ETV Bharat / bharat

ಕೊವ್ಯಾಕ್ಸಿನ್ ಉತ್ಪಾದನೆಯನ್ನು ಮುಕ್ತಗೊಳಿಸಿ: ಕೇಂದ್ರಕ್ಕೆ ಜಗನ್ ಮನವಿ - Bharat Biotech

ಲಸಿಕೆ ತಯಾರಿಸಲು ಅಥವಾ ತಯಾರಿಸಲು ಆಸಕ್ತಿ ಹೊಂದಿರುವ ಯಾರಾರಿಗಾದರೂ ಪ್ರೋತ್ಸಾಹಿಸಬೇಕು. ಸಂಪೂರ್ಣ ಉತ್ಪಾದನಾ ಸಾಮರ್ಥ್ಯವನ್ನು ಸಜ್ಜುಗೊಳಿಸಬೇಕು ಎಂದು ಜಗನ್ ಮನವಿ ಮಾಡಿದ್ದಾರೆ.

ಕೇಂದ್ರಕ್ಕೆ ಜಗನ್ ಮನವಿ
ಕೇಂದ್ರಕ್ಕೆ ಜಗನ್ ಮನವಿ
author img

By

Published : May 11, 2021, 9:31 PM IST

ಅಮರಾವತಿ: ಕೋವ್ಯಾಕ್ಸಿನ್ ಉತ್ಪಾದನಾ ತಂತ್ರಜ್ಞಾನವನ್ನು ವರ್ಗಾಯಿಸಲು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್-ಎನ್ಐವಿಗಳಿಗೆ ನಿರ್ದೇಶನ ನೀಡುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಕೇಂದ್ರವನ್ನು ಒತ್ತಾಯಿಸಿದ್ದಾರೆ.

ಪ್ರಸ್ತುತ ಸ್ಥಿತಿಯಲ್ಲಿ ಎಲ್ಲಾ ಲಸಿಕೆಗಳನ್ನು ಪಡೆಯಲು ಹಲವಾರು ತಿಂಗಳುಗಳೇ ತೆಗೆದುಕೊಳ್ಳಬಹುದು. ದಯವಿಟ್ಟು ಅಂತಹ ಎಲ್ಲಾ ಉತ್ಪಾದನಾ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುವ ಸಾಧ್ಯತೆಯನ್ನು ಅನ್ವೇಷಿಸಿ ಹಾಗೆ ಅವುಗಳನ್ನು ತಂತ್ರಜ್ಞಾನದೊಂದಿಗೆ ಸಕ್ರಿಯಗೊಳಿಸಿ, ಲಸಿಕೆಯನ್ನು ಸಾಧ್ಯವಾದಷ್ಟು ಬೇಗ ಮತ್ತು ಕೈಗೆಟುಕುವ ದರದಲ್ಲಿ ತಲುಪಿಸಲು ಕ್ರಮವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಲಸಿಕೆ ತಯಾರಿಸಲು ಅಥವಾ ತಯಾರಿಸಲು ಆಸಕ್ತಿ ಹೊಂದಿರುವ ಯಾರಾರಿಗಾದರೂ ಪ್ರೋತ್ಸಾಹಿಸಬೇಕು. ಸಂಪೂರ್ಣ ಉತ್ಪಾದನಾ ಸಾಮರ್ಥ್ಯವನ್ನು ಸಜ್ಜುಗೊಳಿಸಬೇಕು ಎಂದು ಜಗನ್ ಮನವಿ ಮಾಡಿದ್ದಾರೆ.

ಈ ಸಲಹೆಗಳಿಗೆ ಸ್ಪಂದಿಸಿದರೆ ಹಾಗೆ ಅದನ್ನು ಜಾರಿಗೆ ತಂದರೆ ತಯಾರಕರನ್ನು ಉತ್ತೇಜಿಸುವಲ್ಲಿ ಮತ್ತು ಲಸಿಕೆಗಳ ಪೂರೈಕೆಯನ್ನು ವೇಗಗೊಳಿಸಲು ಬಹಳ ಸುಲಭವಾಗುತ್ತದೆ. ಲಸಿಕೆ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ಅನುಕೂಲಕರ ಆದೇಶಗಳನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಜಗನ್ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.