ETV Bharat / bharat

ತೆಲಂಗಾಣದಲ್ಲಿ ಉದ್ಯಮಿ ಕುಟುಂಬ ಆತ್ಮಹತ್ಯೆ ಪ್ರಕರಣ: TRS MLA ಪುತ್ರ ಅರೆಸ್ಟ್​​, 14 ದಿನ ನ್ಯಾಯಾಂಗ ಬಂಧನ - TRS MLA ಪುತ್ರನ ಅರೆಸ್ಟ್​​

Telangana MLA son Vanama Raghava arrested: ತೆಲಂಗಾಣದಲ್ಲಿ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಟಿಆರ್​​ಎಸ್​ ಶಾಸಕನ ಪುತ್ರನನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

MLA son Vanama Raghava arrested
MLA son Vanama Raghava arrested
author img

By

Published : Jan 8, 2022, 3:24 PM IST

ಭದ್ರಾದ್ರಿ ಕೊತ್ತಗುಡೇಂ(ತೆಲಂಗಾಣ): ಪಲ್ವಂಚದಲ್ಲಿ ಉದ್ಯಮಿ ರಾಮಕೃಷ್ಣ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಆರ್​ಎಸ್​ ಶಾಸಕ ವನಮಾ ವೆಂಕಟೇಶ್ವರ ರಾವ್​ ಅವರ ಪುತ್ರ ವನಮಾ ರಾಘವೇಂದ್ರ ಬಂಧನವಾಗಿದೆ. ಆತನಿಗೆ ಕೋರ್ಟ್​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಜನವರಿ 3ರಂದು ಉದ್ಯಮಿ ರಾಮಕೃಷ್ಣ, ಪತ್ನಿ ಹಾಗೂ ಇಬ್ಬರು ಮಕ್ಕಳು ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆಯಲ್ಲಿ ದಂಪತಿ ಸೇರಿದಂತೆ ಓರ್ವ ಮಗಳು ದುರ್ಮರಣಕ್ಕೀಡಾಗಿದ್ದಳು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು 8 ತಂಡ ರಚನೆ ಮಾಡಿ ತನಿಖೆ ಆರಂಭಿಸಿದಾಗ ಮಹತ್ವದ ಟ್ವಿಸ್ಟ್​ ಸಿಕ್ಕಿತು. ಪ್ರಕರಣದಲ್ಲಿ ಕೊತ್ತಗುಡೇಂ ಶಾಸಕ ವನಮಾ ವೆಂಕಟೇಶ್ವರರಾವ್​ ಅವರ ಪುತ್ರ ರಾಘವೇಂದ್ರನ ಕೈವಾಡವಿರುವುದು ಖಚಿತಗೊಳ್ಳುತ್ತಿದ್ದಂತೆ ಆತನ ವಿರುದ್ಧ ಎಫ್​ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಆತ ತಲೆಮರೆಸಿಕೊಂಡಿದ್ದ.

ಆರೋಪಿ ಬಂಧನಕ್ಕೆ 8 ತಂಡ ರಚನೆ

ಆರೋಪಿಯನ್ನು ಬಂಧಿಸಲು 8 ತಂಡ ರಚಿಸಿದ್ದ ಪೊಲೀಸರು ಶುಕ್ರವಾರ ರಾತ್ರಿ ತೆಲಂಗಾಣ ಮತ್ತು ಆಂಧ್ರ ಗಡಿಯಲ್ಲಿ ರಾಘವೇಂದ್ರನನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ವಿಚಾರಣೆಗೊಳಪಡಿಸಿದ್ದು, ಉದ್ಯಮಿ ಕುಟುಂಬಕ್ಕೆ ಬೆದರಿಕೆ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಎಎಸ್ಪಿ ರೋಹಿತ್ ರಾಜ್​​ ತಿಳಿಸಿದ್ದಾರೆ. ಇದಾದ ಬಳಿಕ ಕೊತ್ತಗುಡೇಂ ಮ್ಯಾಜಿಸ್ಟ್ರೇಟ್​ ಮುಂದೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆಂದು ಅವರು ತಿಳಿಸಿದ್ದಾರೆ. ಇದೀಗ ಭದ್ರಾಚಲಂ ಜೈಲಿಗೆ ಅವರನ್ನ ಕರೆದೊಯ್ಯಲಾಗಿದೆ. ರಾಘವೇಂದ್ರನ ಜೊತೆಗೆ ಆತನ ಬೆಂಬಲಿಗರಾದ ಗಿರೀಶ್​ ಹಾಗೂ ಕಾರು ಚಾಲಕ ಮುರುಳಿನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

MLA son Vanama Raghava arrested
TRS MLA ಪುತ್ರ ರಾಘವೇಂದ್ರನ ಬಂಧನ

ಇದನ್ನೂ ಓದಿರಿ: ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​..ಆರೋಪಿ ಶಾಸಕನ ಮಗ ಪರಾರಿ!

ಎಎಸ್ಪಿ ರೋಹಿತ್​ ರಾಜ್​ ಮಾಹಿತಿ ನೀಡಿರುವ ಪ್ರಕಾರ, ರಾಮಕೃಷ್ಣ ಕುಟುಂಬದ ಆತ್ಮಹತ್ಯೆ ಕೇಸ್​​ನಲ್ಲಿ ಆರೋಪಿ ನಂಬರ್​ 2 ಆಗಿರುವ ರಾಘವೇಂದ್ರನನ್ನ ಬಂಧಿಸಲಾಗಿದ್ದು, ಆತನನ್ನ ವಿಚಾರಣೆಗೊಳಪಡಿಸಿದ್ದೇವೆ. ಖಾಕಿ ಪಡೆಯಿಂದ ತಪ್ಪಿಸಿಕೊಳ್ಳಲು ಆತ ಶ್ರೀನಿವಾಸ್​​ ಮತ್ತು ರಮಾಕಾಂತ್​ ಎಂಬುವರ ಸಹಾಯ ಪಡೆದುಕೊಂಡಿದ್ದಾನೆ. ಬಂಧಿತನ ವಿರುದ್ಧ ಒಟ್ಟು 12 ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಎಸ್ಪಿ ತಿಳಿಸಿದ್ದಾರೆ.

  • TRS Kothagudem MLA Vanama Venkateshwar Rao’s son Vanama Raghavendra Rao (the person in blue lining t-shirt) was arrested in abetment to suicide case by Kothagudem police. pic.twitter.com/dXeRFyyUkl

    — ANI (@ANI) January 8, 2022 " class="align-text-top noRightClick twitterSection" data=" ">

ಪಲ್ವಂಚದಲ್ಲಿ ವಾಸವಾಗಿದ್ದ ರಾಮಕೃಷ್ಣ ಹಾಗೂ ಶ್ರೀಲಕ್ಷ್ಮೀ ದಂಪತಿಗೆ ಸಾಹಿತ್ಯಾ ಮತ್ತು ಸಾಹಿತಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಮಕೃಷ್ಣ ಪಲ್ವಂಚದಲ್ಲಿ ಸೇನಾ ಕೇಂದ್ರ ಇಟ್ಟುಕೊಂಡಿದ್ದರು. ಆದರೆ, ಕಳೆದ ಕೆಲ ದಿನಗಳ ಹಿಂದೆ ಅಂಗಡಿ ಗುತ್ತಿಗೆಗೆ ನೀಡಿ, ಕುಟುಂಬ ಸಮೇತವಾಗಿ ರಾಜಮಹಂದ್ರವರಂಗೆ ತೆರಳಿದ್ದಾರೆ. 25 ದಿನಗಳ ಹಿಂದೆ ಪಲ್ವಂಚಕ್ಕೆ ವಾಪಸ್​​ ಆಗಿದ್ದ ಕುಟುಂಬ ಮನೆಯಲ್ಲಿ ಪೆಟ್ರೋಲ್​​ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿತ್ತು. ಘಟನೆಯಲ್ಲಿ ದಂಪತಿ ಹಾಗೂ ಮಗಳು ಸಾಹಿತಿ ಸಾವನ್ನಪ್ಪಿದ್ದು, ಗಾಯಗೊಂಡಿರುವ ಸಾಹಿತ್ಯಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.

ಈ ಘಟನೆ ಆಕಸ್ಮಿಕವಾಗಿ ನಡೆದಿದೆ ಎಂದು ಪ್ರಾಥಮಿಕವಾಗಿ ಮಾಹಿತಿ ಬಂದಿದ್ದರೂ, ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಮೇರೆಗೆ ಇದೊಂದು ಆತ್ಮಹತ್ಯೆ ಎಂದು ಭಾವಿಸಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸ್​ ತಂಡ ರಾಮಕೃಷ್ಣ ಅವರ ಕಾರಿನಲ್ಲಿ ಕೆಲವು ಪ್ರಮುಖ ದಾಖಲೆಗಳು ಮತ್ತು ಬಿಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಎಂಎಲ್​ಎ ಮಗ ರಾಘವೇಂದ್ರ ಮೇಲೆ ಅನುಮಾನ ಮೂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಜಾಲ ಬೀಸಿದ್ದರು.

ಡೆತ್​ನೋಟ್​ನಲ್ಲಿ ಏನಿದೆ? ಘಟನಾ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿತ್ತು. ಆತ್ಮಹತ್ಯೆ ಪತ್ರದಲ್ಲಿ ಶಾಸಕ ವನಮಾ ಅವರ ಪುತ್ರ ರಾಘವೇಂದ್ರ ಅವರ ಹೆಸರಿತ್ತು. ಅವರ ಜೊತೆಗೆ ರಾಮಕೃಷ್ಣ ಅವರ ತಾಯಿ ಸೂರ್ಯಾವತಿ ಮತ್ತು ಅಕ್ಕ ಮಾಧವಿ ಅವರ ಹೆಸರುಗಳಿವೆ. ರಾಮಕೃಷ್ಣ ಅವರ ಅಕ್ಕ ಮಾಧವಿಯೊಂದಿಗೆ ರಾಘವೇಂದ್ರ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ರಾಮಕೃಷ್ಣ ಆತ್ಮಹತ್ಯೆ ಪತ್ರದಲ್ಲಿ ತಿಳಿಸಿದ್ದನು. ಇದರ ಬೆನ್ನಲ್ಲೇ ಆತನ ಬಂಧನಕ್ಕೆ ಬಲೆ ಬೀಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.