ETV Bharat / bharat

ಮಾಲ್ಡಾದಲ್ಲಿ ಅಪ್ರಾಪ್ತೆ ಶವಪತ್ತೆ.. ಅತ್ಯಾಚಾರದ ನಂತರ ಕೊಂದಿರುವ ಶಂಕೆ - ಮಾಲ್ಡಾದಲ್ಲಿ ಅಪ್ರಾಪ್ತೆಯ ಶವಪತ್ತೆ

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಅಪ್ರಾಪ್ತೆಯ ಮೃತದೇಹ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮಾಲ್ಡಾದಲ್ಲಿ ಅಪ್ರಾಪ್ತೆಯ ಶವಪತ್ತೆ
ಮಾಲ್ಡಾದಲ್ಲಿ ಅಪ್ರಾಪ್ತೆಯ ಶವಪತ್ತೆ
author img

By

Published : Apr 25, 2023, 5:32 PM IST

ಮಾಲ್ಡಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಮಾಲ್ಡಾದ ಕಾಲಿಯಾಚಕ್​ನ ನಂ.1 ಬ್ಲಾಕ್‌ನ ಅಕಂಡ್ಬೇರಿಯಾ ಗ್ರಾಮ ಪಂಚಾಯತ್‌ನ ಉಜಿರ್‌ಪುರ ಗ್ರಾಮದ ಜಮೀನಿನಲ್ಲಿ ಮಂಗಳವಾರ ಬೆಳಗ್ಗೆ ಅಪ್ರಾಪ್ತೆಯ ಶವ ಪತ್ತೆಯಾಗಿದೆ. ಹದಿಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ದೇಹದ ಮೇಲೆ ಕಂಡುಬಂದ ಹಲವು ಗುರುತುಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆಯಾಗಿರುವುದನ್ನು ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕಾಲಿಯಾಚಕ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಉದಯಶಂಕರ್ ಘೋಷ್ ಸ್ಥಳಕ್ಕೆ ಧಾವಿಸಿದರು. ಅವರನ್ನು ಕಲಿಯಾಚಾಕ್ ಎಸ್‌ಡಿಪಿಒ ಸಂಭವ್ ಜೈನ್ ಅನುಸರಿಸಿದರು. ಸದ್ಯ ಕಾಲಿಯಾಚಕ್ ಪೊಲೀಸ್ ಠಾಣೆಯ ಸಿಬ್ಬಂದಿ ಮೃತದೇಹವನ್ನು ವಶಪಡಿಸಿಕೊಂಡು ಶವಪರೀಕ್ಷೆಗಾಗಿ ಮಾಲ್ಡಾ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ.

ಬಾಲಕಿಯನ್ನು ಕತ್ತು ಹಿಸುಕಿ ಸಾಯಿಸಿರುವುದಾಗಿ ಗ್ರಾಮಸ್ಥರ ಶಂಕೆ: ಸ್ಥಳೀಯ ಮೂಲಗಳ ಪ್ರಕಾರ, ಗ್ರಾಮದ ಕೆಲವು ರೈತರು ಮಂಗಳವಾರ ಬೆಳಗ್ಗೆ ಜಮೀನಿನಲ್ಲಿ ಸಾಗುವಳಿ ಮಾಡಲು ತೆರಳಿದ್ದರು. ಸುಮಾರು 15 ವರ್ಷ ವಯಸ್ಸಿನ ಬಾಲಕಿಯ ಶವವನ್ನು ಲುಫಾ ತೋಟದಲ್ಲಿ ಬಿದ್ದಿರುವುದನ್ನು ಅವರು ಮೊದಲು ಗುರುತಿಸಿದ್ದಾರೆ. ಸುದ್ದಿ ತಿಳಿದ ಗ್ರಾಮದ ಎಲ್ಲರೂ ಸ್ಥಳಕ್ಕೆ ಧಾವಿಸಿದ್ದಾರೆ. ಮುಖ ಸೇರಿದಂತೆ ದೇಹದ ಖಾಸಗಿ ಭಾಗಗಳಲ್ಲಿ ಹಲವು ಗೀರುಗಳು ಕಂಡುಬಂದಿವೆ. ನಂತರ ಗ್ರಾಮಸ್ಥರು ಸಾಮೂಹಿಕ ಅತ್ಯಾಚಾರದ ನಂತರ ಬಾಲಕಿಯನ್ನು ಕತ್ತು ಹಿಸುಕಿ ಸಾಯಿಸಿದ್ದಾರೆ ಎಂದು ಊಹಿಸಿದ್ದಾರೆ. ನಂತರ ಅವರು ಕಾಲಿಯಾಚಕ್ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.

ಅತ್ಯಾಚಾರದ ನಂತರ ಬಾಲಕಿ ಕೊಲೆ ನಡೆಸಿರುವ ಶಂಕೆ: ಗ್ರಾಮದ ನಿವಾಸಿ ಚಂದ್ರಶೇಖರ್ ಮೊಂಡಲ್ ಮಾತನಾಡಿ, 'ಬೆಳಗ್ಗೆ ಮಾರುಕಟ್ಟೆಗೆ ಹೋಗಿದ್ದೆ. ಕೆಲವು ರೈತರು ಜಮೀನಿನಲ್ಲಿ ಸಾಗುವಳಿ ಮಾಡಲು ಬಂದಿದ್ದು, ಅಲ್ಲಿ ಬಾಲಕಿಯ ಶವ ಬಿದ್ದಿರುವುದನ್ನು ಕಂಡ ಸುದ್ದಿ ನನಗೆ ಸಿಕ್ಕಿತು. ಸುದ್ದಿ ತಿಳಿದು ಇಲ್ಲಿಗೆ ಬಂದು ನೋಡಿದಾಗ 14-15 ವರ್ಷದ ಬಾಲಕಿಯ ಶವವಿತ್ತು. ಹುಡುಗಿಯನ್ನು ಯಾರೂ ಗುರುತಿಸುವುದಿಲ್ಲ. ಆಕೆ ರಾಮನಗರ ಮತ್ತು ಶಹಬಾಜ್‌ಪುರ ಪ್ರದೇಶದವಳಲ್ಲ. ಆದರೆ ಶವವನ್ನು ನೋಡಿ ಎಲ್ಲರೂ ಆ ಹುಡುಗಿ ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾಗಿದ್ದಾರೆ ಎಂದು ಭಾವಿಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ನಂತರ ಆಕೆಯನ್ನು ಕೊಲೆ ಮಾಡಲಾಗಿದೆ. ಪೊಲೀಸರು ತನಿಖೆ ನಡೆಸಿದ ಬಳಿಕವೇ ಸತ್ಯಾಂಶ ಹೊರಬೀಳಲಿದೆ' ಎಂದರು.

ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ ಯುವಕ: ಬಾಲಕಿ ಸಾವಿನ ಬಗ್ಗೆ ಮಾತನಾಡಿರುವ ಅವರ ಸಹೋದರಿ, 'ಒಬ್ಬ ಹುಡುಗ ನನ್ನ ತಂಗಿಯನ್ನು ಪ್ರೀತಿಸುತ್ತಿದ್ದ. ಕೆಲವು ತಿಂಗಳ ಹಿಂದೆ ಅವರಿಬ್ಬರ ನಡುವೆ ಸಂಬಂಧ ಬೆಳೆದಿತ್ತು. ನಿನ್ನೆ ಆ ಹುಡುಗ ನನ್ನ ತಂಗಿಗೆ ಕರೆ ಮಾಡಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ, ಮಹದಿಪುರಕ್ಕೆ ಬೇಗ ಬಾ ನಾನು ನಿನ್ನನ್ನು ಭೇಟಿಯಾಗಬೇಕು ಎಂದು ಹೇಳಿದ್ದಾನೆ. ಆದರೆ ಅವಳನ್ನು ಮಹದಿಪುರಕ್ಕೆ ಕಳುಹಿಸಲು ನಮ್ಮ ಕುಟುಂಬದಲ್ಲಿ ಯಾರೂ ಒಪ್ಪಿರಲಿಲ್ಲ, ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹುಡುಗ ಒತ್ತಾಯಿಸಿದ್ದಾನೆ . ಕೊನೆಗೆ ಮಧ್ಯಾಹ್ನದ ಹೊತ್ತಿಗೆ ಸಹೋದರಿ ಮನೆಬಿಟ್ಟು ಹೋಗಿದ್ದಾಳೆ. ಮಧ್ಯರಾತ್ರಿಯ ಸುಮಾರಿಗೆ ತಾಯಿಗೆ ಕರೆ ಮಾಡಿ ಬೆಳಗ್ಗೆ ಮನೆಗೆ ಬರುವುದಾಗಿ ಹೇಳಿದ್ದಳು. ಚಿಕ್ಕಮ್ಮ ಮಹದಿಪುರದಲ್ಲಿ ಉಳಿದುಕೊಂಡಿರುವುದರಿಂದ ರಾತ್ರಿ ಚಿಕ್ಕಮ್ಮನ ಮನೆಯಲ್ಲಿಯೇ ಇರುತ್ತಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಇಂದು ಬೆಳಗ್ಗೆ ಮೊಬೈಲ್‌ನಲ್ಲಿ ಅಕ್ಕನ ಚಿತ್ರ ಬಂದಿದ್ದು, ಆಕೆ ಕೊಲೆಯಾಗಿರುವುದು ತಿಳಿದು ಬಂದಿದೆ. ನನ್ನ 15 ವರ್ಷದ ಸಹೋದರಿಯನ್ನು ಕೊಂದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ' ಎಂದು ಮೃತಳ ಅಕ್ಕ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ: ತಕ್ಷಣ ಬಾಲಕಿಯ ಬಗ್ಗೆ ಮಾಹಿತಿ ಪಡೆದ ಮಾಲ್ಡಾ ಠಾಣೆ ಐಸಿ ಹೀರಕ್ ಬಿಸ್ವಾಸ್ ಮಾತನಾಡಿದ್ದು, ಮೃತ ಬಾಲಕಿಯ ಮನೆಗೆ ತೆರಳಿ ಕುಟುಂಬ ಸದಸ್ಯರೊಂದಿಗೆ ಬಹಳ ಹೊತ್ತು ಮಾತನಾಡಿ ಮೃತಳ ಪ್ರಿಯಕರನ ಬಗ್ಗೆ ಮಾಹಿತಿ ಪಡೆದರು. ಆದರೆ, ತನಿಖೆಯ ಬಗ್ಗೆ ಐಸಿ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ಏತನ್ಮಧ್ಯೆ, ಸ್ಥಳದಲ್ಲಿ ಸುದೀರ್ಘ ತನಿಖೆಯ ನಂತರ, ಎಸ್‌ಡಿಪಿಒ (ಕಾಲಿಯಾಚಕ್) ಸಂಭವ್ ಜೈನ್, 'ನಾವು ನಿಜವಾಗಿ ಏನಾಯಿತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ತನಿಖೆ ಮುಗಿದ ನಂತರ ವಿವರವಾಗಿ ಹೇಳಲು ಸಾಧ್ಯವಾಗುತ್ತದೆ. ಇಡೀ ತನಿಖಾ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಘಟನಾ ಸ್ಥಳದಿಂದ ಕೆಲವು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ' ಎಂದಿದ್ದಾರೆ.

ಇದನ್ನೂ ಓದಿ: ಸಂಬಂಧ ಬೆಳೆಸುವಂತೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ; ಕೊಡಲಿಯಿಂದ ಹತ್ಯೆ ಮಾಡಿದ ದಂಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.