ETV Bharat / bharat

ತೆಲಂಗಾಣ: ಆಸ್ಪತ್ರೆಯಲ್ಲಿ ಗರ್ಭಿಣಿಯ ಮೇಲೆ ಅತ್ಯಾಚಾರಕ್ಕೆ ಯತ್ನ - ತೆಲಂಗಾಣ ಇತ್ತೀಚಿನ ಸುದ್ದಿ

ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಕೊದಾಡ ಪ್ರದೇಶದ ತಿರುಮಲ ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದ ಮಹಿಳೆ ಮೇಲೆ ಲ್ಯಾಬ್​ ಟೆಕ್ನಿಶಿಯನ್​ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

Rape attempt
ಅತ್ಯಾಚಾರ
author img

By

Published : Jun 20, 2021, 7:55 PM IST

ಸೂರ್ಯಪೇಟ (ತೆಲಂಗಾಣ): ಹೆರಿಗೆಗೆಂದು ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮೇಲೆ ಲ್ಯಾಬ್​ ಟೆಕ್ನಿಶಿಯನ್​ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಜೂನ್​ 10ರಂದು ಇಲ್ಲಿನ ಸೂರ್ಯಪೇಟ್​ ಜಿಲ್ಲೆಯ ಕೊದಾಡ ಪ್ರದೇಶದ ತಿರುಮಲ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶ್ರೀಕಾಂತ್​ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ ಕಿರಾತಕ. ಈತ ತಿರುಮಲ ಆಸ್ಪತ್ರೆಯಲ್ಲಿ ಲ್ಯಾಬ್​ ಟೆಕ್ನಿಶಿಯನ್​ ಆಗಿ ಕೆಲಸ ಮಾಡುತ್ತಿದ್ದ. ಗರ್ಭಿಣಿಗೆ ಕೊರೊನಾ ಟೆಸ್ಟ್​ ಮಾಡಿಸಲೆಂದು ಕರೆದುಕೊಂಡು ಹೋಗಿ ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆದರೆ ಈ ವೇಳೆ ಮಹಿಳೆ ಕಿರುಚಾಡಿದ್ದು, ತಕ್ಷಣವೇ ಸಂಬಂಧಿಕರು ಸ್ಥಳಕ್ಕಾಗಮಿಸಿ ಆಕೆಯನ್ನು ಕಾಪಾಡಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಕುಟುಂಬಸ್ಥರು ಶ್ರೀಕಾಂತ್​ಗೆ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯನ್ನು ಹೆರಿಗೆಗಾಗಿ ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.