

ಒಂದು ಮಿಲಿಯನ್ ಫಾಲೋವರ್ಸ್ ಹೊಂದಿದ ಜಗತ್ತಿನ ಮೊದಲ ಕೇಂದ್ರಿಯ ಬ್ಯಾಂಕ್ ಆರ್​ಬಿಐ

author img

By

Published : Nov 22, 2020, 5:06 PM IST

Updated : Nov 22, 2020, 5:55 PM IST

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಿಲಿಯನ್ ಟ್ವಿಟರ್ ಫಾಲೋವರ್ಸ್ ಹೊಂದಿದ ಜಗತ್ತಿನ ಮೊದಲ ಕೇಂದ್ರೀಯ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಟ್ವಿಟರ್​ನಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಮತ್ತು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್​ಗಳನ್ನು ಹಿಂದಿಕ್ಕಿ, ಒಂದು ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಜನಪ್ರಿಯ ಕೇಂದ್ರೀಯ ಬ್ಯಾಂಕ್​ ಎಂದು ಪ್ರಖ್ಯಾತಿ ಪಡೆದಿದೆ.

ಸೆಪ್ಟೆಂಬರ್ 27 ರಂದು 9 ಲಕ್ಷ 66 ಸಾವಿರ ಫಾಲೋವರ್ಸ್ ಇದ್ದರು. ಆದರೆ ಈ ಸಂಖ್ಯೆ ಇದೀಗ 10 ಲಕ್ಷಕ್ಕೆ ಏರಿಕೆಯಾಗಿದೆ. ಈ ಕುರಿತು ಟ್ವೀಟ್​ ಮೂಲಕ ಸಂತಸ ಹಂಚಿಕೊಂಡ ಗವರ್ನರ್ ಶಕ್ತಿಕಾಂತ್ ದಾಸ್, ಆರ್​ಬಿಐ ಟ್ವಿಟರ್ ಖಾತೆ ಇಂದು ಒಂದು ಮಿಲಿಯನ್ ಅನುಯಾಯಿಗಳನ್ನು ತಲುಪಿದೆ. ಇದು ಆರ್​ಬಿಐನ ಹೊಸ ಮೈಲಿಗಲ್ಲು. ಆರ್‌ಬಿಐನಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಹೋದ್ಯೋಗಿಗಳಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.

85 ವರ್ಷ ಹಳೆಯ ಆರ್‌ಬಿಐ 2012 ರ ಜನವರಿಯಲ್ಲಿ ಟ್ವಿಟರ್ ಖಾತೆ ತೆರೆಯಿತು. ಗವರ್ನರ್ ದಾಸ್ ಅವರು 1.35 ಲಕ್ಷ ಅನುಯಾಯಿಗಳನ್ನು ಹೊಂದಿರುವ ಪ್ರತ್ಯೇಕ ಟ್ವಿಟರ್ ಹ್ಯಾಂಡಲ್ ಮಾಡುತ್ತಿದ್ದಾರೆ.

Last Updated : Nov 22, 2020, 5:55 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.