ETV Bharat / bharat

ಹೀನ ಕೃತ್ಯ:  ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ - ಅಜ್ಜನಿಂದ ಮೊಮ್ಮಗಳ ಮೇಲೆ ಅತ್ಯಾಚಾರ

ನಾಗಪುರದ ಜಾರಿಪಟ್ಕ ಮತ್ತು ಕಪಿಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಪೋಕ್ಸೋ ಕೇಸಿನಡಿ ಎರಡೂ ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

rape-of-two-minor-girls-in-nagpur-the-grandfather-abused-the-granddaughter-and-the-youth-abused-the-girl-next-door
ನಾಗ್ಪುರ : ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ
author img

By

Published : Jun 7, 2022, 11:03 PM IST

ನಾಗಪುರ : ನಗರದ ಜಾರಿಪಟ್ಕ ಮತ್ತು ಕಪಿಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಬಾಲಕಿಯರ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅತ್ಯಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಪೋಕ್ಸೋ ಕೇಸಿನಡಿ ಎರಡೂ ಪ್ರಕರಣಗಳ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಯುವಕನಿಂದ ಪಕ್ಕದ ಮನೆಯ ಬಾಲಕಿ ಮೇಲೆ ಲೈಂಗಿಕ ಕಿರುಕುಳ : 24ರ ಹರೆಯದ ಯುವಕನೊಬ್ಬ 12ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಾರಿಪಟ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ನೀಲೇಶ್ ಲಿಂಬಾಡೆ ಪಕ್ಕದ ಮನೆಯ 12 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದ. ಆರೋಪಿ ಬಾಲಕಿಯನ್ನು ವಿವಿಧ ಆಮಿಷಗಳ ಮೂಲಕ ತನ್ನ ಬಲೆಗೆ ಬೀಳಿಸಿದ್ದ. ಆರೋಪಿ ಎರಡು ದಿನಗಳ ಹಿಂದೆ ಬಾಲಕಿಯನ್ನು ತನ್ನ ಮನೆಗೆ ಕರೆಸಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಜೊತೆಗೆ ಈ ಬಗ್ಗೆ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ, ಬಾಲಕಿಯು ತನ್ನ ಪೋಷಕರಲ್ಲಿ ನಡೆದಿದ್ದನ್ನೆಲ್ಲ ತಿಳಿಸಿದ್ದಾಳೆ. ಬಳಿಕ ಬಾಲಕಿಯ ಪೋಷಕರು ಜಾರಿಪಟ್ಕ ಪೊಲೀಸ್ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ನೀಲೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಅಜ್ಜನಿಂದ ಮೊಮ್ಮಗಳ ಮೇಲೆ ಅತ್ಯಾಚಾರ : 60ರ ವೃದ್ಧನೊಬ್ಬ ತನ್ನ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಕಪಿಲ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಆರೋಪಿ ವೃದ್ಧನ ಮಗಳು ಹೆರಿಗೆಗಾಗಿ ತವರು ಮನೆಗೆ ಬಂದಿದ್ದಳು. ಜೊತೆಗೆ ತನ್ನ 13 ವರ್ಷದ ಮಗಳನ್ನು ಕರೆದುಕೊಂಡು ಬಂದಿದ್ದಳು. ಈ ಸಂದರ್ಭದಲ್ಲಿ 13 ವರ್ಷದ ಮೊಮ್ಮಗಳು ತನ್ನ ಅಜ್ಜನ ಬಳಿ ಮಲಗುತ್ತಿದ್ದಳು.

ಈ ವೇಳೆ, ಈ ವೃದ್ಧ ಮೊಮ್ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿರುವುದನ್ನು ಬಾಲಕಿಯ ತಾಯಿ ಗಮನಿಸಿದ್ದಾಳೆ. ಈ ಬಾಲಕಿಯ ತಾಯಿ ಈ ವಿಷಯವನ್ನು ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದಾಗ ಅವರೆಲ್ಲರೂ ಸುಮ್ಮನಿರಲು ಸೂಚಿಸಿದ್ದಾರೆ. ತನ್ನ ಮನೆಗೆ ಕಳಂಕ ಬರಬಹುದೆಂಬ ಭಯದಿಂದ ಬಾಲಕಿಯ ತಾಯಿ ಮೌನವಾಗಿದ್ದಳು. ಆದರೆ, ಕೊನೆಗೆ ಬಾಲಕಿಯ ತಾಯಿ ಕಪಿಲ್ ನಗರ ಠಾಣೆಗೆ ತೆರಳಿ ವೃದ್ಧನ ವಿರುದ್ಧ ದೂರು ನೀಡಿದ್ದಾಳೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಓದಿ :ಬೆಳ್ಳಂ ಬೆಳಗ್ಗೆ ಕಳ್ಳರ ಕೈಚಳಕ: ಯಾದಗಿರಿಯಲ್ಲಿ ಬಸವಣ್ಣನ ಬೆಳ್ಳಿ ಕವಚ ಕಳವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.