ETV Bharat / bharat

ರಾಮೋಜಿ ಫಿಲ್ಮ್ ಸಿಟಿಗೆ ಮತ್ತೊಂದು ಗರಿ.. ತೆಲಂಗಾಣದ ಪ್ರವಾಸೋದ್ಯಮ ಪ್ರಶಸ್ತಿಗೆ ಭಾಜನ

author img

By

Published : Sep 26, 2021, 10:54 AM IST

ರಾಮೋಜಿ ಫಿಲ್ಮ್ ಸಿಟಿ ತೆಲಂಗಾಣ ರಾಜ್ಯ ಪ್ರವಾಸೋದ್ಯಮ- 2021ರ ಪ್ರಶಸ್ತಿಗೆ ಭಾಜನವಾಗಿದೆ. ಪ್ರವಾಸಿಗರಿಗಾಗಿ ಉತ್ತಮ ಸೇವೆ ನೀಡಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.

ರಾಮೋಜಿ ಫಿಲ್ಮ್ ಸಿಟಿ
ರಾಮೋಜಿ ಫಿಲ್ಮ್ ಸಿಟಿ

ಹೈದರಾಬಾದ್: ಪ್ರವಾಸಿಗರ ಸ್ವರ್ಗ ರಾಮೋಜಿ ಫಿಲ್ಮ್ ಸಿಟಿಗೆ ತೆಲಂಗಾಣ ರಾಜ್ಯ ಪ್ರವಾಸೋದ್ಯಮ- 2021ರ ಪ್ರಶಸ್ತಿ ಲಭಿಸಿದೆ. ಪ್ರವಾಸಿಗರಿಗಾಗಿ ಉತ್ತಮ ಸೇವೆ ನೀಡಿದ್ದಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಗೆ ‘ಪ್ರವಾಸಿಗರಿಗೆ ಉತ್ತಮ ನಾಗರಿಕ ಸೇವೆಗಳ ನಿರ್ವಹಣೆ’(Better Civil Services Management for Tourists) ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.

ಸೆಪ್ಟೆಂಬರ್​ 27ರಂದು(ನಾಳೆ) ವಿಶ್ವ ಪ್ರವಾಸ ದಿನಾಚರಣೆ ಹಿನ್ನೆಲೆ, ಸಂಜೆ ನಾಲ್ಕು ಗಂಟೆಗೆ ಹೈದರಾಬಾದ್​ನ ಬೇಗಂಪೇಟೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಉಳಿದಂತೆ ಫೈವ್​ ಸ್ಟಾರ್ ಹೋಟೆಲ್ ಡಿಲಕ್ಸ್ ವಿಭಾಗದಲ್ಲಿ ವೆಸ್ಟಿನ್ ಹೋಟೆಲ್, ಫೈವ್ ಸ್ಟಾರ್ ವಿಭಾಗದಲ್ಲಿ ಬಂಜಾರ ಹಿಲ್ಸ್ ಪಾರ್ಕ್​ ಹೈಯರ್ ಹೋಟೆಲ್​​, ನಗರದ ಹೊರ ವಲಯದಲ್ಲಿ ಗೋಲ್ಕೊಂಡ ರೆಸಾರ್ಟ್ ಪಂಚತಾರಾ ಹೋಟೆಲ್​ಗೆ ಪ್ರಶಸ್ತಿ ಸಿಕ್ಕಿದೆ.

ಫೋರ್​ಸ್ಟಾರ್​ ಹೋಟೆಲ್ ವಿಭಾಗದಲ್ಲಿ ಬಂಜಾರ ಹಿಲ್ಸ್​​ನ ದಸ್ಪಲ್ಲ ಹೋಟೆಲ್​ ಹಾಗೂ ಹೈದರಾಬಾದ್ ನಗರದ ಹೊರವಲಯದಲ್ಲಿ ಮೃಗವಾಣಿ ಹೋಟೆಲ್​ಗೆ ಪ್ರಶಸ್ತಿ ಲಭಿಸಿದೆ.

ತ್ರೀ ಸ್ಟಾರ್ ಹೋಟೆಲ್ ವಿಭಾಗದಲ್ಲಿ ಲಕ್ಡಿ ಕಾ ಪೂಲ್‌ನಲ್ಲಿರುವ ವೆಸ್ಟರ್ನ್ ಅಶೋಕ ಹೋಟೆಲ್‌ಗೆ ಪ್ರಶಸ್ತಿ ದೊರೆತಿದೆ. ನೊವಾಟೆಲ್ ಮತ್ತು HICC ಕಾಂಪ್ಲೆಕ್ಸ್ ಅನ್ನು ಅತ್ಯುತ್ತಮ ಕನ್ವೆನ್ಶನ್ ಸೆಂಟರ್‌ಗಳಾಗಿ ಆಯ್ಕೆ ಮಾಡಲಾಗಿದೆ.

ಹಸಿರು ಹೋಟೆಲ್ ವಿಭಾಗದಲ್ಲಿ ತಾರಾಮತಿ ಬರದಾರಿಗೆ ಮೊದಲ ಬಹುಮಾನ. ರಾಮಪ್ಪ ಹರಿತಾ ಹೋಟೆಲ್​ಗೆ ಎರಡನೇ ಬಹುಮಾನ ಮತ್ತು ಅಲಿಸಾಗರದ ಹರಿತಾ ಲೇಕ್ ವ್ಯೂ ರೆಸಾರ್ಟ್ ತೃತೀಯ ಬಹುಮಾನ ಪಡೆದಿವೆ. ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೆಲಸ ಮಾಡುವ ಪಾಲುದಾರರಿಗೆ ಒಟ್ಟು 16 ವಿಭಾಗಗಳಲ್ಲಿ 19 ಪ್ರಶಸ್ತಿಗಳನ್ನು ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.