ಜೈಪುರ(ರಾಜಸ್ಥಾನ): ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖ್ದೇವ್ ಸಿಂಗ್ ಗೋಗಾಮೇಡಿ ಅವರನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ಇಂದು ನಡೆದಿದೆ. ಹಾಡಹಗಲೇ ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಶ್ಯಾಮ್ ನಗರ ಪ್ರದೇಶದಲ್ಲಿರುವ ಸುಖ್ದೇವ್ ಸಿಂಗ್ ಅವರ ಮನೆಯಲ್ಲೇ ಈ ದಾಳಿ ಮಾಡಲಾಗಿದೆ. ಗಾಯಗೊಂಡ ಅವರನ್ನು ತಕ್ಷಣವೇ ಸಮೀಪ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾಗಿ ಜೈಪುರ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ಮಾಹಿತಿ ನೀಡಿದರು. ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
-
VIDEO | Sukhdev Singh Gogamedi, national president of Rashtriya Rajput Karni Sena, shot at in Jaipur, Rajasthan. More details are awaited. pic.twitter.com/50ZAQsLTow
— Press Trust of India (@PTI_News) December 5, 2023 " class="align-text-top noRightClick twitterSection" data="
">VIDEO | Sukhdev Singh Gogamedi, national president of Rashtriya Rajput Karni Sena, shot at in Jaipur, Rajasthan. More details are awaited. pic.twitter.com/50ZAQsLTow
— Press Trust of India (@PTI_News) December 5, 2023VIDEO | Sukhdev Singh Gogamedi, national president of Rashtriya Rajput Karni Sena, shot at in Jaipur, Rajasthan. More details are awaited. pic.twitter.com/50ZAQsLTow
— Press Trust of India (@PTI_News) December 5, 2023
ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಮಾತನಾಡಿ, "ಸುಖ್ದೇವ್ ಸಿಂಗ್ ಮನೆಗೆ ದುಷ್ಕರ್ಮಿಗಳು ಪ್ರವೇಶಿಸಿ ಗಂಡಿನ ದಾಳಿ ಮಾಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ" ಎಂದು ಹೇಳಿದ್ದಾರೆ. ಸುಖ್ದೇವ್ ಸಿಂಗ್ ಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಅವರ ಮನೆ ಸಮೀಪದ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಅಲ್ಲದೇ, ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಈಗಾಗಲೇ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಓರ್ವ ದಾಳಿಕೋರ ಸಾವು: "ಸುಖ್ದೇವ್ ಸಿಂಗ್ ಹತ್ಯೆಯಲ್ಲಿ ಮೂವರು ದುಷ್ಕರ್ಮಿಗಳು ಭಾಗಿಯಾಗಿದ್ದಾರೆ. ಭೇಟಿಯ ನೆಪದಲ್ಲಿ ಮೂವರು ಮನೆಗೆ ಬಂದಿದ್ದರು. ಮನೆಯೊಳಗೆ ಸುಮಾರು 10 ನಿಮಿಷ ಚರ್ಚಿಸಿದ್ದಾರೆ. ಇದಾದ ನಂತರ ಗುಂಡಿನ ದಾಳಿ ಮಾಡಿದ್ದಾರೆ. ಈ ಪರಸ್ಪರ ದಾಳಿ ಜರುಗಿದೆ. ದಾಳಿಕೋರ ನವೀನ್ ಸಿಂಗ್ ಶೇಖಾವತ್ ಎಂಬಾತ ಸಾವಿಗೀಡಾಗಿದ್ದಾನೆ" ಎಂದು ಪೊಲೀಸ್ ಆಯುಕ್ತ ಜೋಸೆಫ್ ತಿಳಿಸಿದರು. ಘಟನಾವಳಿಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಕೂಟಿ ಕಸಿದು ಹಂತಕರು ಪರಾರಿ: ಮನೆಯಲ್ಲಿ ಗುಂಡಿನ ದಾಳಿ ನಡೆಸಿದ ಹೊರಬಂದ ಮತ್ತಿಬ್ಬರು ದುಷ್ಕರ್ಮಿಗಳು ಹೊರಗಡೆಯಿಂದ ವ್ಯಕ್ತಿಯೊಬ್ಬರಿಂದ ಸ್ಕೂಟಿಯನ್ನು ಕುಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಹತ್ಯೆಯ ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್: ಈ ಹತ್ಯೆಯ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮತ್ತೊಬ್ಬ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ಹೊತ್ತುಕೊಂಡಿದ್ದಾನೆ. ಗ್ಯಾಂಗ್ಸ್ಟರ್ಗಳಾದ ಗೋಲ್ಡಿ ಬ್ರಾರ್ ಮತ್ತು ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಾಯಕನಾದ ಗೋಡಾರಾ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಗುಂಪುಗಳಿಗೆ ಸಹಾಯ ಮಾಡುತ್ತಿದ್ದರಿಂದ ಗೋಗಾಮೇಡಿ ಅವರನ್ನು ನಮ್ಮ ಕಡೆಯವರು ಕೊಂದಿದ್ದಾರೆ ಎಂದು ಹೇಳಿದ್ದಾರೆ.
ಸುಖ್ದೇವ್ ಸಿಂಗ್ ಯಾರು?: ಕೊಲೆಯಾದ ಸುಖ್ದೇವ್ ಸಿಂಗ್ ಈ ಹಿಂದೆ ಶ್ರೀ ರಜಪೂತ ಕರ್ಣಿ ಸೇನಾ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು. ಆದರೆ, ಸಂಸ್ಥಾಪಕ ಲೋಕೇಂದ್ರ ಸಿಂಗ್ ಕಲ್ವಿ ಅವರೊಂದಿಗೆ ಮನಸ್ತಾಪದಿಂದಾಗಿ 2015ರಲ್ಲಿ ಸುಖ್ದೇವ್ ಸಿಂಗ್ ಅವರನ್ನು ಉಚ್ಚಾಟಿಸಲಾಗಿತ್ತು. ಬಳಿಕ ಅವರು ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಸಂಘಟನೆಯನ್ನು ಹುಟ್ಟುಹಾಕಿದ್ದರು.
ಇದನ್ನೂ ಓದಿ: ಎಂಎಲ್ಸಿ ಸಿ ಪಿ ಯೋಗೇಶ್ವರ್ ಬಾವ ಶವವಾಗಿ ಪತ್ತೆ: ಕೊಲೆ ಶಂಕೆ