ETV Bharat / bharat

ಅಲೋಪತಿ ವಿರುದ್ಧ ಹೇಳಿಕೆಗೆ ಸಾಲು-ಸಾಲು FIR : ಸುಪ್ರೀಂ ಮೊರೆ ಹೋದ ಬಾಬಾ ರಾಮ್‌ದೇವ್ - ಬಾಬಾ ರಾಮದೇವ್

ಅಲೋಪತಿ ಒಂದು ಅವಿವೇಕಿ ವಿಜ್ಞಾನ ಮತ್ತು ರೆಮ್ಡಿಸಿವಿರ್​, ಫ್ಯಾಬಿಫ್ಲೂ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದ ಔಷಧಿಗಳು ಕೊರೊನಾ ಸೋಂಕಿತರ ಆರೋಗ್ಯ ಉತ್ತಮಗೊಳಿಸಲು ವಿಫಲವಾಗಿವೆ ಎಂದು ರಾಮ್‌ದೇವ್ ವಿಡಿಯೋ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಐಎಂಎ, ಬಾಬಾಗೆ ನೋಟಿಸ್ ನೀಡಿತ್ತು..

ಸುಪ್ರೀಂ ಮೊರೆ ಹೋದ ಬಾಬಾ ರಾಮ್‌ದೇವ್
ಸುಪ್ರೀಂ ಮೊರೆ ಹೋದ ಬಾಬಾ ರಾಮ್‌ದೇವ್
author img

By

Published : Jun 23, 2021, 8:43 PM IST

ನವದೆಹಲಿ : ಕೋವಿಡ್ ಚಿಕಿತ್ಸೆಯಲ್ಲಿ ಅಲೋಪತಿಯ ಪರಿಣಾಮಕಾರಿತ್ವದ ಬಗ್ಗೆ ಟೀಕಿಸಿರುವ ಆರೋಪದ ಮೇಲೆ ವಿವಿಧ ರಾಜ್ಯಗಳಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಯನ್ನು ತಡೆ ಹಿಡಿಯಬೇಕೆಂದು ಕೋರಿ ಯೋಗ ಗುರು ರಾಮ್‌ದೇವ್ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪಾಟ್ನಾ ಮತ್ತು ರಾಯ್‌ಪುರ ಶಾಖೆಗಳು ದಾಖಲಿಸಿದ ಎಫ್‌ಐಆರ್‌ಗಳನ್ನು ದೆಹಲಿಗೆ ವರ್ಗಾಯಿಸಲು ರಾಮ್‌ದೇವ್ ಮನವಿ ಮಾಡಿದ್ದಾರೆ. ಅಲ್ಲದೇ ಎಫ್‌ಐಆರ್‌ಗಳ ಒಗ್ಗೂಡಿಸುವಿಕೆ, ಬಲವರ್ಧನೆ ಮತ್ತು ವಿಚಾರಣೆಯ ನಿಲುಗಡೆಗೆ ಕೋರಿದ್ದಾರೆ.

ರಾಮ್‌ದೇವ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 (ಸಾರ್ವಜನಿಕ ಸೇವಕರ ಸರಿಯಾದ ಆದೇಶಕ್ಕೆ ಅಸಹಕಾರ), 269 (ರೋಗದ ಸೋಂಕನ್ನು ಜೀವಕ್ಕೆ ಅಪಾಯಕಾರಿಯಾಗಿ ಹರಡುವ ಸಾಧ್ಯತೆ), 504 (ಶಾಂತಿ ಉಲ್ಲಂಘನೆ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ)ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ವಿಪತ್ತು ನಿರ್ವಹಣಾ ಕಾಯ್ದೆ 2005ರ ಇತರ ನಿಬಂಧನೆಗಳ ಅಡಿಯಲ್ಲಿ ಸಹ ಪ್ರಕರಣ ದಾಖಲಾಗಿದೆ.

ಅಲೋಪತಿ ಒಂದು ಅವಿವೇಕಿ ವಿಜ್ಞಾನ ಮತ್ತು ರೆಮ್ಡಿಸಿವಿರ್​, ಫ್ಯಾಬಿಫ್ಲೂ ಮತ್ತು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದಿಸಿದ ಔಷಧಿಗಳು ಕೊರೊನಾ ಸೋಂಕಿತರ ಆರೋಗ್ಯ ಉತ್ತಮಗೊಳಿಸಲು ವಿಫಲವಾಗಿವೆ ಎಂದು ರಾಮ್‌ದೇವ್ ವಿಡಿಯೋ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಐಎಂಎ, ಬಾಬಾಗೆ ನೋಟಿಸ್ ನೀಡಿತ್ತು.

ಓದಿ:ದಿನಕ್ಕೆ 5 ಕೋಟಿ ಆದಾಯ ಸಂಗ್ರಹಿಸುತ್ತಿದ್ದ BMTC 2 ದಿನದಲ್ಲಿ ಗಳಿಸಿದ್ದಿಷ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.