ETV Bharat / bharat

ದೀದಿ ನಾಡಲ್ಲಿ ಗದ್ದುಗೆ ಗುದ್ದಾಟ: ಮಮತಾ ವಿರುದ್ಧ ಯುಪಿ ಸಿಎಂ ಮತ ಸಮರ

author img

By

Published : Mar 2, 2021, 3:57 PM IST

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪಶ್ಚಿಮ ಬಂಗಾಳದಲ್ಲಿ ಮತಬೇಟೆ ನಡೆಸಿದರು.

UP CM Yogi Adityanath
UP CM Yogi Adityanath

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಮುಖಂಡರು ಅಬ್ಬರದ ಪ್ರಚಾರ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂದು ಯೋಗಿ ಆದಿತ್ಯನಾಥ್ ಮಾಲ್ಡಾದಲ್ಲಿ​ ಮತ ಪ್ರಚಾರ ನಡೆಸಿದರು.

ಮಾಲ್ಡಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿಎಂ ಯೋಗಿ ಭಾಷಣ

ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಪಶ್ಚಿಮ ಬಂಗಾಳ ಭಾರತದ ರಾಷ್ಟ್ರೀಯತೆಯ ನೆಲ. ಭಾರತದ ಸ್ವಾತಂತ್ರ್ಯ ಹೋರಾಟದ ನೆಲ. ಆದರಿಂದು ಅರಾಜಕತೆಯ ವಾತಾವರಣ ನಿರ್ಮಾಣಗೊಂಡಿದೆ. ಈ ಬೆಳವಣಿಗೆ ಇಡೀ ದೇಶವನ್ನು ನೋಯಿಸುತ್ತಿದೆ. ಪಶ್ಚಿಮ ಬಂಗಾಳವನ್ನು ಹೊಸದಾಗಿ ಸ್ಥಾಪಿಸಿ, ಬದಲಾವಣೆ ತರಲು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಇಲ್ಲಿನ ಜನರ ಮೇಲಿದೆ ಎಂದರು.

ಇದನ್ನೂ ಓದಿ: ಕೋವಿಡ್​ ಲಸಿಕೆ ಹಾಕಿಸಿಕೊಂಡ ಕಮಲ್ ಹಾಸನ್.. ನಾಳೆಯಿಂದ ಪ್ರಚಾರದಲ್ಲಿ ಭಾಗಿ

ಪ.ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ನಿಷೇಧಿಸಲಾಗಿದೆ. ಈದ್​ ಸಮಯದಲ್ಲಿ ಗೋಹತ್ಯೆ ಮಾಡಲಾಗುತ್ತದೆ. ಹಸು ಕಳ್ಳಸಾಗಣೆ ಮೂಲಕ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಘಟನಾವಳಿಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಮೌನವಾಗಿದೆ. ಆದರೀಗ ರಾಜ್ಯದಲ್ಲಿ ಜೈಶ್ರೀ ರಾಮ್ ಘೋಷಣೆ ನಿಷೇಧಿಸಲು ಮಮತಾ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಯೋಗಿ ಗುಡುಗಿದರು.

ಲವ್​ ಜಿಹಾದ್​, ಹಸುಗಳ ಅಕ್ರಮ ಸಾಗಣೆ ತಡೆ ಕಾಯ್ದೆ ಈಗಲೂ ಪಶ್ಚಿಮ ಬಂಗಾಳದಲ್ಲಿ ಜಾರಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಇದರಿಂದ ರಾಜ್ಯಕ್ಕೆ ಅಪಾಯವಿದೆ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಆಡಳಿತ ನಡೆಸುತ್ತಿದ್ದ ಸರ್ಕಾರದ ಪರಿಸ್ಥಿತಿ ಈಗ ಏನಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಎಚ್ಚರಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.