ತಿರುವನಂತಪುರಂ(ಕೇರಳ): ರಾಜ್ಯ ರಾಜಧಾನಿಯ ಸಮೀಪದ ಪೂವರ್ ಎಂಬಲ್ಲಿನ ರೆಸಾರ್ಟ್‌ನಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೂ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಭಾನುವಾರ ಮುಂಜಾನೆ ಕೇರಳ ಅಬಕಾರಿ ಇಲಾಖೆ ಪೊಲೀಸರು ದಾಳಿ ನಡೆಸಿದರು.
ಈ ವೇಳೆ, ಪಾರ್ಟಿಯಲ್ಲಿ ಸುಮಾರು 65ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ನಿಷೇಧಿತ ಮಾದಕ ವಸ್ತುಗಳಾದ ಹಶಿಶ್, ಎಂಡಿಎಂಎ ಸೇರಿದಂತೆ ಇತರೆ ಅಮಲು ಪದಾರ್ಥಗಳನ್ನು ಬಳಸುತ್ತಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಾಕ್‌ನಲ್ಲಿ ಲಂಕಾ ವ್ಯಕ್ತಿಯ ಬರ್ಬರ ಹತ್ಯೆ: ಕ್ರೌರ್ಯಕ್ಕೆ ಕನ್ನಡಿ ಹಿಡಿದ ಮರಣೋತ್ತರ ಪರೀಕ್ಷೆ ವರದಿ
ಪ್ರಕರಣದಲ್ಲಿ ಮಹಿಳೆಯರೂ ಸೇರಿದಂತೆ ಇಪ್ಪತ್ತೈದು ಮಂದಿಯನ್ನು ಬಂಧಿಸಲಾಗಿದೆ. ರೇವ್ ಪಾರ್ಟಿಯಲ್ಲಿ ಕೇರಳ ಮತ್ತು ಬೆಂಗಳೂರು ಸೇರಿದಂತೆ ಹೊರ ರಾಜ್ಯದ ಅನೇಕರು ಭಾಗವಹಿಸಿದ್ದರು. ಈ ಪಾರ್ಟಿ ಹಿಂದೆ ದಂಧೆಕೋರರ ಕೈವಾಡವಿದ್ದು, ಸ್ಥಳದಿಂದ ಬಂಧಿಸಲ್ಪಟ್ಟವರಲ್ಲಿ ಕೆಲವರು ಭಾಗಿಯಾಗಿರುವ ಶಂಕೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.