ETV Bharat / bharat

ರಾಮಮಂದಿರ ನಿರ್ಮಾಣ ಸಮಿತಿ ಪ್ರಗತಿ ವರದಿ ಮಂಡನೆ: ಗಡುವಿನೊಳಗೆ ಕೆಲಸ ಪೂರ್ಣ ಸಾಧ್ಯತೆ

ರಾಮಮಂದಿರ ನಿರ್ಮಾಣ ಸಮಿತಿ ಪ್ರಸ್ತುತಪಡಿಸಿದ ಪ್ರಗತಿ ವರದಿಯ ಪ್ರಕಾರ, 2023 ರ ಅಂತ್ಯದ ವೇಳೆಗೆ ದೇವಾಲಯ ನಿರ್ಮಾಣ ಕಾರ್ಯ ಮುಗಿಯುವ ಸಾಧ್ಯತೆಯಿದೆ. ಒಟ್ಟು 8 ರಿಂದ 9 ಲಕ್ಷ ಘನ ಅಡಿಗಳಷ್ಟು ಕೆತ್ತಿದ ಮರಳುಗಲ್ಲುಗಳನ್ನು ಪಾರ್ಕೋಟಾ ನಿರ್ಮಿಸಲು, 6.37 ಲಕ್ಷ ಘನ ಅಡಿ ಕೆತ್ತಿದ ಗ್ರಾನೈಟ್​ ಅನ್ನು ಸ್ತಂಭಕ್ಕೆ ಮತ್ತು ಸುಮಾರು 4.70 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಗುಲಾಬಿ ಕಲ್ಲನ್ನು ದೇವಾಲಯಕ್ಕೆ ಬಳಸಲಾಗುವುದು ಎಂದು ತಿಳಿದು ಬಂದಿದೆ.

ರಾಮ ಮಂದಿರ
ರಾಮ ಮಂದಿರ
author img

By

Published : May 24, 2022, 3:50 PM IST

ಅಯೋಧ್ಯೆ: ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ ಪ್ರಮಾಣದಲ್ಲಿ ಪ್ರಗತಿಯಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿ ನೋಡಿಕೊಳ್ಳಲು ರಚಿಸಲಾದ ಸಮಿತಿಯು ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು ಎಂದಿದೆ. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 2023ರ ಅಂತ್ಯದ ವೇಳೆಗೆ ಯೋಜನೆ ಪೂರ್ಣಗೊಳಿಸಲು ಗಡುವು ನಿಗದಿಪಡಿಸಿದೆ. ಮಂಗಳವಾರ ನಿರ್ಮಾಣ ಸಮಿತಿಯು ಪ್ರಸ್ತುತಪಡಿಸಿದ ಪ್ರಗತಿ ವರದಿಯ ಪ್ರಕಾರ, ಈ ಗುರಿಯನ್ನು ತಲುಪುವ ಸಾಧ್ಯತೆಯಿದೆ.

ಐಎಎಸ್ ನಿರ್ಪೇಂದ್ರ ಮಿಶ್ರಾ ನೇತೃತ್ವದ ನಿರ್ಮಾಣ ಸಮಿತಿ ಸೋಮವಾರ ಇತ್ತೀಚಿನ ಪ್ರಗತಿ ವರದಿಯನ್ನು ಮಂಡಿಸಿದ್ದು, ಅದರ ಪ್ರಕಾರ ಮಂದಿರ ನಿರ್ಮಾಣವು ಸ್ತಂಭ ಹಂತಕ್ಕೆ ತಲುಪಿದೆ. ಜನವರಿ 24, 2022 ರಂದು ಪೀಠ ಎತ್ತರಿಸುವ ಕೆಲಸ ಪ್ರಾರಂಭವಾಗಿದ್ದು, ಅದು ಇನ್ನೂ ಪ್ರಗತಿಯಲ್ಲಿದೆ. ತೆಪ್ಪದ ಮೇಲ್ಭಾಗದಿಂದ 6.5 ಮೀಟರ್ ಎತ್ತರಕ್ಕೆ ಸ್ತಂಭ ಎತ್ತಲಾಗುವುದು. ಕರ್ನಾಟಕ ಮತ್ತು ತೆಲಂಗಾಣದಿಂದ ತರಿಸಿರುವ ಗ್ರಾನೈಟ್ ಕಲ್ಲಿನ ಬ್ಲಾಕ್​ಗಳನ್ನು ಬಳಸಲಾಗುತ್ತಿದೆ. 5×2.5×3 ಅಡಿ (LBH) ಗಾತ್ರದ ಸುಮಾರು 17,000 ಗ್ರಾನೈಟ್ ಬ್ಲಾಕ್‌ಗಳನ್ನು ಈ ಕೆಲಸ ಪೂರ್ಣಗೊಳಿಸಲು ಬಳಸಲಾಗುವುದು. ಇದು ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಪ್ರಗತಿ ವರದಿ ಹೇಳಿದೆ.

ಕಲ್ಲುಗಳ ಅಳವಡಿಕೆ ಶುರು: ಕೆತ್ತಿದ ಕಲ್ಲುಗಳ ಅಳವಡಿಕೆ ಪ್ರಾರಂಭವಾಗಲಿದ್ದು, ಸ್ತಂಭದ ನಿರ್ಮಾಣ ಮತ್ತು ಕೆತ್ತಿದ ಕಲ್ಲುಗಳ ಸ್ಥಾಪನೆ ಎರಡೂ ಏಕಕಾಲದಲ್ಲಿ ನಡೆಯಲಿದೆ. ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಬಂಸಿ - ಪಹಾರ್‌ಪುರ ಪ್ರದೇಶದ ಬೆಟ್ಟಗಳ ಗುಲಾಬಿ ಮರಳುಗಲ್ಲುಗಳನ್ನು ದೇವಾಲಯದ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ರಾಜಸ್ಥಾನದ ಸಿರೋಹಿ ಜಿಲ್ಲೆಯ ಪಿಂಡ್ವಾರಾ ಪಟ್ಟಣದಲ್ಲಿರುವ ಕಡು ಬಯಕೆ ತಾಣದಿಂದ ಕಲ್ಲುಗಳನ್ನು ಈಗಾಗಲೇ ತರಿಸಲಾಗುತ್ತಿದೆ. ರಾಜಸ್ಥಾನದ ಜಗತ್ಪ್ರಸಿದ್ಧ ಮಕ್ರಾನಾ ಬೆಟ್ಟಗಳ ಬಿಳಿ ಮಾರ್ಬಲ್‌ಗಳನ್ನು ಗರ್ಭಗೃಹದ ಒಳಭಾಗಕ್ಕೆ ಬಳಸಲು ಯೋಜಿಸಲಾಗಿದೆ. ಕೆತ್ತನೆ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು, ಕೆಲವು ಕೆತ್ತನೆಯ ಕಲ್ಲುಗಳು ಈಗಾಗಲೇ ಅಯೋಧ್ಯೆಯನ್ನೂ ತಲುಪಿವೆ.

ಇದನ್ನೂ ಓದಿ: 'Proud of you Bhagwant' : ಪಂಜಾಬ್ ಆರೋಗ್ಯ​ ಸಚಿವರ ಬಂಧನದ ಬೆನ್ನಲ್ಲೇ ಕೇಜ್ರಿವಾಲ್​ ಮೆಚ್ಚುಗೆ!

ಅಯೋಧ್ಯೆ ರಾಮಮಂದಿರ ನಿರ್ಮಾಣದ ಪ್ರಗತಿ ವರದಿಯ ಪ್ರಕಾರ, ಒಟ್ಟು 8 ರಿಂದ 9 ಲಕ್ಷ ಘನ ಅಡಿಗಳಷ್ಟು ಕೆತ್ತಿದ ಮರಳುಗಲ್ಲುಗಳನ್ನು ಪಾರ್ಕೋಟಾ ನಿರ್ಮಿಸಲು, 6.37 ಲಕ್ಷ ಘನ ಅಡಿ ಕೆತ್ತಿದ ಗ್ರಾನೈಟ್​ನನ್ನು ಸ್ತಂಭಕ್ಕೆ ಮತ್ತು ಸುಮಾರು 4.70 ಲಕ್ಷ ಕ್ಯೂಬಿಕ್ ಅಡಿ ಕೆತ್ತಿದ ಗುಲಾಬಿ ಕಲ್ಲನ್ನು ದೇವಾಲಯಕ್ಕೆ ಬಳಸಲಾಗುವುದು.

ಗರ್ಭಗುಡಿಯ ನಿರ್ಮಾಣಕ್ಕೆ ಸುಮಾರು 13,300 ಘನ ಅಡಿ ಕೆತ್ತಿದ ಬಿಳಿ ಮಕ್ರಾನ ಅಮೃತಶಿಲೆ ಮತ್ತು 95,300 ಚದರ ಅಡಿ ನೆಲಹಾಸು ಮತ್ತು ಹೊದಿಕೆಗೆ ಬಳಸಲಾಗುವುದು. ನಿರ್ಮಾಣ ಸಮಿತಿಯ ಸಭೆಯನ್ನು ಪ್ರತಿ ತಿಂಗಳು ನಡೆಸಲಾಗುತ್ತದೆ. ಅಲ್ಲಿ ಅತ್ಯಂತ ನಿಖರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಪ್ರಗತಿಯಲ್ಲಿರುವ ಪ್ರತಿಯೊಂದು ಕೆಲಸದ ವಿವರಗಳ ಬಗ್ಗೆ ಚರ್ಚಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.