ಗಾಜಿಯಾಬಾದ್ (ಉತ್ತರ ಪ್ರದೇಶ): ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಅನಿರ್ದಿಷ್ಟ ಅವಧಿಯವರೆಗೆ ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಹೊಸದಾಗಿ ಜಾರಿಗೆ ಬಂದಿರುವ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸದ ಹೊರತು ನಮ್ಮ ರೈತರ ಚಳವಳಿ ಅಂತ್ಯಗೊಳ್ಳುವುದಿಲ್ಲ. ಬಹುಶಃ ಅಕ್ಟೋಬರ್ವರೆಗೆ ಪ್ರತಿಭಟನೆ ಮುಂದುವರಿಯಬಹುದು ಎಂದು ಈ ಹಿಂದೆ ಟಿಕಾಯತ್ ಹೇಳಿದ್ದರು. ಆದರೆ, ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಧರಣಿ ಅನಿರ್ದಿಷ್ಟ ಅವಧಿಯವರೆಗೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೃಷಿ ಕಾನೂನು ಹಿಂತೆಗೆದುಕೊಳ್ಳಿ, ಆಗ ರೈತರೇ ನಿಮ್ಮೊಂದಿಗೆ ಮಾತಾಡುತ್ತಾರೆ: ಮೋದಿಗೆ ರಾಗಾ ಟಾಂಗ್
ಇನ್ನು ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಾಜಿಪುರ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದಾರೆ. 2018 ರ ಅಕ್ಟೋಬರ್ 2 ರಂದು ಅನ್ನದಾತರ ಮೇಲೆ ಅಶ್ರುವಾಯು ಪ್ರಯೋಗಿಸಿ, ಗುಂಡು ಹಾರಿಸಲಾಗಿತ್ತು. ಇದರ ವಿರುದ್ಧ ಪ್ರತಿವರ್ಷವೂ ಗಾಜಿಪುರ ಗಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಟಿಕಾಯತ್ ತಿಳಿಸಿದರು.