ಹೈದರಾಬಾದ್ (ತೆಲಂಗಾಣ) : ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಾರೆಡ್ಡಿ ಶೀಘ್ರವೇ ಅಪರಾಧಿಯನ್ನು ಹಿಡಿದು, ಎನ್ಕೌಂಟರ್ ಮಾಡ್ತೀವಿ ಎಂದು ಕಿಡಿಕಾರಿದ್ದಾರೆ.
ಮೃತ ಬಾಲಕಿಯ ಕುಟುಂಬದ ಬೆಂಬಲಕ್ಕೆ ನಾವಿದ್ದೇವೆ. ನಾವು ಕುಟುಂಬಕ್ಕೆ ನೆರವು ನೀಡುತ್ತೇವೆ. ಅಪರಾಧಿಯನ್ನು ಬಂಧಿಸಿ, ಎನ್ಕೌಂಟರ್ ಮಾಡುತ್ತೇವೆ, ಬಿಡುವುದಿಲ್ಲ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮಲ್ಲಾರೆಡ್ಡಿ ಅಸಮಾಧಾನ ಹೊರಹಾಕಿದ್ದಾರೆ.
ಘಟನೆಯ ಹಿನ್ನೆಲೆ: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಪ್ರಕರಣ ಹೈದರಾಬಾದ್ ನಗರದ ಸಯೀದಾಬಾದ್ ಪ್ರದೇಶದ ಸಿಂಗರೇಣಿ ಕಾಲೋನಿಯಲ್ಲಿ ನಡೆದಿತ್ತು. ಕಾಣೆಯಾಗಿದ್ದ ಬಾಲಕಿ ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು.
ಆರೋಪಿ ಪಲ್ಲಕೊಂಡ ರಾಜು ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಯ ಬಗ್ಗೆ ಸುಳಿವು ನೀಡುವವರಿಗೆ 10 ಲಕ್ಷ ರೂಪಾಯಿ ಬಹುಮಾನ ಸಹ ಘೋಷಿಸಲಾಗಿದೆ.
ಇದನ್ನೂ ಓದಿ: Watch.. ಮೇಲ್ಸೇತುವೆ ಮೇಲೆ ಯುವಕ - ಯುವತಿಗೆ ಕಾರು ಡಿಕ್ಕಿ: ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸಾವು