ಆಗ್ರಾ (ಉತ್ತರ ಪ್ರದೇಶ): ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಅವರು ನಾಳೆ ಉತ್ತರ ಪ್ರದೇಶದ ಆಗ್ರಾದಲ್ಲಿ ಕಿಸಾನ್ ಮಹಾ ಪಂಚಾಯತ್ ಉದ್ದೇಶಿಸಿ ಮಾತನಾಡಲಿದ್ದಾರೆ.
ಫೆ.24ರಂದು ಆಗ್ರಾದ ಮೌನಿ ಬಾಬಾ ಆಶ್ರಮದಲ್ಲಿ ಕಿಸಾನ್ ಮಹಾ ಪಂಚಾಯತ್ ಆಯೋಜನೆಯಾಗಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗೆ ರೈತರನ್ನು ಮತ್ತಷ್ಟು ಒಗ್ಗೂಡಿಸಲು ರಾಕೇಶ್ ಟಿಕಾಯತ್ ಹಲವೆಡೆ ಕಿಸಾನ್ ಮಹಾ ಪಂಚಾಯತ್ ನಡೆಸುತ್ತಾ ಬರುತ್ತಿದ್ದು, ನಾಳೆ ಆಗ್ರಾದಲ್ಲಿ ಅನ್ನದಾತರೊಂದಿಗೆ ಸಂವಾದ ನಡೆಸಲಿದ್ದಾರೆ.
ಇದನ್ನೂ ಓದಿ: ಕೆಂಪು ಕೋಟೆ ಹಿಂಸಾಚಾರ: ರೈತ ಮುಖಂಡ ಸೇರಿ ಇಬ್ಬರು 'ಸಂಚುಕೋರರು' ಅರೆಸ್ಟ್
ನಾವು ಕೃಷಿ ಕಾನೂನುಗಳ ಸಂಬಂಧ ಅನೇಕ ಸಭೆಗಳನ್ನು ನಡೆಸಿದ್ದು, ದೆಹಲಿಯ ರೈತ ಚಳುವಳಿಯನ್ನು ಮುನ್ನಡೆಸುತ್ತಿರುವ ರಾಕೇಶ್ ಟಿಕಾಯತ್ರನ್ನು ಕರೆಸುವಂತೆ ಜನರು ಒತ್ತಾಯಿಸಿದ್ದಾರೆ. ಅವರು ದೇಶದ ಪ್ರತಿಯೊಬ್ಬ ರೈತನನ್ನು ಪ್ರತಿನಿಧಿಸುವ ವ್ಯಕ್ತಿ. ರೈತರು, ಕಾರ್ಮಿಕರು ಎರಡು ಗಂಟೆಗಳ ಕಾಲ ತಮ್ಮ ಕೆಲಸವನ್ನು ಬಿಟ್ಟು ಮಹಾ ಪಂಚಾಯತ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಗ್ರಾದ ಬಿಕೆಯು ಜಿಲ್ಲಾಧ್ಯಕ್ಷ ರಾಜ್ವೀರ್ ಸಿಂಗ್ ಹೇಳಿದ್ದಾರೆ.