ನವದೆಹಲಿ: ಒಪ್ಪಂದ ಇಲ್ಲದೆ ಯಾವುದೇ ಕಾಂಟ್ರ್ಯಾಕ್ಟ್ ಆಗಲಿ, ಕಡಿತ ಇಲ್ಲದೆ ಯಾವುದೇ ಕರಾರು ಆಗಲಿ ಜಾರಿಗೆ ತರದಂತಹ ನೀತಿ ಅನ್ನು ಕಾಂಗ್ರೆಸ್ ನಾಯಕರು ಅನುಸರಿಸುತ್ತಿದ್ದರು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಅಗಸ್ಟಾ ವೆಸ್ಟ್ ಲ್ಯಾಂಡ್ ಚಾಪರ್ ಒಪ್ಪಂದದಲ್ಲಿ ಕಾಂಗ್ರೆಸ್ ಸದಸ್ಯರು ಕಿಕ್ಬ್ಯಾಕ್ ಪಡೆದಿದ್ದಾರೆಂದು ಹೇಳಲಾದ ವರದಿಗಳ ಕುರಿತು ವಿರೋಧ ಪಕ್ಷದ ಮೇಲೆ ಪ್ರತಿಪಕ್ಷ ಬಿಜೆಪಿ ಮಂಗಳವಾರ ವಾಗ್ದಾಳಿ ನಡೆಸಿತು.
ಜೀಪ್ ಹಗರಣ, ಬೋಫೋರ್ಸ್ ಹಗರಣ, ಜಲಾಂತರ್ಗಾಮಿ ಹಗರಣ ಸೇರಿದಂತೆ ಇನ್ನು ಹಲವು ಹಗರದಡಿ ಕಾಂಗ್ರೆಸ್ ನಾಯಕರು ತಮ್ಮ ಲಾಭಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕತ್ವವನ್ನು ಹಿರಿಯ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರಾದ ಸಲ್ಮಾನ್ ಖುರ್ಷಿದ್ ಮತ್ತು ಅಹ್ಮದ್ ಪಟೇಲ್ ಹಾಗೂ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿ ಅವರ ಹೆಸರು ಪ್ರಸ್ತಾಪಿಸಿ ಚಾಪರ್ ಒಪ್ಪಂದದ ಪ್ರಮುಖ ಆರೋಪಿಗಳ ಬಗ್ಗೆ ಮಾಧ್ಯಮ ವರದಿಉಲ್ಲೇಖಿಸಿದ ಅವರು, 'ನೀವು ಮಿಲಿಟರಿ ವ್ಯವಹಾರದಲ್ಲಿ ಕಿಕ್ ಬ್ಯಾಕ್ ಬಗ್ಗೆ ಯೋಚಿಸಿದಾಗಲೆಲ್ಲಾ, ಕೆಲವು ಕಾಂಗ್ರೆಸ್ ನಾಯಕರ ಬಗ್ಗೆಯೂ ಯೋಚಿಸಿ' ಎಂದರು.
ಲೂಟಿ ಇಲ್ಲದೆ ಯಾವುದೇ ರಕ್ಷಣಾ ಒಪ್ಪಂದವಿಲ್ಲ. ಕಿಕ್ ಬ್ಯಾಕ್ ಇಲ್ಲದೆ ಯಾವುದೇ ಭದ್ರತಾ ಒಡಂಬಡಿಕೆ ಇಲ್ಲ. ಕೆಲವು ಕಾಂಗ್ರೆಸ್ ನಾಯಕರು ಅದರ ಫಲಾನುಭವಿಗಳಾಗದೆ ಯಾವುದೇ ರಕ್ಷಣಾ ಒಪ್ಪಂದು ಜಾರಿಯಾಗದ ನೀತಿಯಾಗಿತ್ತು. ಕಾಂಗ್ರೆಸ್ ಅಧ್ಯಕ್ಷರು ಮತ್ತು ಪಕ್ಷದ ರಾಜಕುಮಾರ ಜನರಿಗೆ ಉತ್ತರಿಸಬೇಕಾಗಿದೆ ಎಂದು ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದರು.
2010ರಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿಗಳ ವಿವಿಐಪಿಗಳಿಗೆ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳನ್ನು 3,600 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವ ಕುರಿತು ಮಾತುಕತೆ ನಡೆದಿತ್ತು ಎಂದು ಪ್ರಸಾದ್ ಹೇಳಿದ್ದಾರೆ.