ETV Bharat / bharat

ರಂಜಿತ್ ಸಿಂಗ್ ಕೊಲೆ ಪ್ರಕರಣ : ರಾಮ್​ ರಹೀಮ್​ ಸೇರಿ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ - ಡೇರಾ ಸಚ್ಚಾ ಸೌಧ ಮುಖ್ಯಸ್ಥ

ಎಲ್ಲರಿಗೂ ಜೀವನ ಪರ್ಯಂತ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ಹೊರ ಹಾಕಿದೆ. ಡೇರಾ ಸಚ್ಚಾ ಸೌಧ ಮುಖ್ಯಸ್ಥನಾಗಿರುವ ರಾಮ್ ರಹೀಮ್ ಈಗಾಗಲೇ ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಸಾಬೀತಾಗಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿದ್ದಾರೆ..

Gurmeet Ram Rahim
Gurmeet Ram Rahim
author img

By

Published : Oct 18, 2021, 5:09 PM IST

ಪಂಚಕುಲ (ಹರಿಯಾಣ) : ಡೇರಾ ಸಚ್ಚಾ ಸೌಧ ಅನುಯಾಯಿಯಾಗಿದ್ದ ರಂಜಿತ್​ ಸಿಂಗ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಾಮ್​ ರಹೀಮ್​ ಸಿಂಗ್​​​ ಸೇರಿದಂತೆ ನಾಲ್ವರು ಆರೋಪಿಗಳಿಗೆ ಜೀವಾವಧಿ(ಜೀವನ ಪರ್ಯಂತ) ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಹೊರ ಬಿದ್ದಿದೆ. ಹರಿಯಾಣದ ಪಂಚಕುಲದ ವಿಶೇಷ ಸಿಬಿಐ ಕೋರ್ಟ್​ ಈ ಆದೇಶ ಹೊರ ಹಾಕಿದೆ.

  • Ranjit Singh murder case | Special CBI court in Panchkula awards life imprisonment to all the accused, including Dera Sacha Sauda's Gurmeet Ram Rahim and four others. A fine of Rs 31 Lakhs levied on Ram Rahim and Rs 50,000 on the remaining accused. pic.twitter.com/WUQMA30sG6

    — ANI (@ANI) October 18, 2021 " class="align-text-top noRightClick twitterSection" data=" ">

2002ರ ಜುಲೈ 10ರಂದು ರಂಜಿತ್​ ಸಿಂಗ್ ಕೊಲೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಂಜಿತ್ ಪುತ್ರ ದೂರು ದಾಖಲು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ 2003ರ ಡಿಸೆಂಬರ್​ ತಿಂಗಳಲ್ಲಿ ಸಿಬಿಐ ಕೋರ್ಟ್​​ನಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಕೋರ್ಟ್​​ ರಾಮ್​ ರಹೀಮ್​ ಸಿಂಗ್ ದೋಷಿ ಎಂದು ಸಿಬಿಐ ಕೋರ್ಟ್​​ ತೀರ್ಪು ನೀಡಿತ್ತು.

ಇದರ ಜೊತೆಗೆ ಇತರೆ ನಾಲ್ವರು ಆರೋಪಿಗಳು ದೋಷಿ ಎಂದು ಹೇಳಿಕೆ ನೀಡಿ, ಶಿಕ್ಷೆಯ ಪ್ರಮಾಣ ಅಕ್ಟೋಬರ್​​ 18ರಂದು ಪ್ರಕಟಿಸುವುದಾಗಿ ತಿಳಿಸಿತ್ತು. ಇದರ ಜೊತೆಗೆ ರಾಮ್​ ರಹೀಮ್​​​​​ ಅವರಿಗೆ 31 ಲಕ್ಷ ರೂ. ದಂಡ ಹಾಗೂ ಉಳಿದ ಆರೋಪಿಗಳಿಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ.

ಇದನ್ನೂ ಓದಿರಿ: ನ್ಯಾಯಾಲಯದಲ್ಲೇ ವಕೀಲನನ್ನು ಗುಂಡಿಕ್ಕಿ ಕೊಲೆ ಮಾಡಿದ ದುಷ್ಕರ್ಮಿಗಳು

ಅದರಂತೆ ಶಿಕ್ಷೆಯ ಪ್ರಮಾಣ ಹೊರ ಹಾಕಿರುವ ಸಿಬಿಐ ವಿಶೇಷ ಕೋರ್ಟ್, ಎಲ್ಲರಿಗೂ ಜೀವನ ಪರ್ಯಂತ ಶಿಕ್ಷೆ ವಿಧಿಸಿ, ಮಹತ್ವದ ಆದೇಶ ಹೊರ ಹಾಕಿದೆ. ಡೇರಾ ಸಚ್ಚಾ ಸೌಧ ಮುಖ್ಯಸ್ಥನಾಗಿರುವ ರಾಮ್ ರಹೀಮ್ ಈಗಾಗಲೇ ಇಬ್ಬರು ಭಕ್ತೆಯರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಸಾಬೀತಾಗಿ 20 ವರ್ಷಗಳ ಕಾಲ ಜೈಲು ಶಿಕ್ಷೆಗೊಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.