ETV Bharat / bharat

ಮಸಾಜ್ ಮಾಡುವ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ, ಬಂಧನ - ಮಸಾಜ್ ಮಾಡುವ ನೆಪದಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ

ವಿದೇಶದಿಂದ ಜೈಪುರಕ್ಕೆ ಬಂದಿದ್ದ ವಿದೇಶಿ ಮಹಿಳೆ ಮೇಲೆ ಮಸಾಜ್ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿದ್ದು, ಆತನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

rape case in jaipur rape with a foreign woman

author img

By

Published : Mar 18, 2022, 10:59 PM IST

ಜೈಪುರ(ರಾಜಸ್ಥಾನ): ಮಸಾಜ್ ಮಾಡುವ ನೆಪದಲ್ಲಿ ನೆದರ್​ಲ್ಯಾಂಡ್​​ ಮಹಿಳೆ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರವೆಸಗಿದ್ದು, ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಯುರ್ವೇದ ಮಸಾಜ್ ನೆಪದಲ್ಲಿ ನೆದರ್​ಲ್ಯಾಂಡ್​​ ಮಹಿಳೆ ಮೇಲೆ ದುಷ್ಕೃತ್ಯವೆಸಗಲಾಗಿದ್ದು, ನಗರದ ಹೋಟೆಲ್​​ನಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಧಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿ ಬಂಧನ ಮಾಡಿದ್ದಾರೆ.

ಬಂಧಿತ ಆರೋಪಿ ಕೇರಳದ ನಿವಾಸಿಯಾಗಿದ್ದು, ಜೈಪುರದ ಖತಿಪುರದಲ್ಲಿ ಮಸಾಜ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದನು. ವಿದೇಶಿ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಕೇರಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನ ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಿಚಾ ತೋಮರ್ ತಿಳಿಸಿದ್ದಾರೆ.

ಇದನ್ನೂ ಓದಿ: ಟ್ರ್ಯಾಕ್ಟರ್​ ಓಡಿಸುತ್ತಿದ್ದ​ ವೇಳೆ ಚಾಲಕನಿಗೆ ಹೃದಯಾಘಾತ: ಸ್ಥಳದಲ್ಲೇ ಮೂವರ ದುರ್ಮರಣ

ಸಂತ್ರಸ್ತೆ ಜೈಪುರ ಪ್ರವಾಸಕ್ಕಾಗಿ ನೆದರ್​ಲ್ಯಾಂಡ್​​ನಿಂದ ಆಗಮಿಸಿದ್ದರು. ಈ ವೇಳೆ ಹೋಟೆಲ್​​ವೊಂದರಲ್ಲಿ ತಂಗಿದ್ದರು. ಮಾರ್ಚ್​​ 16ರಂದು ಆಯುರ್ವೇದ ಮಸಾಜ್​ ಮಾಡಿಸಿಕೊಳ್ಳಲು ಮುಂದಾಗಿದ್ದು,ಈ ವೇಳೆ ಆಕೆಯ ಮೇಲೆ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ.

ಘಟನೆ ಬೆನ್ನಲ್ಲೇ ಮಹಿಳೆಯ ಕ್ಷಮೆಯಾಚನೆ ಮಾಡಿರುವ ಕೇರಳದ ಬಿಜು ಮುರಳೀಧರನ್, ಘಟನೆ ಬಗ್ಗೆ ಯಾರಿಗೂ ಹೇಳದಂತೆ ಕೇಳಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಇದರಿಂದ ಖಿನ್ನತೆಗೊಳಗಾಗಿರುವ ಮಹಿಳೆ ಹೋಟೆಲ್ ಮ್ಯಾನೇಜರ್​ಗೆ ಮಾಹಿತಿ ನೀಡಿದ್ದು, ಸಿಂಧಿ ಕ್ಯಾಂಪ್​ ಪೊಲೀಸ್ ಠಾಣೆಯ,ಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ವರದಿ ಬರುತ್ತಿದ್ದಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.